➤ ಜಪಾನ್ನ ಯೊಕೊಸುಕಾ ನೌಕಾ ನೆಲೆ ಹಾಗೂ ಫುನಕೋಶಿಯಲ್ಲಿ ನವೆಂಬರ್ 5, 2026 ರಿಂದ ಆರಂಭವಾಗಿರುವ ‘ಮಲಬಾರ್ 2026’ ಬಹುಪಕ್ಷೀಯ ನೌಕಾ ಯುದ್ಧಭ್ಯಾಸದಲ್ಲಿ ಕ್ವಾಡ್ (QUAD) ಒಕ್ಕೂಟದ ರಾಷ್ಟ್ರಗಳಾದ ಭಾರತ, ಜಪಾನ್, ಅಮೆರಿಕ ಮತ್ತು ಆಸ್ಟ್ರೇಲಿಯಾಗಳು ಭಾಗವಹಿಸುತ್ತಿದ್ದು, ಭಾರತೀಯ ನೌಕಾಪಡೆಯ ಸ್ವದೇಶಿ ನಿರ್ಮಿತ ಗೈಡೆಡ್-ಮಿಸೈಲ್ ಸ್ಟೆಲ್ತ್ ಫ್ರಿಗೇಟ್ ಯುದ್ಧನೌಕೆ 'INS ಸಹ್ಯಾದ್ರಿ' ಭಾರತವನ್ನು ಪ್ರತಿನಿಧಿಸುತ್ತಿದೆ.
➤ ‘INS ಸಹ್ಯಾದ್ರಿ’ ನೌಕೆ: ಭಾರತೀಯ ನೌಕಾಪಡೆಯ ಪೂರ್ವ ನೌಕಾ ಪಡೆಯ ಭಾಗವಾಗಿರುವ INS ಸಹ್ಯಾದ್ರಿ ಯುದ್ಧನೌಕೆಯು ನವೆಂಬರ್ 4, 2026 ರಂದು ಜಪಾನ್ನ ಯೊಕೊಸುಕಾ ನೌಕಾ ನೆಲೆಗೆ ತಲುಪಿತು. ಜಪಾನ್ ಮ್ಯಾರಿಟೈಮ್ ಸೆಲ್ಫ್-ಡಿಫೆನ್ಸ್ ಫೋರ್ಸ್ (JMSDF) ವತಿಯಿಂದ ಈ ನೌಕೆಗೆ ಅತ್ಯುತ್ಸಾಹದ ಸ್ವಾಗತ ಕೋರಲಾಯಿತು. ಇದು ಭಾರತ ಮತ್ತು ಜಪಾನ್ ನಡುವಿನ ಬಲವಾದ ಸಾಮರಿಕ ಪಾಲುದಾರಿಕೆಯನ್ನು ಬಿಂಬಿಸುತ್ತದೆ.
➤ ಮಲಬಾರ್ ಯುದ್ಧಭ್ಯಾಸದ ಎರಡು ಹಂತಗಳು:
1. ಹಾರ್ಬರ್ ಹಂತ (Harbour Phase): ಇದರಲ್ಲಿ ನೌಕಾ ಸಿಬ್ಬಂದಿಗಳ ನಡುವೆ ವೃತ್ತಿಪರ ಚರ್ಚೆಗಳು, ಕಾರ್ಯತಂತ್ರದ ಯೋಜನೆಗಳು (Operational Planning) ಮತ್ತು ಸಮುದ್ರ ತಂತ್ರಜ್ಞಾನದ ಕುರಿತು ಜ್ಞಾನ ವಿನಿಮಯ ನಡೆಯಲಿದೆ.
2. ಸಮುದ್ರ ಹಂತ (Sea Phase): ಈ ಹಂತದಲ್ಲಿ INS ಸಹ್ಯಾದ್ರಿ ಹಾಗೂ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳ ನೌಕಾಪಡೆಯ ಹಡಗುಗಳು ಒಟ್ಟಾಗಿ ಮೇಲ್ಮೈ, ನೀರೊಳಗಿನ ಯುದ್ಧತಂತ್ರಗಳು, ವಾಯು ಮತ್ತು ಮಾಹಿತಿ ಡೊಮೇನ್ಗಳಲ್ಲಿ ಜಂಟಿ ಕಾಯ್ವಾಚನೆ ನಡೆಸಲಿವೆ.
