ಗುರುವಾರ, 20 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಫೆಬ್ರುವರಿ 19 : ಛತ್ರಪತಿ ಶಿವಾಜಿ ಮಹಾರಾಜರ 390ನೇ ಜಯಂತಿ
Authored by:
Basavaraj Halli
ನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜರ 390ನೇ ಜನ್ಮ ದಿನಾಚರಣೆಯನ್ನು ದೇಶ್ಯಾದಂತ ಆಚರಿಸಲಾಯಿತು, ಛತ್ರಪತಿ ಶಿವಾಜಿ ಅವರು ಫೆಬ್ರವರಿ 19, 1630ರಲ್ಲಿ ಪುಣೆಯ ಶಿವನೇರಿ ಕೋಟೆಯಲ್ಲಿ ಜನಿಸಿದರ ಅಂಗವಾಗಿ ಫೆಬ್ರುವರಿ 19 ರಂದು ಶಿವಾಜಿ ಜಯಂತಿ ಆಚರಿಸಲಾಗುತ್ತದೆ. ಶಿವಾಜಿಯು ಒಬ್ಬ ಯೋಧ ಮತ್ತು ಮರಾಠ ಕುಲದ ರಾಜರಾಗಿದ್ದರು, 1674 ರಲ್ಲಿ ರಾಯಘಡದಲ್ಲಿ ಛತ್ರಪತಿ ಬಿರುದುನೊಂದಿಗೆ ಕಿರೀಟಧಾರಣೆ ಮಾಡಿದರು.
ಶಿವಾಜಿ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿ ಶಿವಾಜಿ ಮಹಾರಾಜರ ಜೀವನವು ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.