ಮಂಗಳವಾರ, 03 ಮಾರ್ಚ್ 2020
5:30 ಪೂರ್ವಾಹ್ನ
Daily PDF
HAL ನಿಂದ ಅಮೆರಿಕಾ ಮೂಲದ ಅಪಾಚೆ ರೀತಿಯ ಕಾಪ್ಟರ್ ತಯಾರಿಕೆ
Authored by:
Basavaraj Halli
ನವದೆಹಲಿ: ಭಾರತೀಯ ವಾಯುಪಡೆಗೆ ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದ
ಅಮೆರಿಕಾದ ಬಲಿಷ್ಠ ಅಪಾಚೆ ಯುದ್ಧ ವಿಮಾನದಷ್ಟೇ ಸಾಮರ್ಥ್ಯ ಹೊಂದಿರುವ ಹೆಲಿಕಾಪ್ಟರ್ ಗಳನ್ನು ತಯಾರಿ ಮಾಡುವುದಕ್ಕೆ HAL (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಸಿದ್ಧತೆ ಆರಂಭಿಸಿದೆ.
* ಈಗಾಗಲೇ ಆರಂಬಿಕ ಹಂತಗಳ ತಯಾರಿಯನ್ನು ಆರಂಭಿಸಿರುವ HAL ಸುಮಾರು 2027ರ ವೇಳೆಗೆ ಸ್ವದೇಶಿ ನಿರ್ಮಿತ ಬಲಿಷ್ಠವಾದ ಯುದ್ಧ ವಿಮಾನಗಳು ಸೇವೆಗೆ ಲಭ್ಯವಾಗಲಿವೆ.
* ಈ ಹೆಲಿಕಾಪ್ಟರ್ ಎರಡು ಎಂಜಿನ್ ಹೊಂದಿರಲಿದ್ದು ವಾಯುದಾಳಿ, ವಾಯು ಸಾರಿಗೆ, ಯುದ್ಧ ಸಾಮಾಗ್ರಿಯನ್ನು ಹೊತ್ತೊಯ್ಯಲು ಸಹಕಾರಿಯಾಗಲಿದೆ.