ರವಿವಾರ, 01 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ 124ನೇ ಜನ್ಮದಿನ
Authored by:
Basavaraj Halli
ಫೆಬ್ರುವರಿ 29 ರಂದು ಮೊರಾರ್ಜಿ ದೇಸಾಯಿ ಅವರ 124ನೇ ಜನ್ಮ ದಿನಾಚರಣೆ ಯನ್ನು ದೇಶಾಧ್ಯಂತ ಆಚರಿಸಲಾಯಿತು. ವಿಶೇಷವಾಗಿ ಪ್ರತಿ ಅಧಿಕವರ್ಷದ ಫೆಬ್ರುವರಿ 29 ರಂದು ಜನ್ಮದಿನವನ್ನು ಆಚರಿಸಿಕೊಳ್ಳುವ ವಿಶೇಷ ವ್ಯಕ್ತಿಗಳಲ್ಲಿ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಕೂಡ ಒಬ್ಬರು.
ಮೊರಾರ್ಜಿ ರಾಂಚೋಡ್ಜಿ ದೇಸಾಯಿ (29 ಫೆಬ್ರವರಿ 1896 ರಿಂದ 10 ಏಪ್ರಿಲ್ 1995) ಭಾರತದ 4 ನೇ ಪ್ರಧಾನಿಯಾಗಿ 1977 ಮತ್ತು 1979 ರ ನಡುವೆ ಸೇವೆ ಸಲ್ಲಿಸಿದರು ಮತ್ತು ಜನತಾ ಪಕ್ಷ ರಚಿಸಿದ ಸರ್ಕಾರವನ್ನು ಮುನ್ನಡೆಸಿದ್ದರು. ಅವರು ಬಾಂಬೆ ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವರು, ಹಣಕಾಸು ಮಂತ್ರಿ ಮತ್ತು ಭಾರತದ 2 ನೇ ಉಪ ಪ್ರಧಾನ ಮಂತ್ರಿಯಂತಹ ಅನೇಕ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದರು.