ಬುಧವಾರ, 22 ಜನವರಿ 2020
5:30 ಪೂರ್ವಾಹ್ನ
Daily PDF
ಮೆಂಟನ್ ಕಪ್ ಶೂಟಿಂಗ್ : ಅಪೂರ್ವಿ, ದಿವ್ಯಾಂಶ್ ಗೆ ಚಿನ್ನ
Authored by:
Basavaraj Halli
ಇನ್‌ಸ್‌ಬರ್ಕ್: ಆಸ್ಟ್ರೀಯಾದಲ್ಲಿ ನಡೆಯುತ್ತಿರುವ ಮೆಂಟನ್ ಕಪ್ ಇಂಟರ್‌ನ್ಯಾಷನಲ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಪೂರ್ವಿ ಚಂದೇಲಾ ಹಾಗೂ ದಿವ್ಯಾಂಶ್ ಸಿಂಗ್ ಪನ್ವಾರ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಮಂಗಳವಾರ ನಡೆದ ಮಹಿಳೆಯರ 10ಮೀ. ಏರ್ ರೈಫಲ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ಅಪೂರ್ವಿ ಚಂದೇಲಾ ಅವರು 251.4 ಪಾಯಂಟ್‌ಗಳೊಂದಿಗೆ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾಳೆ.
ಪುರುಷರ 10ಮೀ. ಏರ್ ರೈಫಲ್ ವಿಭಾಗದ ಫೈನಲ್ ಸುತ್ತಿನಲ್ಲಿ ದಿವ್ಯಾಂಶ್ 249.7 ಪಾಯಿಂಟ್‌ಗಳನ್ನು ಕಲೆ ಹಾಕುವ ಮೂಲಕ ಚಿನ್ನದ ಪದಕ ಗೆದ್ದರು.