ಮಂಗಳವಾರ, 03 ಮಾರ್ಚ್ 2020
5:30 ಪೂರ್ವಾಹ್ನ
Daily PDF
ನ್ಯಾನೋ ತಂತ್ರಜ್ಞಾನ ಉತ್ತೇಜನೆಗೆ ಬೆಂಗಳೂರಿನಲ್ಲಿ ನ್ಯಾನೋ ಪಾರ್ಕ್ ಸ್ಥಾಪನೆ
Authored by:
Basavaraj Halli
ಬೆಂಗಳೂರು : ಬೆಂಗಳೂರು ಐಟಿ-ಬಿಟಿ ಸೇರಿದಂತೆ ಹಲವು ವಿಧಗಳಲ್ಲಿ ಪ್ರಸಿದ್ದಿ ಪಡೆದ ನಗರವಾಗಿದೆ. ಇಲ್ಲಿ ಐಟಿ-ಬಿಟಿ ಉತ್ತೇಜಿಸಿದಂತೆ ನ್ಯಾನೋ ತಂತ್ರಜ್ಞಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದಿದ್ದು ಇದರ ಮೊದಲ ಹಂತವಾಗಿ ಬೆಂಗಳೂರಿನಲ್ಲಿ ನ್ಯಾನೋ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್‍ನಾರಾಯಣ ತಿಳಿಸಿದ್ದಾರೆ.
ನಗರದಲ್ಲಿ ನಡೆದ 11ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ ನಡೆಯುತ್ತಿದ್ದು, ಭಾರತ ರತ್ನ ಸಿ.ಎನ್.ಆರ್.ರಾವ್ ಜತೆಗೆ ಚರ್ಚೆ ನಡೆಸಿ ಅವರ ಮಾರ್ಗದರ್ಶನದಂತೆಯೇ ನ್ಯಾನೋ ಪಾರ್ಕ್ ಸ್ಥಾಪನೆ ಮಾಡಲಾಗುವುದೆಂದು ಅಶ್ವತ್ಥ್‍ನಾರಾಯಣ ತಿಳಿಸಿದರು.