➤ ಮಲಬಾರ್ ಅಭ್ಯಾಸದ ಹಿನ್ನೆಲೆ (History of Malabar Exercise)
- ಆರಂಭ: ಮಲಬಾರ್ ಯುದ್ಧಭ್ಯಾಸವು ಮೊದಲು 1992ರಲ್ಲಿ ಭಾರತೀಯ ನೌಕಾಪಡೆ ಮತ್ತು ಅಮೆರಿಕದ ನೌಕಾಪಡೆಯ ನಡುವಿನದ್ವಿಪಕ್ಷೀಯ ಕವಾಯತ್ತಾಗಿ ಹಿಂದೂ ಮಹಾಸಾಗರದಲ್ಲಿ ಪ್ರಾರಂಭವಾಗಿತ್ತು.
- ಜಪಾನ್ ಸೇರ್ಪಡೆ: 2015ರಲ್ಲಿ ಜಪಾನ್ ಈ ಒಪ್ಪಂದದ ಕಾಯಂ ಸದಸ್ಯ ರಾಷ್ಟ್ರವಾಯಿತು.
- ಆಸ್ಟ್ರೇಲಿಯಾ ಸೇರ್ಪಡೆ: 2020ರಲ್ಲಿ ಆಸ್ಟ್ರೇಲಿಯಾ ಅಧಿಕೃತವಾಗಿ ಸೇರ್ಪಡೆಗೊಂಡ ಬಳಿಕ, ಇದು 'ಕ್ವಾಡ್' (QUAD) ರಾಷ್ಟ್ರಗಳ ನಾಲ್ಕು ದೇಶಗಳ ಒಕ್ಕೂಟದ ವಾರ್ಷಿಕ ಬಹುಪಕ್ಷೀಯ ನೌಕಾ ಕ್ಯಾಯತ್ತಾಗಿ ರೂಪುಗೊಂಡಿತು.
➤ ಭಾರತದ ‘ಮಹಾಸಾಗರ’ (MAHASAGAR) ದೃಷ್ಟಿಕೋನ: ಮಲಬಾರ್ 2026 ರಲ್ಲಿ ಭಾರತದ ಸಕ್ರಿಯ ಪಾಲ್ಗೊಳ್ಳುವಿಕೆಯು ಭಾರತ ಸರ್ಕಾರದ 'MAHASAGAR' (Mutual and Holistic Advancement for Security and Growth Across Regions - ವಲಯದಲ್ಲಿ ಭದ್ರತೆ ಮತ್ತು ಎಲ್ಲರ ಒಟ್ಟI ಬೆಳವಣಿಗೆಗಾಗಿ ಪರಸ್ಪರ ಮತ್ತು ಸಮಗ್ರ ಅಭಿವೃದ್ಧಿ) ಎನ್ನುವ ಆತ್ಯಯಿಕ ದೃಷ್ಟಿಕೋನಕ್ಕೆ ಬದ್ಧವಾಗಿದೆ. ಇಂಡೋ-ಪೆಸಿಫಿಕ್ (Indo-Pacific) ವಲಯದಲ್ಲಿ ಶಾಂತಿ, ಸ್ಥಿರತೆ, ಮುಕ್ತ ಸಂಚಾರದ ಸ್ವಾತಂತ್ರ್ಯ ಹಾಗೂ ಕಾನೂನಿನ ಆಡಳಿತವನ್ನು ಕಾಪಾಡಿಕೊಳ್ಳಲು ಈ ಸಮರಾಭ್ಯಾಸವು ಸಹಕಾರಿಯಾಗಿದೆ.
ಮಲಬಾರ್ ನೌಕಾ ಅಭ್ಯಾಸ 2026: ಜಪಾನ್ನಲ್ಲಿ ಭಾರತ, ಆಸ್ಟ್ರೇಲಿಯಾ, ಅಮೆರಿಕ ಮತ್ತು ಜಪಾನ್ ನಡುವೆ ಮಹತ್ವದ ಸಮರಾಭ್ಯಾಸ ಆರಂಭ
Published by Heena Sheregar
16 minutes ago