ಬುಧವಾರ, 04 ಮಾರ್ಚ್ 2020
5:30 ಪೂರ್ವಾಹ್ನ
Daily PDF
ವಾರ್ಷಿಕ ಮಹಿಳಾ ಹಕ್ಕು ಸಭೆ ಅವಧಿ ಮೊಟಕುಗೊಳಿಸಿದ ವಿಶ್ವಸಂಸ್ಥೆ
Authored by:
Basavaraj Halli
ಸಾಮಾನ್ಯವಾಗಿ ಎರಡು ವಾರಗಳ ಕಾಲ ನಡೆಯುವ ವಾರ್ಷಿಕ ಮಹಿಳಾ ಹಕ್ಕು ಸಭೆಯನ್ನು ಒಂದು ದಿನಕ್ಕೆ ಮಿತಗೊಳಿಸಲು ಮಹಿಳಾ ಸ್ಥಿತಿಗತಿ ಕುರಿತ ವಿಶ್ವಸಂಸ್ಥೆಯ ಆಯೋಗ ಸಿಎಸ್ ಡಬ್ಲ್ಯು(CSW) ನಿರ್ಧರಿಸಿದೆ.
ಇದಕ್ಕೆ ಮುಖ್ಯ ಕಾರಣವೆಂದರೆ ಇಡೀ ವಿಶ್ವವನ್ನೇ ಕಾಡುತ್ತಿರುವ ಮಾರಣಾಂತಿಕ ವೈರಸ್ ಕರೋನಾ (Covid-19). ಮಾ 9 ರಿಂದ 20 ರವರೆಗೆ ನಡೆಯಬೇಕಿದ್ದ ಸಭೆಯನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗ್ಯುಟೆರಸ್ ಸಲಹೆಯ ಮೇರೆಗೆ ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.