* ನಗರದ ಅರಮನೆ ಆವರಣದಲ್ಲಿ ನ.29 ರಿಂದ ಡಿ.1ರ ವರೆಗೆ 26ನೇ ಆವೃತ್ತಿಯು ಬೆಂಗಳೂರು ನಗರದಲ್ಲಿ ತಂತ್ರಜ್ಞಾನ ಶೃಂಗಸಭೆ ನಡೆಯಲಿದೆ.
* 26ನೇ ತಂತ್ರಜ್ಞಾನ ಶೃಂಗಸಭೆಯಲ್ಲಿ ಎಲೆಕ್ಟ್ರಾನಿಕ್ಸ್, ನವೋದ್ಯಮಗಳು, ಅಂತರ ರಾಷ್ಟ್ರೀಯ ಉಪಕರಣಗಳ ಪ್ರದರ್ಶನ, ದೇಶಿಯ, ಜಾಗತಿಕ ಹೂಡಿಕೆದಾರರ, ಸಮಾವೇಶ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
* ಉದ್ಯಮ ಅಂತರ ಸಾಧಕ ಪ್ರಶಸ್ತಿಗಳು, ನವೋದ್ಯಮದ ಪ್ರೋತ್ಸಾಹ, ಗ್ರಾಮೀಣ ಮಾಹಿತಿ ತಂತ್ರಜ್ಞಾನ, ಜೈವಿಕ ವಿಭಾಗದ ರಸಪ್ರಶ್ನೆಗಳು, ಜೈವಿಕ ಪೋಸ್ಟರ್‌ಗಳ ಬಗ್ಗೆ ಸಮ್ಮೇಳನಗಳು ಜರುಗಲಿವೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಸೆಪ್ಟೆಂಬರ್ 04 ರಂದು ಮಾಹಿತಿ ನೀಡಿದರು.
* ಬೆಂಗಳೂರು ಟೆಕ್ 26ನೇ ಆವೃತ್ತಿ ಶೃಂಗಸಭೆಯಲ್ಲಿ ಆಸ್ಟ್ರೇಲಿಯಾ, ಫ್ರಾನ್ಸ್, ಜಪಾನ್, ನೆದರ್‌ಲ್ಯಾಂಡ್, ಇಸ್ರೇಲ್, ಇಂಗ್ಲೆಂಡ್, ಸ್ವಿಡ್ಜರ್‌ಲ್ಯಾಂಡ್ ಸೇರಿ ಸುಮಾರು ಐವತ್ತಕ್ಕೂ ಹೆಚ್ಚು ದೇಶಗಳು ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಬುಧವಾರ, 06 ಸೆಪ್ಟೆಂಬರ್ 2023
10:54 ಪೂರ್ವಾಹ್ನ
Daily PDF
ನವೆಂಬರ್ 29 ರಿಂದ ಡಿಸೆಂಬರ್ 1 ರವರೆಗೆ ತಂತ್ರಜ್ಞಾನ ಶೃಂಗಸಭೆ
Authored by:
Bhagya R K