* ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಗಾಗಿ ಕೌಂಟ್‌ಡೌನ್‌ಗಳಿಗೆ ಧ್ವನಿ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ಎನ್ ವಲರಮತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
* ವಲರಮತಿ ಅವರು ತಮಿಳುನಾಡಿನ ಅರಿಯಲೂರು ಮೂಲದವರಾದ ಇವರು ಜುಲೈ 31, 1959 ರಂದು ಜನಿಸಿದರು, 1984 ರಲ್ಲಿ ISRO ಗೆ ಸೇರಿದರು. ಅವರು RISAT-1 ರ ಯೋಜನಾ ನಿರ್ದೇಶಕರಾಗಿದ್ದರು, RISAT-1 ಇದು ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರಾಡಾರ್ ಇಮೇಜಿಂಗ್ ಉಪಗ್ರಹ ಮತ್ತು ದೇಶದ ಎರಡನೇ ಅಂತಹ ಉಪಗ್ರಹವಾಗಿದೆ.
* "ಚಂದ್ರಯಾನ 3 ಸೇರಿದಂತೆ ಅನೇಕ @isro ಉಡಾವಣಾ ಕೌಂಟ್‌ಡೌನ್‌ಗಳ ಹಿಂದಿನ ಧ್ವನಿ ಎನ್ ವಲರಮತಿ ಜಿ ಅವರ ನಿಧನದ ಬಗ್ಗೆ ಕೇಳಲು ದುಃಖವಾಗಿದೆ" ಎಂದು ವಾಣಿಜ್ಯೋದ್ಯಮ, ಕೌಶಲ್ಯ ಅಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವರು ಹೇಳಿದ್ದಾರೆ.
ಬುಧವಾರ, 06 ಸೆಪ್ಟೆಂಬರ್ 2023
10:21 ಪೂರ್ವಾಹ್ನ
Daily PDF
ಚಂದ್ರಯಾನ-3 ಕೌಂಟ್ಡೌನ್ನ ಹಿಂದಿನ ಧ್ವನಿಯಾಗಿದ್ದ ಇಸ್ರೋ ವಿಜ್ಞಾನಿ ಎನ್ ವಲರಮತಿ ನಿಧನ
Authored by:
Yallamma G