* ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಶನಿವಾರ(ಆಗಸ್ಟ್ 5) ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಟ್ವಿಟರ್ ಮೂಲಕ ಮಾಹಿತಿ ನೀಡಿದೆ.
* ಬೆಂಗಳೂರಿನಲ್ಲಿರುವ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ಕೇಂದ್ರದಿಂದ ಚಂದ್ರಯಾನ್-3 ನೌಕೆಯನ್ನು ಚಂದ್ರನ್ ಕಕ್ಷೆಗೆ ಸೇರಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.
* ಚಂದ್ರಯಾನ್-3 ಮುಂದಿನ ಹತ್ತು ದಿನಗಳಲ್ಲಿ ಚಂದ್ರನ ದಕ್ಷಿಣ ಧ್ರುವದ ಪ್ರದೇಶದ ಒಳಗೆ ಇಳಿಯಲು ಸೂಕ್ತವಾದ ಜಾಗವನ್ನು ನಿರ್ಧರಿಸಲಾಗುತ್ತದೆ. ಆಗಸ್ಟ್ 23ರ ಸಂಜೆ 5.47ರ ಸುಮಾರಿಗೆ ಚಂದ್ರಯಾನ ನೌಕೆಯ ಲ್ಯಾಂಡರ್ ಕಕ್ಷೆಯಿಂದ ಹೊರಬರುತ್ತದೆ ಮತ್ತು ಸುಗಮ ಲ್ಯಾಂಡಿಂಗ್‌ಗೆ ಪ್ರಯತ್ನ ಆರಂಭಿಸುತ್ತದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.
ಸೋಮವಾರ, 07 ಆಗಸ್ಟ್ 2023
1:55 ಅಪರಾಹ್ನ
Daily PDF
ಚಂದ್ರಯಾನ-3 : ಯಶಸ್ವಿಯಾಗಿ ಚಂದ್ರನ ಕಕ್ಷೆ ಪ್ರವೇಶಿಸಿದ ಇಸ್ರೋ ನೌಕೆ
Authored by:
Yallamma G