➤ ಸೆನೆಗಲ್ನ ಡಾಕರ್ನಲ್ಲಿ ನಡೆಯುತ್ತಿರುವ 2026ರ ಯುವ ಒಲಿಂಪಿಕ್ಸ್ (Youth Olympic Games) ಕ್ರೀಡಾಕೂಟದಲ್ಲಿ ಭಾರತದ ಯುವ ಅಥ್ಲೀಟ್ ರಾಜಕುಮಾರಿ ಲಂಚೇಂಬಿ ಚಾನು (Rajkumari Lanchenbi Chanu) ಅದ್ಭುತ ಸಾಧನೆ ಮಾಡಿದ್ದಾರೆ. ಮಹಿಳೆಯರ ಚಾಂಗ್ಚುವಾನ್ ಕಂಬೈನ್ಡ್ (Changquan combined) ವುಶು ವಿಭಾಗದಲ್ಲಿ ಅವರು ಐತಿಹಾಸಿಕ ಕಂಚಿನ ಪದಕವನ್ನು ಗೆದ್ದುಕೊಳ್ಳುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ.
➤ ಸ್ಪರ್ಧಾಕೂಟದಲ್ಲಿ ವುಶು ಕ್ರೀಡೆಯು ಅಧಿಕೃತವಾಗಿ ಪದಕ ಸ್ಪರ್ಧೆಯಾಗಿ ಮೊದಲು ಬಾರಿಗೆ ಸೇರ್ಪಡೆಗೊಂಡಿದ್ದು, ಈ ಚೊಚ್ಚಲ ಅವಕಾಶದಲ್ಲೇ ಭಾರತಕ್ಕೆ ಪದಕ ತಂದುಕೊಟ್ಟ ಮೊದಲ ವುಶುಪಟು ಎಂಬ ಹೆಗ್ಕತ್ರೆಗೆ ರಾಜಕುಮಾರಿ ಪಾತ್ರರಾಗಿದ್ದಾರೆ.
➤ ಸ್ಮರಣೀಯ ಪ್ರದರ್ಶನ ಮತ್ತು ಅಂಕಗಳ ವಿವರ: ಡಾಕರ್ನಲ್ಲಿ ನಡೆದ ಈ ಕಠಿಣ ಸ್ಪರ್ಧೆಯಲ್ಲಿ ರಾಜಕುಮಾರಿ ಲಂಚೇಂಬಿ ಚಾನು ಅವರು ಒಟ್ಟು 18.039 ಅಂಕಗಳನ್ನು ಕಲೆಹಾಕಿ ಮೂರನೇ ಸ್ಥಾನ ಪಡೆದರು:
- ಗುನ್ಶು (Gunshu) ವಿಭಾಗ: 8.723 ಅಂಕಗಳು
- ಚಾಂಗ್ಚುವಾನ್ (Changquan) ವಿಭಾಗ: 9.316 ಅಂಕಗಳು
ಆರಂಭಿಕ ಹಂತದ ಗುನ್ಶು ದಿನದ ಅಂತ್ಯದಲ್ಲಿ ರಾಜಕುಮಾರಿ 4ನೇ ಸ್ಥಾನದಲ್ಲಿದ್ದರು. ಆದರೆ, ಬಳಿಕ ನಡೆದ ಚಾಂಗ್ಚುವಾನ್ ಪ್ರದರ್ಶನದಲ್ಲಿ ಅತ್ಯುತ್ತಮ ಕೌಶಲ್ಯ ತೋರುವ ಮೂಲಕ ಮೇಲಕ್ಕೇರಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಇದೇ ಸ್ಪರ್ಧೆಯಲ್ಲಿ ಈಜಿಪ್ಟ್ನ ಸೊಂಡೋಸ್ ಸೋಂಬೋಲ್ (Sondos Sonbol) 18.660 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರೆ, ವೆನೆಜುವೆಲಾದ ವಲೇರಿಯಾ ಫ್ರಾನೆರಿಸ್ ದುಡಮೆಲ್ ಅಲ್ವಾರಾಡೊ (Valeria Frannerys Dudamel Alvarado) 18.199 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆದರು.
➤ ಭಾರತಕ್ಕೆ ಹೆಮ್ಮೆಯ ಕ್ಷಣ: ಮಣಿಪುರ ಮೂಲದ 15 ವರ್ಷದ ರಾಜಕುಮಾರಿ ಲಂಚೇಂಬಿ ಚಾನು ಅವರ ಈ ದಿಟ್ಟ ಸಾಧನೆಯೊಂದಿಗೆ ಡಾಕರ್ ಯುವ ಒಲಿಂಪಿಕ್ಸ್ನಲ್ಲಿ ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ. ಈ ಯುವ ಒಲಿಂಪಿಕ್ಸ್ನಲ್ಲಿ ಭಾರತದ ಪರವಾಗಿ ವುಶು ವಿಭಾಗದಲ್ಲಿ ಕಣಕ್ಕಿಳಿದಿದ್ದ ಏಕೈಕ ಕ್ರೀಡಾಪಟು ಇವರಾಗಿದ್ದು, ಇವರ ಈ ಐತಿಹಾಸಿಕ ಸಾಧನೆಗೆ ಕ್ರೀಡಾ ಸಚಿವಾಲಯ, ವುಶು ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ದೇಶದ ಕ್ರೀಡಾಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಯುವ ಒಲಿಂಪಿಕ್ಸ್ 2026: ವುಶುನಲ್ಲಿ ಇತಿಹಾಸ ನಿರ್ಮಿಸಿದ ಭಾರತದ ರಾಜಕುಮಾರಿ ಲಂಚೇಂಬಿ ಚಾನು - ದೇಶಕ್ಕೆ ಪ್ರಥಮ ಪದಕ
Published by Heena Sheregar
1 hour ago