ಬ್ರೇಕಿಂಗ್: ರೈಲ್ವೆ ಇಲಾಖೆಯಲ್ಲಿ ಬೃಹತ್ ಉದ್ಯೋಗಾವಕಾಶ! 11,127 ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗಳಿಗೆ ಅರ್ಜಿ ಆಹ್ವಾನ
Published by Yallamma G
16 ಮೇ 2026
Indian Railway
ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕೆಂದು ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಭಾರತ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ರೈಲ್ವೆ ನೇಮಕಾತಿ ಮಂಡಳಿಯು (RRB) 2026ನೇ ಸಾಲಿನ ಬೃಹತ್ ನೇಮಕಾತಿಗೆ ಚಾಲನೆ ನೀಡಿದ್ದು, ದೇಶಾದ್ಯಂತ ಒಟ್ಟು 11,127 ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರೀಕೃತ ಉದ್ಯೋಗ ಅಧಿಸೂಚನೆಯನ್ನು (CEN No. 01/2026) ಹೊರಡಿಸಿದೆ.
ಭಾರತೀಯ ರೈಲ್ವೆ ಇಲಾಖೆಯಳ್ಳಿ ಖಾಲಿ ಇರುವ ಒಟ್ಟು 11,127 ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮೇ 15 ರಿಂದ 14-ಜೂನ್-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಗಳ ವಿವರ, ವಯೋಮಿತಿ, ವೇತನ, ಅರ್ಜಿ ಸಲ್ಲಿಸುವ ದಿನಾಂಕ ಹಾಗೂ ಆಧಾರ್ ಕಾರ್ಡ್ ನಿಯಮಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ನೇಮಕಾತಿಯ ಪ್ರಮುಖ ಮುಖ್ಯಾಂಶಗಳು (Highlights)
- ಇಲಾಖೆಯ ಹೆಸರು: ಭಾರತೀಯ ರೈಲ್ವೆ / ರೈಲ್ವೆ ನೇಮಕಾತಿ ಮಂಡಳಿ (RRB).
- ಅಧಿಸೂಚನೆ ಸಂಖ್ಯೆ: CEN No. 01/2026.
- ಹುದ್ದೆಯ ಹೆಸರು: ಅಸಿಸ್ಟೆಂಟ್ ಲೋಕೋ ಪೈಲಟ್ (Assistant Loco Pilot - ALP).
- ಒಟ್ಟು ಹುದ್ದೆಗಳ ಸಂಖ್ಯೆ: 11,127 ಹುದ್ದೆಗಳು.
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 15-05-2026.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-06-2026 (ರಾತ್ರಿ 23:59 ರವರೆಗೆ).
- ಅರ್ಜಿ ಸಲ್ಲಿಸುವ ವಿಧಾನ: ಕೇವಲ ಆನ್‌ಲೈನ್ ಮೂಲಕ ಮಾತ್ರ (https://www.rrbapply.gov.in).
ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ಒಟ್ಟು 11,127 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಪ್ರಮುಖ ವಲಯಗಳ ಹುದ್ದೆಗಳ ವಿವರ ಇಲ್ಲಿದೆ:
- ಸೌತ್ ವೆಸ್ಟರ್ನ್ ರೈಲ್ವೆ (ನೈರುತ್ಯ ರೈಲ್ವೆ - ಕರ್ನಾಟಕ ಭಾಗ): 200 ಹುದ್ದೆಗಳು.
- ಸೆಂಟ್ರಲ್ ರೈಲ್ವೆ: 1400 ಹುದ್ದೆಗಳು.
- ಈಸ್ಟ್ ಕೋಸ್ಟ್ ರೈಲ್ವೆ: 1625 ಹುದ್ದೆಗಳು.
- ನಾರ್ತ್ ವೆಸ್ಟರ್ನ್ ರೈಲ್ವೆ: 6000 ಹುದ್ದೆಗಳು (ಅತಿ ಹೆಚ್ಚು).
- ಸೌತ್ ಈಸ್ಟರ್ನ್ ರೈಲ್ವೆ: 1533 ಹುದ್ದೆಗಳು.
- ಸೌತರ್ನ್ ರೈಲ್ವೆ: 250 ಹುದ್ದೆಗಳು.
- ಸಿಕಂದರಾಬಾದ್, ಮುಂಬೈ, ಬೆಂಗಳೂರು ಸೇರಿದಂತೆ ವಿವಿಧ RRB ವಲಯಗಳಲ್ಲಿ ನೇಮಕಾತಿ ನಡೆಯಲಿದೆ.
