ಬುಧವಾರ, 22 ಜನವರಿ 2020
5:30 ಪೂರ್ವಾಹ್ನ
Daily PDF
ಝೊಮ್ಯಾಟೋ ತೆಕ್ಕೆಗೆ ಯುಬರ್ ಈಟ್ಸ್
Authored by:
Basavaraj Halli
ಮುಂಬೈ: ಆನ್‌ಲೈನ್‌ನಲ್ಲಿ ಆಹಾರ ಖರೀದಿಸಿ ಮನೆ ಬಾಗಿಲಿಗೆ ತಲುಪಿಸುವ ಝೊಮ್ಯಾಟೋ ಸಂಸ್ಥೆಯು ಯೂಬರ್ ಈಟ್ಸ್ ಅನ್ನು ಖರೀದಿಸಿದೆ. 2,485 ಕೋಟಿ ರೂ. ಮೊತ್ತದ ಡೀಲ್ ಇದಾಗಿದೆ.
ದೇಶದ 500 ನಗರ-ಪಟ್ಟಣಗಳಲ್ಲಿ ಝೊಮ್ಯಾಟೋ ಕಾರ್ಯನಿರ್ವಹಿಸುತ್ತಿದೆ. ಹೊಸ ಪ್ರಯತ್ನದಿಂದ ನಮ್ಮ ಕಾರ್ಯಕ್ಷೇತ್ರ ಮತ್ತಷ್ಟು ವಿಸ್ತಾರಗೊಳ್ಳಲಿದೆ ಎಂದು ಸಿಇಒ ದೀಪಿಂದರ್ ಗೋಯಲ್ ತಿಳಿಸಿದ್ದಾರೆ.