➤ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI - Unique Identification Authority of India) ಕೋಲ್ಕತ್ತಾದಲ್ಲಿ ನಡೆದ ‘ಆಧಾರ್ ಸಂವಾದ’ ಕಾರ್ಯಕ್ರಮದಲ್ಲಿ ನಾಗರಿಕರ ಸೇವೆಗಳು, ಡಿಜಿಟಲ್ ಆಡಳಿತ ಮತ್ತು ಭದ್ರತೆಯನ್ನು ಬಲಪಡಿಸಲು 5 ಪ್ರಮುಖ ಡಿಜಿಟಲ್ ಉಪಕ್ರಮಗಳನ್ನು ಪ್ರಾರಂಭಿಸಿದೆ.
- ಸಮಾವೇಶ: 17ನೇ ಆಧಾರ್ ದಿನದ (Aadhaar Day) ಅಂಗವಾಗಿ ಕೊಲ್ಕತ್ತಾದಲ್ಲಿ ‘ಆಧಾರ್ ಸಂವಾದ’ (Aadhaar Samvaad) ಕಾರ್ಯಕ್ರಮ ನಡೆಯಿತು.
- ದಿನಾಂಕ: ಸೆಪ್ಟೆಂಬರ್ 29, 2026.
- ಮುಖ್ಯ ಅತಿಥಿ: ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಹಾಗೂ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರಾದ ಜಿಟಿನ್ ಪ್ರಸಾದ್ (Jitin Prasada).
- ಪ್ರಮುಖ ಉದ್ದೇಶ: ಆಧಾರ್ ದೃಢೀಕರಣ (Authentication), ಡಿಜಿಟಲ್ ಸೇವೆಗಳ ಸುಲಭ ಲಭ್ಯತೆ ಮತ್ತು ಆಡಳಿತ (Good Governance).
➤ UIDAI ಚಾಲನೆ ನೀಡಿದ 5 ಹೊಸ ಉಪಕ್ರಮಗಳು:
1. ePDS ಗಾಗಿ ಫೇಸ್ ಅಥೆಂಟಿಕೇಶನ್ (Face Authentication for ePDS)
- ವಿವರಣೆ: ಇ-ಸಾರ್ವಜನಿಕ ವಿತರಣಾ ವ್ಯವಸ್ಥೆ (ePDS - Electronic Public Distribution System) ಅಡಿಯಲ್ಲಿ ಪಡಿತರ ಚೀಟಿದಾರರಿಗೆ ಮುಖದ ಗುರುತಿನ ಮೂಲಕ (Face Authentication) ಆಹಾರ ಧಾನ್ಯ ವಿತರಿಸುವ ಸೌಲಭ್ಯ.
- ಪ್ರಯೋಜನ: ಬೆರಳಚ್ಚು (Fingerprint) ಸಿಗದ ಅಥವಾ ಬಯೋಮೆಟ್ರಿಕ್ ಸಮಸ್ಯೆ ಎದುರಿಸುವ ಹಿರಿಯ ನಾಗರಿಕರು ಮತ್ತು ಕಾರ್ಮಿಕರಿಗೆ ಇದು ಅತ್ಯಂತ ಸಹಕಾರಿ.
- ಸಹಯೋಗ: UIDAI, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಹಾಗೂ ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿವೆ.
2. ಸ್ವೀಕ್ ಪೋರ್ಟಲ್ 2.0 (SWIK Portal 2.0)
- ಉದ್ದೇಶ: ‘ಉತ್ತಮ ಆಡಳಿತಕ್ಕಾಗಿ ಆಧಾರ್ ದೃಢೀಕರಣ ನಿಯಮಗಳು 2020’ (Aadhaar Authentication for Good Governance Rules) ಅಡಿಯಲ್ಲಿ ಸರ್ಕಾರೇತರ ಸಂಸ್ಥೆಗಳಿಗೆ (Non-Government Entities) ಆಧಾರ್ ಬಳಕೆಗೆ ವೇಗವಾಗಿ ಅನುಮೋದನೆ ನೀಡುವುದು.
3. Sub-AUA / Sub-KUA (LITE) ಫ್ರೇಮ್‌ವರ್ಕ್
- ಉದ್ದೇಶ: ಕಡಿಮೆ ಪ್ರಮಾಣದ ಆಧಾರ್ ದೃಢೀಕರಣ (Low-volume authentication) ಅಗತ್ಯವಿರುವ ಸಣ್ಣ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಸುಲಭವಾಗಿ ಸೇವೆ ನೀಡಲು ರೂಪಿಸಲಾಗಿದೆ.
- ಪ್ರಯೋಜನ: ಪ್ರತ್ಯೇಕ ಮೂಲಸೌಕರ್ಯ (Infrastructure) ನಿರ್ಮಿಸುವ ಅಗತ್ಯವಿಲ್ಲದೆ, ಚಾಲ್ತಿಯಲ್ಲಿರುವ AUA/KUA ಮೂಲಸೌಕರ್ಯವನ್ನೇ ಬಳಸಿಕೊಳ್ಳಬಹುದು.
- AUA: Authentication User Agency
- KUA: e-KYC User Agency
4. ಟೋಕನ್ ನಿರ್ವಹಣಾ ವ್ಯವಸ್ಥೆ (Token Management System): UIDAI ನ ರಾಜ್ಯ ಮತ್ತು ಪ್ರಾದೇಶಿಕ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಸೇವೆಗಳನ್ನು ಸುಲಭವಾಗಿ ಮತ್ತು ಸರತಿಯ ಸಾಲಿನಲ್ಲಿ ಪಡೆಯಲು ಹೊಸ Token Management System ಅನ್ನು ಪರಿಚಯಿಸಲಾಗಿದೆ.
5. ನವೀಕೃತ ವೆಬ್‌ಸೈಟ್ ಮತ್ತು ಕೆರಿಯರ್ ಪೋರ್ಟಲ್ (New UIDAI Website & Career Portal):
- UIDAI ವೆಬ್‌ಸೈಟ್ ಅನ್ನು ಹೊಸ ರೂಪದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಪ್ರಸ್ತುತ 13 ಭಾಷೆಗಳನ್ನು ಬೆಂಬಲಿಸುತ್ತದೆ (ಮುಂದೆ 23 ಭಾಷೆಗಳಿಗೆ ವಿಸ್ತರಿಸುವ ಯೋಜನೆಯಿದೆ).
- ನಿಯೋಜನೆ (Deputation) ಆಧಾರದ ಮೇಲೆ ಉದ್ಯೋಗಾವಕಾಶಗಳಿಗೆ ಅರ್ಜಿ ಸಲ್ಲಿಸಲು ಹೊಸ Career Portal ಅನ್ನು ಲಾಂಚ್ ಮಾಡಲಾಗಿದೆ.