ಶೈಕ್ಷಣಿಕ ಅರ್ಹತೆ: RRB ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿ , ITI, ಡಿಪ್ಲೊಮಾ, ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ (Age Limit)
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯನ್ನು 01-07-2026 ಕ್ಕೆ ಅನ್ವಯವಾಗುವಂತೆ ಲೆಕ್ಕಹಾಕಲಾಗುತ್ತದೆ.
ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷಗಳ ಒಳಗಿರಬೇಕು.
- ವಯೋಮಿತಿ ಸಡಿಲಿಕೆ:
- ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು
- SC/ST ಅಭ್ಯರ್ಥಿಗಳು: 5 ವರ್ಷಗಳು
- ಪಿಡಬ್ಲ್ಯೂಬಿಡಿ (ಯುಆರ್/ ಇಡಬ್ಲ್ಯೂಎಸ್) ಅಭ್ಯರ್ಥಿಗಳು: 10 ವರ್ಷಗಳು
- ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳು: 13 ವರ್ಷಗಳು
- ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳು: 15 ವರ್ಷಗಳು
ವೇತನ ಶ್ರೇಣಿ (Salary Details)
ಆಯ್ಕೆಯಾಗುವ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ (7th CPC) ಪೇ ಲೆವೆಲ್-2 ರ ಅಡಿಯಲ್ಲಿ ಆರಂಭಿಕ ಮೂಲ ವೇತನವಾಗಿ ರೂ. 19,900/- ನೀಡಲಾಗುವುದು. ಇದರ ಜೊತೆಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಭತ್ಯೆಗಳು ಲಭ್ಯವಿರುತ್ತವೆ.
ಆಯ್ಕೆ ಪ್ರಕ್ರಿಯೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ಪಿಇಟಿ/ ವೈದ್ಯಕೀಯ ಪರೀಕ್ಷೆ/ ದಾಖಲೆ ಪರಿಶೀಲನೆ
- ಸಂದರ್ಶನ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಶೇಷ ಚೇತನರು, ಮಹಿಳೆ ಯರು, ತೃತೀಯ ಲಿಂಗಿಗಳು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 250 ರೂ. ಹಾಗೂ ಉಳಿದವರು 500 ರೂ. ಶುಲ್ಕ ಪಾವತಿಸ ಬೇಕಾಗುತ್ತದೆ. ಇದರಲ್ಲಿ 250 ರೂ. ಶುಲ್ಕವನ್ನು ಸಂಪೂರ್ಣ ವಾಗಿ ಅಭ್ಯರ್ಥಿಗಳಿಗೆ ಹಿಂತಿರುಗಿಸಲಾಗುತ್ತದೆ. 500 ರೂ. ಶುಲ್ಕ ಪಾವತಿಸಿದ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ಪರೀಕ್ಷೆಯ ನಂತರ 400 ರೂ. ಅನ್ನು ರೀಫಂಡ್ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಇದು ಹೊಸ ನೇಮಕಾತಿ ಅಧಿಸೂಚನೆಯಾಗಿದ್ದು, ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
- ಅರ್ಜಿ ಸಲ್ಲಿಸುವ ಮಾಧ್ಯಮ: ಅರ್ಜಿಗಳನ್ನು ಸಂಪೂರ್ಣವಾಗಿ ಕೇವಲ ಆನ್‌ಲೈನ್ ಮೂಲಕ (ONLINE MODE ONLY) ಮಾತ್ರ ಸಲ್ಲಿಸಬೇಕು.
- ಅಧಿಕೃತ ವೆಬ್‌ಸೈಟ್ ಲಿಂಕ್: ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು https://www.rrbapply.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
- ಪ್ರಮುಖ ದಿನಾಂಕಗಳು: ಆನ್‌ಲೈನ್ ಅರ್ಜಿ ಸಲ್ಲಿಕೆಯು 15-05-2026 ರಂದು ಪ್ರಾರಂಭವಾಗಲಿದ್ದು, 14-06-2026 (ರಾತ್ರಿ 23:59 ರವರೆಗೆ) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
- ಆಧಾರ್ ಪರಿಶೀಲನೆ (ಅತ್ಯಂತ ಪ್ರಮುಖ ಹಂತ): ಆನ್‌ಲೈನ್ ಅರ್ಜಿ ಸಲ್ಲಿಸುವ ಮುನ್ನ, ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ಜನ್ಮ ದಿನಾಂಕವು ನಿಮ್ಮ 10ನೇ ತರಗತಿ (SSLC) ಅಂಕಪಟ್ಟಿಯಲ್ಲಿರುವ ವಿವರಗಳಿಗೆ 100% ರಷ್ಟು ಹೊಂದಾಣಿಕೆಯಾಗುವಂತೆ ಅಪ್ಡೇಟ್ ಮಾಡಿಸಿಕೊಳ್ಳಬೇಕು.
