* ಭವಿಷ್ಯದ ಗಣಿಗಾರಿಕೆಗಾಗಿ ಭಾರತದ ಗಣಿ ಸಚಿವಾಲಯವು 9 ರಾಜ್ಯಗಳಲ್ಲಿ ಪರಿಶೋಧನೆಯಲ್ಲಿರುವ ಸುಮಾರು 22 ನಿರ್ಣಾಯಕ ಖನಿಜ ಬ್ಲಾಕ್ ಗಳನ್ನು ಗುರುತಿಸಿದೆ.
* ಈ ಕನಿಜ ಬ್ಲಾಕ್ ಗಳಲ್ಲಿ ಕೋಬಾಲ್ಟ್, ಟೈಟಾನಿಯಂ, ಗ್ಯಾಲಿಯಂ, ವೆನಾಡಿಯಂ, ಟಂಗಸ್ಟೆನ್, ಲಿಥಿಯಂ ಮತ್ತು ಭೂಮಿಯ ಅಪರೂಪದ ಅಂಶಗಳಂತಹ ಪ್ರಮುಖ ನಿಕ್ಷೇಪಗಳನ್ನು ಒಳಗೊಂಡಿರುತ್ತವೆ.
* ಇನ್ನೂ ಹೆಚ್ಚಿನ ಬ್ಲಾಕ್ ಗಳನ್ನು ಸರ್ಕಾರಿ ಸಂಸ್ಥೆಗಳಾದ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ( GSI ) ಮತ್ತು ಮಿನರಲ್ ಎಕ್ಸ್ ಪ್ಲೋರೇಷನ್ ಕಾರ್ಪೊರೇಷನ್ ಲಿಮಿಟೆಡ್ ( ಎಂಇಸಿಎಲ್ ) ಸಮೀಕ್ಷೆ ನಡೆಸುತ್ತಿವೆ.
* ನಿರ್ಣಾಯಕ ಖನಿಜಗಳು ಎಂದರೆ - ಹೈಟೆಕ್ ಕೈಗಾರಿಕೆಗಳು, ಶುದ್ಧ ಶಕ್ತಿ ತಂತ್ರಜ್ಞಾನಗಳು, ರಕ್ಷಣಾ ಏರೋ ಸ್ಪೇಸ್ ಮತ್ತು ಎಲೆಕ್ಟ್ರಾನಿಕ್ಸ್ ಗಳಿಗೆ ನಿರ್ಣಾಯಕವಾದ ವಿಶೇಷ ಲೋಹಗಳು ಮತ್ತು ಲೋಹವಿಲ್ಲದ ವಸ್ತುಗಳನ್ನು ಉಲ್ಲೇಖಿಸುತ್ತದೆ.
* ಖನಿಜಗಳನ್ನು ಹೊಂದಿರುವ ಪ್ರಮುಖ ರಾಜ್ಯಗಳೆಂದರೆ - ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್, ಛತ್ತೀಸ್ಗಡ್, ತಮಿಳುನಾಡು, ಅರುಣಾಚಲ ಪ್ರದೇಶ, ಬಿಹಾರ್, ಅಸ್ಸಾಂ ಮತ್ತು ಮಧ್ಯಪ್ರದೇಶದಂತಹ ಸಮೃದ್ಧ ರಾಜ್ಯಗಳಲ್ಲಿ ನಿರೀಕ್ಷಿತ ಬ್ಲಾಕ್ ಗಳಿವೆ.
* ಪ್ರಮುಖ ರಾಜ್ಯಗಳಲ್ಲಿ ಇರುವ ಪ್ರಮುಖ ಖನಿಜಗಳನ್ನು ನೋಡುವುದಾದರೆ, ಕರ್ನಾಟಕದಲ್ಲಿ ಕೊಬಾಲ್ಟ್, ಜಾರ್ಖಂಡಿನಲ್ಲಿ ಟೈಟಾನಿಯಂ ಗ್ಯಾಲಿಯಂ ಮತ್ತು ವೆನಾಡಿಯಂ, ಮಹಾರಾಷ್ಟ್ರ ಛತ್ತೀಸ್ಗಡ ರಾಜಸ್ಥಾನ್ ಮತ್ತು ತಮಿಳುನಾಡಿನಲ್ಲಿ ಟಂಗ್ ಸ್ಟನ್ ನಿಕ್ಷೇಪಗಳು ಮತ್ತು ಅರುಣಾಚಲ್ ಪ್ರದೇಶ್ ಅಸ್ಸಾಂ ಮತ್ತು ಬಿಹಾರದಲ್ಲಿ ವೆನಡಿಯಂ ನಿಕ್ಷೇಪಗಳನ್ನು ಇಲ್ಲಿಯವರೆಗೆ ಗುರುತಿಸಲಾದ ನಿರ್ದಿಷ್ಟ ಕನಿಜಗಳು.
* ಗಣಿ ವಿರಳ ಖನಿಜಗಳ ಹಕ್ಕುಗಳನ್ನು ಹರಾಜು ಮಾಡುವುದರಿಂದ ಭಾರತವು ತಂತ್ರಜ್ಞಾನ ಕೈಗಾರಿಕೆಗಳಿಗೆ ಆಮದುಗಳನ್ನು ಕಡಿಮೆ ಅವಲಂಬಿಸಲು ಸಹಾಯ ಮಾಡುತ್ತದೆ.
ಭವಿಷ್ಯದ ಗಣಿಗಾರಿಕೆಗೆ 22 ನಿರ್ಣಾಯಕ ಮಿನರಲ್ ಬ್ಲಾಕ್ ಗಳನ್ನು ಗುರುತಿಸಿದ ಭಾರತ
Published by Yallamma G
28 ಡಿಸೆಂಬರ್ 2023