➤ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಜಿ. ಕಿಷನ್ ರೆಡ್ಡಿ ಹಾಗೂ ರಾಜ್ಯ ಸಚಿವ ಸತೀಶ್ ಚಂದ್ರ ದುಬೆ ಅವರು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಕಲ್ಲಿದ್ದಲು ಕಂಪನಿಗಳಿಗಾಗಿ ಮೊದಲ ಸೆಕ್ಟರ್-ನಿರ್ದಿಷ್ಟ CSR ಚೌಕಟ್ಟನ್ನು (First-Ever Sector-Wide CSR Framework) ಚಾಲನೆಗೊಳಿಸಿದರು. ಕಂಪನಿಗಳ ಕಾಯ್ದೆ-2013 ರ ಶಾಸನಬದ್ಧ CSR ನಿಯಮಗಳು ಬಂದ ನಂತರ, ಭಾರತದಲ್ಲಿ ಒಂದು ನಿರ್ದಿಷ್ಟ ಕೈಗಾರಿಕಾ ವಲಯಕ್ಕಾಗಿ ರೂಪಿಸಲಾದ ಪ್ರಥಮ CSR ಮಾರ್ಗಸೂಚಿ ಇದಾಗಿದೆ.
➤ ಕಲ್ಲಿದ್ದಲು ವಲಯದ CSR ಚೌಕಟ್ಟಿನ ಮುಖ್ಯಾಂಶಗಳು
- ಸಿದ್ಧಪಡಿಸಿದ ಸಂಸ್ಥೆ: ಈ ಸಮಗ್ರ CSR ಚೌಕಟ್ಟನ್ನು ಇಂಡಿಯನ್ ಇನ್‌ಸ್ಟಿಸ್ಟಿಟ್ಯೂಟ್ ಆಫ್ ಕಾರ್ಪೊರೇಟ್ ಅಫೇರ್ಸ್ (IICA) ಸಿದ್ಧಪಡಿಸಿದೆ.
- ಮುಖ್ಯ ಉದ್ದೇಶ: ಗಣಿಗಾರಿಕೆ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಜನರ ಜೀವನಮಟ್ಟವನ್ನು ಸುಧಾರಿಸುವುದು ಹಾಗೂ ಕೈಗೊಳ್ಳುವ CSR ಯೋಜನೆಗಳಲ್ಲಿ ಪಾರದರ್ಶಕತೆ ಮತ್ತು ಫಲಿತಾಂಶ-ಆಧಾರಿತ (Outcome-oriented) ಪ್ರಗತಿಯನ್ನು ಸಾಧಿಸುವುದು.
- ಗಮನಹರಿಸುವ ಕ್ಷೇತ್ರಗಳು: ಮೂಲಸೌಕರ್ಯ, ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯ, ಶಿಕ್ಷಣ, ಜೀವನೋಪಾಯ ಮತ್ತು ಪರಿಸರ ಮರುಸ್ಥಾಪನೆ (Green Credit) ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುವುದು.
➤ ಕೋಲ್ ಇಂಡಿಯಾ ಲಿಮಿಟೆಡ್ (CIL) ಪ್ರಮುಖ CSR ಆರೋಗ್ಯ ಉಪಕ್ರಮಗಳು: ಈ ಕಾರ್ಯಕ್ರಮದ ವೇಳೆ ಕೋಲ್ ಇಂಡಿಯಾ ಲಿಮಿಟೆಡ್ ಜಾರಿಗೆ ತಂದಿರುವ ಎರಡು ಪ್ರಮುಖ ಆರೋಗ್ಯ ಯೋಜನೆಗಳ ಮಹತ್ವದ ಮೈಲಿಗಲ್ಲುಗಳನ್ನು ಆಚರಿಸಲಾಯಿತು:
| ಯೋಜನೆಯ ಹೆಸರು | ಕಾಯಿಲೆ/ವಿಷಯ | ಸಿಐಎಲ್ ಕೊಡುಗೆ & ಸಾಧನೆ |
| ಥಲಸ್ಸೇಮಿಯಾ ಬಾಲ್ ಸೇವಾ ಯೋಜನೆ (TBSY) | ಥಲಸ್ಸೇಮಿಯಾ ಮತ್ತು ಆಪ್ಲಾಸ್ಟಿಕ್ ಅನೀಮಿಯಾ (ಅಪರೂಪದ ರಕ್ತ ಅಸ್ವಸ್ಥತೆಗಳು) |
• 1050ಕ್ಕೂ ಹೆಚ್ಚು ಬೋನ್ ಮ್ಯಾರೋ ಕಸಿ (BMT) ಯಶಸ್ವಿ. • ಪ್ರತಿ ರೋಗಿಗೆ ₹10 ಲಕ್ಷದವರೆಗೆ ನೆರವು (ಮೊತ್ತ: ₹130 ಕೋಟಿ). • 21 ಪಟ್ಟಿಮಾಡಲ್ಪಟ್ಟ ಆಸ್ಪತ್ರೆಗಳ ಜಾಲ. |
| ನಾನ್ಹಾ ಸಾ ದಿಲ್ (Nanha Sa Dil) | ಜನ್ಮಜಾತ ಹೃದಯ ದೋಷಗಳು (Congenital Heart Defects - CHD) |
• ಶ್ರೀ ಸತ್ಯಸಾಯಿ ಹೆಲ್ತ್ ಅಂಡ್ ಎಜುಕೇಶನ್ ಟ್ರಸ್ಟ್ ಸಹಯೋಗ. • 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ತಪಾಸಣೆ. • 1500ಕ್ಕೂ ಹೆಚ್ಚು ಉಚಿತ ಶಸ್ತ್ರಚಿಕಿತ್ಸೆಗಳು ಪೂರ್ಣ. |