- ಬಯೋಮೆಟ್ರಿಕ್ ಅಪ್ಡೇಟ್: ಅರ್ಜಿ ತುಂಬುವ ಮೊದಲು ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಇತ್ತೀಚಿನ ಫೋಟೋ ಮತ್ತು ಬಯೋಮೆಟ್ರಿಕ್ಸ್ (ಬೆರಳಚ್ಚು ಹಾಗೂ ಕಣ್ಣಿನ ಪಾಪೆ) ಅಪ್ಡೇಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅರ್ಜಿ ಸಲ್ಲಿಸುವ ಸಮಯದಲ್ಲಿ ಆಧಾರ್ ಬಳಸಿ ಪ್ರಾಥಮಿಕ ವಿವರಗಳನ್ನು ಪರಿಶೀಲಿಸಿಕೊಳ್ಳುವಂತೆ ಆಯೋಗ ಸೂಚಿಸಿದೆ.
ಅರ್ಜಿ ಸಲ್ಲಿಸುವ ಮುನ್ನ ಆಧಾರ್ (Aadhaar) ಕುರಿತ ಪ್ರಮುಖ ನಿಯಮಗಳು
ಈ ಬಾರಿ ರೈಲ್ವೆ ಇಲಾಖೆಯು ಅರ್ಜಿ ಸಲ್ಲಿಕೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ:
- ಆನ್‌ಲೈನ್ ಅರ್ಜಿ ಸಲ್ಲಿಸುವಾಗ ತೊಂದರೆ ಅಥವಾ ವಿಳಂಬವನ್ನು ತಪ್ಪಿಸಲು, ಅಭ್ಯರ್ಥಿಗಳು ತಮ್ಮ ಪ್ರಾಥಮಿಕ ವಿವರಗಳನ್ನು ಆಧಾರ್ ಬಳಸಿ ಪರಿಶೀಲನೆ ಮಾಡಿಕೊಳ್ಳುವಂತೆ ಆಯೋಗವು ಸೂಚಿಸಿದೆ.
- ಆಧಾರ್ ಮೂಲಕ ಯಶಸ್ವಿ ಪರಿಶೀಲನೆ ಪಡೆಯಲು, ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ಜನ್ಮ ದಿನಾಂಕವು 10ನೇ ತರಗತಿಯ (SSLC) ಅಂಕಪಟ್ಟಿಯಲ್ಲಿರುವ ಹೆಸರು ಮತ್ತು ಜನ್ಮ ದಿನಾಂಕಕ್ಕೆ 100% ಮ್ಯಾಚ್ ಆಗಬೇಕು.
- ಆನ್‌ಲೈನ್ ಅರ್ಜಿ ತುಂಬುವ ಮೊದಲು ಆಧಾರ್ ಕಾರ್ಡ್‌ನಲ್ಲಿ ಇತ್ತೀಚಿನ ಫೋಟೋ ಮತ್ತು ಬಯೋಮೆಟ್ರಿಕ್ಸ್ (ಬೆರಳಚ್ಚು ಮತ್ತು ಕಣ್ಣಿನ ಪಾಪೆ) ಅಪ್ಡೇಟ್ ಮಾಡಿಸಿಟ್ಟುಕೊಳ್ಳುವುದು ಕಡ್ಡಾಯವಾಗಿದೆ.
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.
Job Overview
- No. of posts
- 11127
- Start Date
- 15 ಮೇ 2026
- End Date
- 14 ಜೂನ್ 2026
- Employment Type
- FULL_TIME
- Organization
- RRB (Website)
- Location
- New Delhi, DL, 110001
Apply online RRB Assistant Loco Pilot (ALP) recruitment 2026
To Buy: ನಿಮ್ಮ ಸ್ಪರ್ಧಾತ್ಮಕ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಖರೀದಿಸಿ
Related Tags:
PUC
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.