Loading..!

ಕೇಂದ್ರ ಲೋಕ ಸೇವಾ ಆಯೋಗ(UPSC)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Tags: Degree PG
Published by: Bhagya R K
|
ಕೇಂದ್ರ ಲೋಕ ಸೇವಾ ಆಯೋಗ(UPSC)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೇಂದ್ರ ಲೋಕಸೇವಾ ಆಯೋಗದಲ್ಲಿ (UPSC) ಖಾಲಿ ಇರುವ ಒಟ್ಟು 29 ಸ್ಪೆಷಲಿಸ್ಟ್ ಗ್ರೇಡ್ III, ಅಸಿಸ್ಟಂಟ್ ಪ್ರೊಫೆಸರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 14-09-2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಹುದ್ದೆಗಳ ವಿವರ : 29 
ಸ್ಪೆಷಲಿಸ್ಟ್ ಗ್ರೇಡ್ III - 09 
ಅಸಿಸ್ಟೆಂಟ್ ಡೈರೆಕ್ಟರ್ ಸೆನ್ಸಸ್ ಅಪೇರೇಶಷನ್ - 01 
ಡೆಪ್ಯುಟಿ  ಡೈರೆಕ್ಟರ್ - 10 
ಅಸಿಸ್ಟೆಂಟ್ ಪ್ರೊಫೆಸರ್ - 09

Job Overview
No. of posts
29
Start Date
5 ಸೆಪ್ಟೆಂಬರ್ 2023
End Date
14 ಸೆಪ್ಟೆಂಬರ್ 2023
Employment Type
FULL_TIME
Organization
KPSC Vaani (Website)
Location
ಭಾರತದಾದ್ಯಂತ, KA,
Selection Procedure:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಸಂದರ್ಶನ ನಡೆಸುವ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗುವಂತೆ Ph.D/ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.

Fee:

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಸಾಮಾನ್ಯ ಮತ್ತು OBC ಅಭ್ಯರ್ಥಿಗಳು ರೂ 25/- ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
SC/ST/ಮಹಿಳೆ/PWD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ಇರಲಿದೆ.

Age Limit:

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 35 ವರ್ಷ ಮತ್ತು ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PWD ಅಭ್ಯರ್ಥಿಗಳು: 10 ವರ್ಷಗಳು 

To Download the official notification
Related Tags: Degree PG

Comments