* 'ಸೇನಾ ಸಲಕರಣೆಗಳನ್ನು ಜಂಟಿಯಾಗಿ ತಯಾರಿಸುವ ಯೋಜನೆ ಕುರಿತ ರಷ್ಯಾ ಹಾಗೂ ಭಾರತ ಮಾತುಕತೆಗೆ ಸ್ಪಷ್ಟ ಚಿತ್ರಣ ದೊರೆತಿದೆ' ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲ್ಯಾಪ್ರೋ ಅವರು ತಿಳಿಸಿದ್ದಾರೆ.
* ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಐದು ದಿನಗಳ ಕಾಲ ರಷ್ಯಾಗೆ ಪ್ರವಾಸದಲ್ಲಿದ್ದಾರೆ. ಈ ವೇಳೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಅವರೊಂದಿಗೆ ಜೈಶಂಕರ್ ಮಾತುಕತೆ ನಡೆಸಿದರು.
* ಸಚಿವ ಸೆರ್ಗೆ ಅವರು, 'ಸೇನಾ ಸಲಕರಣೆ ತಯಾರಿಕೆ ಕುರಿತ ಮಾತುಕತೆಯು ಎರಡೂ ದೇಶಗಳ ಹಿತಾಸಕ್ತಿಗಳ ಅನುಗುಣವಾಗಿಯೇ ಇತ್ತು' ಎಂದು ತಿಳಿಸಿದರು.
ಗುರುವಾರ, 28 ಡಿಸೆಂಬರ್ 2023
4:50 ಅಪರಾಹ್ನ
Daily PDF
ಭಾರತ-ರಷ್ಯಾ ಜಂಟಿಯಾಗಿ ಸೇನಾ ಸಲಕರಣೆ ತಯಾರಿಕೆ ಮಾತುಕತೆ
Authored by:
Yallamma G