ಬುಧವಾರ, 15 ಜನವರಿ 2020
5:30 ಪೂರ್ವಾಹ್ನ
Daily PDF
ಕರ್ನಾಟಕದ ಟಾಪ್-10 ಶ್ರೀಮಂತ ದೇವಾಲಯಗಳ ಪಟ್ಟಿ ಪ್ರಕಟ
Authored by:
Basavaraj Halli
ಕರ್ನಾಟಕದ ಅತ್ಯಂತ ಶ್ರೀಮಂತ ದೇವಾಲಯಗಳ ಪಟ್ಟಿ ಪ್ರಕಟವಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಂಬರ್ 1 ಸ್ಥಾನ ಪಡೆದುಕೊಂಡಿದೆ.
ಮುಜರಾಯಿ ಇಲಾಖೆಯು ರಾಜ್ಯದ ಟಾಪ್-10 ಶ್ರೀಮಂತ ದೇವಾಲಯಗಳ ಪಟ್ಟಿ ಬಿಡುಗಡೆ ಮಾಡಿದ್ದು, 100 ಕೋಟಿ ರೂ. ಆದಾಯ ಗಳಿಸಿರುವ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಅತ್ಯಂತ ಶ್ರೀಮಂತ ದೇವಸ್ಥಾನವಾಗಿದೆ.
ಕರ್ನಾಟಕದ ಟಾಪ್-10 ಶ್ರೀಮಂತ ದೇವಾಲಯಗಳ ಪಟ್ಟಿ
ಕುಕ್ಕೆ ಸುಬ್ರಮಣ್ಯ ದೇವಸ್ಥಾನ (100 ಕೋಟಿ ರೂ.)
ಕೊಲ್ಲೂರು ಮೂಕಾಂಬಿಕೆ (90-92 ಕೋಟಿ ರೂ.)
ಕಟೀಲು ದುರ್ಗಾ ಪರಮೇಶ್ವರಿ (40-42 ಕೋಟಿ ರೂ.)
ಚಾಮುಂಡೇಶ್ವರಿ ದೇವಾಲಯ ( 30-33 ಕೋಟಿ ರೂ.)
ನಂಜನಗೂಡು ಶ್ರೀಕಂಠೇಶ್ವರ (15-20 ಕೋಟಿ ರೂ.)
ಮಂದರ್ತಿ ದೇವಾಲಯ (10-12 ಕೋಟಿ ರೂ.)
ಗುಳಗಮ್ಮ ದೇವಾಲಯ (8-10 ಕೋಟಿ ರೂ.)
ಘಾಟಿ ಸುಬ್ರಮಣ್ಯ ದೇವಾಲಯ (8-10 ಕೋಟಿ ರೂ)
ಬೆಂಗಳೂರಿನ ಬನಶಂಕರಿ ದೇವಾಲಯ (8-10 ಕೋಟಿ ರೂ)
ದೊಡ್ಡಬಳ್ಳಾಪುರ ಘಾಟಿ ಸುಬ್ರಮಣ್ಯ ದೇವಸ್ಥಾನಗಳು ಸ್ಥಾನ ಪಡೆದಿವೆ.