ನೆದರ್ಲೆಂಡ್ಸ್‌ನ ಹಾರ್ಲೆಮ್‌ನಲ್ಲಿ ಭಾನುವಾರ ನಡೆದ ಸೆಮಿಫೈನಲ್ ನಲ್ಲಿ ಜೂನಿಯರ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಯುವ ಆಟಗಾರ್ತಿಯರಾದ ತಸ್ನಿಂ ಮಿರ್‌ ಹಾಗೂ ಮಾನಸಿ ಸಿಂಗ್‌ ಅವರು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. * ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಇದೆ ಮೊದಲು ಭಾರತಕ್ಕೆ ಕಂಚಿನ ಪದಕಗಳು ಲಭಿಸಿದ್ದು. * ತಸ್ನಿಂ ಮಿರ್‌ ಅವರು ಕೊರಿಯಾದ ಸೊಯುಲ್‌ ಲೀ ಎದುರು ಆಟವಾಡಿ 19–21, 10–22 ಗೇಮ್‌ಗಳಿಂದ ಸೋತು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. * ಮಾನಸಿ ಸಿಂಗ್‌ ಅವರು ಇಂಡೊನೇಷ್ಯಾದ ಸೈಫಿ ರಿಜ್‌ಕಾ ನೂರಿದಯಾಹ್‌ ಜೊತೆ ಆಟವಾಡಿ 11–21, 16–21 ಸೋಲನ್ನನುಭವಿಸಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.