ರವಿವಾರ, 16 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಓಟದಲ್ಲಿ ಉಸೇನ್ ಬೋಲ್ಟ್ ಮೀರಿಸಿದ ಕಂಬಳ ವೀರ
Authored by:
Basavaraj Halli
ಕರಾವಳಿಯ ಪ್ರಸಿದ್ದವಾಗಿರುವ ಜಾನಪದ ಕ್ರೀಡೆ ಕಂಬಳ ಸ್ಪರ್ಧೆಯಾ ಆಟಗಾರ ಶ್ರೀನಿವಾಸಗೌಡ ಅವರು ವಿಶ್ವದ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ದಾಖಲೆಯನ್ನು ಮೀರಿ ಕಂಬಳದಲ್ಲಿ ಓಡಿದ್ದು ಈಗ ಬಾರಿ ಸುದ್ದಿಯಾಗಿದ್ದು, ಶ್ರೀನಿವಾಸಗೌಡ ಅವರಿಗೆ ಮೆಚ್ಚುಗೆಗಳ ಸುರಿಮಳೆಯೇ ಆಗಿದೆ, ಇದರ ಮಧ್ಯ ಶ್ರೀನಿವಾಸಗೌಡ ಅವರ ದಾಖಲೆ ಓಟಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು, ಶ್ರೀನಿವಾಸಗೌಡ ಅವರಿಗೆ ರಾಷ್ಟ್ರೀಯ ತರಬೇತುದಾರರಿಂದ ಸೂಕ್ತ ತರಬೇತಿ ಕೊಡಿಸಲಾಗುವುದು ಎಂದು ಹೇಳಿದ್ದಾರೆ.
ಕರ್ನಾಟಕ ಒಲಿಂಪಿಕ್ ಸಂಸ್ಥೆಯು ಇವರನ್ನು ಬರುವ ಒಲಿಂಪಿಕ್ಸ್ ಗೇಮ್ಸ್ ಆಯ್ಕೆ ಮಾಡಲು ಮನವಿ ಸಲ್ಲಿಸಿದೆ.