ನವದೆಹಲಿ: ಅಮಿತ್‌ ಪಂಘಲ್‌ ಅವರು “ಐಒಸಿ ಬಾಕ್ಸಿಂಗ್‌ ಟಾಸ್ಕ್ ಫೋರ್ಸ್‌" ಹೊಸದಾಗಿ ಪ್ರಕಟಿಸಿದ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ಬಾಕ್ಸರ್‌ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರು ವಿಶ್ವ ಚಾಂಪಿಯನ್‌ಶಿಪ್‌ ನ 52 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ವಿಜಯಿಸಿದ್ದರು. ಅಮಿತ್‌ ಪಂಘಲ್‌ ಅವರು ಒಟ್ಟು 420 ಅಂಕಗಳೊಂದಿಗೆ ಈ ಸ್ಥಾನ ಪಡೆದಿದ್ದಾರೆ ಎಂದು ಇಂಟರ್‌ನ್ಯಾಶನಲ್‌ ಒಲಿಂಪಿಕ್‌ ಕಮಿಟಿಯ (ಐಒಸಿ) ಬಾಕ್ಸಿಂಗ್‌ ಟಾಸ್ಕ್ ಫೋರ್ಸ್‌ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಮೇರಿ ಕೋಮ್ ಗೆ 5ನೇ ರ್‍ಯಾಂಕ್: ಮಹಿಳಾ ವಿಶ್ವ ರ್‍ಯಾಂಕಿಂಗ್‌ನಲ್ಲಿ 6 ಬಾರಿಯ ವಿಶ್ವ ಚಾಂಪಿಯನ್‌ ಆದ ಮೇರಿ ಕೋಮ್‌ (51 ಕೆಜಿ) 225 ಅಂಕಗಳೊಂದಿಗೆ 5ನೇ ರ್‍ಯಾಂಕಿಂಗ್‌ ಪಡೆದಿದ್ದಾರೆ.