ಬುಧವಾರ, 04 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಕಾರವಾರದಲ್ಲಿ "ಟ್ಯುಪೊಲೆವ್' ಮ್ಯೂಸಿಯಂ : ಒಪ್ಪಂದಕ್ಕೆ ಸಹಿ ಹಾಕಿದ ಅಧಿಕಾರಿಗಳು
Authored by:
Basavaraj Halli
ಕಾರವಾರ : ಭಾರತೀಯ ನೌಕಾಪಡೆಗೆ ತನ್ನ ಅಮೂಲ್ಯ ಸೇವೆ ನೀಡಿ ಪ್ರಸ್ತುತ ನೌಕಾಪಡೆಯ ಕಾರ್ಯಾಚರಣೆಗಳಿಂದ ನಿವೃತ್ತಿ ಹೊಂದಿರುವ ಟ್ಯುಪೊಲೆವ್-142-ಎಂ ಯುದ್ಧ ವಿಮಾನದ ಮ್ಯೂಸಿಯಂ ಆರಂಭಿಸಲು ಅಡ್ಮಿರಲ್ ಮಹೇಶ್‌ಸಿಂಗ್ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ಹರೀಶ ಕುಮಾರ್ ಅವರು ಮಂಗಳವಾರ ಸಹಿ ಮಾಡಿ, ವಿನಿಮಯ ಮಾಡಿಕೊಂಡರು.
ಈ ಯುದ್ಧ ವಿಮಾನದ ಬಿಡಿ ಭಾಗಗಳನ್ನು ನಗರಕ್ಕೆ ತಂದು, ರವೀಂದ್ರನಾಥ ಟ್ಯಾಗೋರ್ ಕಡಲತೀರದ ಚಾಪೆಲ್ ಯುದ್ಧನೌಕೆ ವಸ್ತು ಸಂಗ್ರಹಾಲಯದ ಬಳಿ ಜೋಡಿಸಿ ಕೊಡುವ ಒಪ್ಪಂದ ಪತ್ರಕ್ಕೆ ನೌಕಾಪಡೆಯ ಕರ್ನಾಟಕ ನೌಕಾ ಪ್ರದೇಶದ ಧ್ವಜ ಅಧಿಕಾರಿ ರಿಯರ್ ಅಡ್ಮಿರಲ್ ಮಹೇಶ್‌ಸಿಂಗ್ ಸಹಿ ಹಾಕುವ ಮೂಲಕ ಒಪ್ಪಿಗೆ ಸೂಚಿಸಿದರು.