➤ ಜಾರ್ಖಂಡ್‌ ರಾಜ್ಯದ ಸಾಂಸ್ಕೃತಿಕ ಪರಂಪರೆ ಹಾಗೂ ಗಿರಿಜನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಸಾಂಪ್ರದಾಯಿಕ ಚರ್ಮವಾದ್ಯ ‘ಮಾಂದಾರ್’ (Mandar) ಗೆ ಕೇಂದ್ರ ಸರ್ಕಾರದ ಭೌಗೋಳಿಕ ಸೂಚ್ಯಂಕ ನೋಂದಣಾಲಯವು (Geographical Indications Registry, Chennai) ಅಧಿಕೃತವಾಗಿ GI Tag (Geographical Indication Tag) ನೀಡಿ ಗೌರವಿಸಿದೆ.
➤ ‘ಮಾಂದಾರ್’ ವಾದ್ಯದ ಪ್ರಮುಖ ವೈಶಿಷ್ಟ್ಯಗಳು
- ವಿಶಿಷ್ಟ ವಿನ್ಯಾಸ: ಮಾಂದಾರ್ ಎಂಬುದು ಸಿಲಿಂಡರ್ ಆಕಾರದ ಸಾಂಪ್ರದಾಯಿಕ ತಾಳವಾದ್ಯವಾಗಿದೆ. ಧೋಲಕ್ ಅಥವಾ ಧೋಲ್ ವಾದ್ಯಗಳಿಗಿಂತ ಇದು ಭಿನ್ನವಾಗಿದ್ದು, ಇದರ ಒಂದು ಭಾಗವನ್ನು ಸ್ಥಳೀಯವಾಗಿ ಲಭ್ಯವಿರುವ ಕೆಂಪು ಮಣ್ಣಿನಿಂದ (Red Clay) ತಯಾರಿಸಲಾಗುತ್ತದೆ.
- ಸಾಂಸ್ಕೃತಿಕ ಮಹತ್ವ: ಜಾರ್ಖಂಡ್‌‌ ರಾಜ್ಯದ ಬುಡಕಟ್ಟು ಸಮುದಾಯಗಳ ಹಬ್ಬ-ಹರಿದಿನಗಳು, ಜಾನಪದ ನೃತ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಾಂದಾರ್ ವಾದ್ಯವನ್ನು ಪ್ರಮುಖವಾಗಿ ಬಳಸಲಾಗುತ್ತದೆ.
- ಶಬ್ದ ತರಂಗ: ಮಣ್ಣು ಮತ್ತು ಪ್ರಾಣಿಗಳ ಚರ್ಮದ ಸಂಯೋಜನೆಯಿಂದಾಗಿ ಇದು ವಿಶಿಷ್ಟ ಗಂಭೀರ ಧ್ವನಿಯನ್ನು ಹೊರಹೊಮ್ಮಿಸುತ್ತದೆ.
➤ GI Tag ಅರ್ಜಿ ಮತ್ತು ನೋಂದಣಿ ಹಿನ್ನೆಲೆ
- ಅರ್ಜಿ ಸಲ್ಲಿಸಿದ ವರ್ಷ: ಈ ವಾದ್ಯಕ್ಕೆ ಭೌಗೋಳಿಕ ಸೂಚ್ಯಂಕ ಮಾನ್ಯತೆ ಕೋರಿ ಗುಮ್ಲಾ ಜಿಲ್ಲೆಯ ಜಾರ್ಜಟ್ಟಾ ಗ್ರಾಮದ ‘ರಾಯ್‌ಡಿಹ್ ಮಾಂದಾರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್’ ಸೆಪ್ಟೆಂಬರ್ 24, 2021 ರಂದು ಅರ್ಜಿ ಸಲ್ಲಿಸಿತ್ತು.
- ಚಾರಿತ್ರಿಕ ದಾಖಲೆಗಳು: 1915 ರ ಮಾನವಶಾಸ್ತ್ರಜ್ಞ ಶರತ್ ಚಂದ್ರ ರಾಯ್ ಅವರ ಕೃತಿ ಹಾಗೂ 1940 ರ 'ದ ಬ್ಲೂ ಗ್ರೋವ್' ಪುಸ್ತಕದ ದಾಖಲೆಗಳನ್ನು ಸಾಕ್ಷ್ಯವಾಗಿ ನೀಡಲಾಗಿತ್ತು.
➤ GI Tag ಸಿಗುವುದರಿಂದಾಗುವ ಪ್ರಯೋಜನಗಳು:
- ಸ್ಥಳೀಯ ಕುಶಲಕರ್ಮಿಗಳಿಗೆ ರಕ್ಷಣೆ: ಈ ಮಾನ್ಯತೆಯಿಂದಾಗಿ ಸ್ಥಳೀಯ ಕುಶಲಕರ್ಮಿಗಳ ನಕಲಿ ಉತ್ಪನ್ನಗಳನ್ನು ತಡೆಯಲು ಕಾನೂನು ಬದ್ಧ ರಕ್ಷಣೆ ಸಿಗುತ್ತದೆ.
- ಆರ್ಥಿಕ ಸಬಲೀಕರಣ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜಾರ್ಖಂಡ್‌ನ ಮೂಲ ಮಾಂದಾರ್ ವಾದ್ಯಕ್ಕೆ ಪ್ರತ್ಯೇಕ ಬ್ರ್ಯಾಂಡ್ ಮೌಲ್ಯ ಲಭಿಸಿ, ಸ್ಥಳೀಯ ಕುಶಲಕರ್ಮಿಗಳ ಆದಾಯ ಹೆಚ್ಚಲಿದೆ.
➤ ಜಾರ್ಖಂಡ್‌ನ ಇತರ ಪ್ರಮುಖ GI Tag ಉತ್ಪನ್ನಗಳು 
- ಸೋಹ್ರಾಯ್-ಖೋವರ್ ಪೇಂಟಿಂಗ್ (Sohrai-Khovar Painting): ಇದು ಜಾರ್ಖಂಡ್ ರಾಜ್ಯಕ್ಕೆ ಲಭಿಸಿದ ಮೊದಲ GI Tag ಉತ್ಪನ್ನವಾಗಿದೆ.
- ಕೊಡರ್ಮಾ ಕೇಸರಿಯಾ ಕಲಾಕಂದ್ (Koderma Kesariya Kalakand)
- ಮಾಂದಾರ್ ವಾದ್ಯ (Mandar Musical Instrument)