ಮಂಗಳವಾರ, 03 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಲೋಕಸಭೆ ಕಲಾಪ: ಗರ್ಭಪಾತ ಅವಕಾಶ 24 ವಾರಕ್ಕೆ ಏರಿಸುವ ಮಸೂದೆ ಮಂಡನೆ
Authored by:
Basavaraj Halli
ನವದೆಹಲಿ : ಪ್ರಸ್ತುತ ದೇಶದಲ್ಲಿ ಜಾರಿ ಇರುವ ಗರ್ಭಪಾತ ಮಾಡಿಸುವುದಕ್ಕೆ ಇರುವ ಗರಿಷ್ಠ 20 ವಾರಗಳ ಮಿತಿಯನ್ನು 24 ವಾರಗಳಿಗೆ ಏರಿಸುವ ಮಹತ್ವದ ಮಸೂದೆಯನ್ನು ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಇಂದು ನಡೆದ ಕಲಾಪದಲ್ಲಿ "ದ ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ(ಅಮೆಂಡಮೆಂಟ್) ಬಿಲ್ ೨೦೨೦" ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ.