ಭಾನುವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅಮೆರಿಕದ ಆಟಗಾರ್ತಿ ಸೆರೆನಾ 6–3, 6–4 ನೇರ ಸೆಟ್‌ಗಳಿಂದ ಅಮೆರಿದವರೇ ಆದ ಜೆಸ್ಸಿಕಾ ಪೆಗುಲಾ ಅವರನ್ನು ಮಣಿಸಿದರು. 2017ರ ಮೆಲ್ಬರ್ನ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದ ಅವರು ಬಳಿಕ ಒಮ್ಮೆಯೂ ಡಬ್ಲ್ಯುಟಿಎ ಕಿರೀಟ ಮುಡಿಗೇರಿಸಿಕೊಂಡಿರಲಿಲ್ಲ. ತಾಯಿಯಾದ ನಂತರ ಸೆರೆನಾ ಜಯಿಸಿದ ಚೊಚ್ಚಲ ಪ್ರಶಸ್ತಿ ಇದಾಗಿದೆ. ಟೂರ್ನಿಯಲ್ಲಿ ಗೆದ್ದ ₹ 31 ಲಕ್ಷ ಬಹುಮಾನ ಮೊತ್ತವನ್ನು ಅವರು ಆಸ್ಟ್ರೇಲಿಯಾ ಕಾಳ್ಗಿಚ್ಚು ಪರಿಹಾರ ನಿಧಿಗೆ ನೀಡಿದ್ದಾರೆ.