RBI Assistant 2026 Notification Out: 650 ಹುದ್ದೆ, ₹58,000 ಸಂಬಳ! ಪದವೀಧರರು ಇಂದೇ ಅರ್ಜಿ ಸಲ್ಲಿಸಿ
ಈ ನೇಮಕಾತಿ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) 650 ಸಹಾಯಕ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ ಫೆಬ್ರವರಿ 16, 2026 ರಿಂದ ಮಾರ್ಚ್ 08, 2026ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ದೇಶದಾದ್ಯಂತ ಕೇಂದ್ರ ಸರ್ಕಾರದ ಉತ್ತಮ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ.
KPSCVaani ಓದುಗರಿಗಾಗಿ ಈ ಲೇಖನದಲ್ಲಿ, ನಾವು ಭಾರತೀಯ ರಿಸರ್ವ್ ಬ್ಯಾಂಕ್ ನೇಮಕಾತಿ 2026ರ ಪ್ರಮುಖ ವಿವರಗಳು, ಖಾಲಿ ಹುದ್ದೆಗಳ ವಿವರವಾದ ಮಾಹಿತಿ, ಅರ್ಹತಾ ಮಾನದಂಡಗಳು ಮತ್ತು ಅಧಿಕೃತ ಸಂಪರ್ಕ ಮಾಹಿತಿಯನ್ನು ವಿವರವಾಗಿ ತಿಳಿಸಿದ್ದೇವೆ. ಆಸಕ್ತ ಅಭ್ಯರ್ಥಿಗಳು ಮುಂದೆ ಓದಿ ಈ ಅವಕಾಶವನ್ನು ಪಡೆಯಲು ಸಿದ್ಧರಾಗಿ!
ಹೊಸ ನೇಮಕಾತಿಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಸಿಸಲು ಇಲ್ಲಿ ಡೌನ್ಲೋಡ್ ಮಾಡಿ.
ಪ್ರಮುಖ ವಿವರಗಳು (Highlights) :
- ಸಂಸ್ಥೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)
- ಹುದ್ದೆಯ ಹೆಸರು: ಅಸಿಸ್ಟೆಂಟ್ (Assistant)
- ಒಟ್ಟು ಹುದ್ದೆಗಳು: 650
- ಬೆಂಗಳೂರು ಕಚೇರಿಯಲ್ಲಿ ಹುದ್ದೆಗಳು: 24 (SC-0, ST-3, OBC-10, EWS-9, GEN-2)
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 08, 2026
- ವೇತನ: ಆರಂಭಿಕ ಮೂಲ ವೇತನ ₹29,000/- (ಒಟ್ಟು ವೇತನ ಭತ್ಯೆಗಳೊಂದಿಗೆ ಸೇರಿ ಸುಮಾರು ₹58,514/- ಪ್ರತಿ ತಿಂಗಳು)
- ದಿನಾಂಕ 01/02/2026 ಕ್ಕೆ ಅನ್ವಯವಾಗುವಂತೆ:
- ಯಾವುದೇ ವಿಷಯದಲ್ಲಿ ಪದವಿ (Bachelor's Degree) ಪದವಿ ಹೊಂದಿರಬೇಕು.
- ಪದವಿಯಲ್ಲಿ ಕನಿಷ್ಠ 50% ಅಂಕಗಳನ್ನು ಗಳಿಸಿರಬೇಕು (SC/ST/PwBD ಅಭ್ಯರ್ಥಿಗಳಿಗೆ ಕೇವಲ ಪಾಸ್ ಕ್ಲಾಸ್ ಇದ್ದರೆ ಸಾಕು).
- ಕಂಪ್ಯೂಟರ್‌ನಲ್ಲಿ ವರ್ಡ್ ಪ್ರೊಸೆಸಿಂಗ್ ಜ್ಞಾನ ಇರಬೇಕು.
- ಗಮನಿಸಿ: ಬೆಂಗಳೂರು ಕಚೇರಿಗೆ ಅರ್ಜಿ ಸಲ್ಲಿಸುವವರು ಕನ್ನಡ ಭಾಷೆಯನ್ನು (ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು) ತಿಳಿದಿರಬೇಕು.
ದಿನಾಂಕ 01/02/2026 ಕ್ಕೆ ಅನ್ವಯವಾಗುವಂತೆ:
ಕನಿಷ್ಠ ವಯಸ್ಸ: 20 ವರ್ಷಗಳು
ಗರಿಷ್ಠ ವಯಸ್ಸು: 28 ವರ್ಷಗಳು
ಅಂದರೆ, ಅಭ್ಯರ್ಥಿಯು 02/02/1998 ಕ್ಕಿಂತ ಮೊದಲು ಮತ್ತು 01/02/2006 ರ ನಂತರ ಜನಿಸಿರಬಾರದು.
ವಯೋಮಿತಿ ಸಡಿಲಿಕೆ (Relaxation):
SC/ST: 5 ವರ್ಷಗಳು (33 ವರ್ಷಗಳವರೆಗೆ)
OBC: 3 ವರ್ಷಗಳು (31 ವರ್ಷಗಳವರೆಗೆ)
PwBD: 10 ವರ್ಷಗಳು (Gen/EWS), 13 ವರ್ಷಗಳು (OBC), 15 ವರ್ಷಗಳು (SC/ST)
ಅರ್ಜಿ ಶುಲ್ಕ (Application Fee) :
- SC/ST/PwBD/EXS ಅಭ್ಯರ್ಥಿಗಳಿಗೆ: ₹50/- (ಇಂಟಿಮೇಷನ್ ಚಾರ್ಜಸ್ ಮಾತ್ರ) + 18% GST.
- General/OBC/EWS ಅಭ್ಯರ್ಥಿಗಳಿಗೆ: ₹450/- (ಪರೀಕ್ಷಾ ಶುಲ್ಕ + ಇಂಟಿಮೇಷನ್ ಚಾರ್ಜಸ್) + 18% GST
- ಪಾವತಿ ವಿಧಾನ: ಪರೀಕ್ಷಾ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿ. ನೆಟ್ ಬ್ಯಾಂಕಿಂಗ್ ಶುಲ್ಕ ವಿಧಾನ.
ಆಯ್ಕೆಯು ಮೂರು ಹಂತಗಳಲ್ಲಿ ನಡೆಯಲಿದೆ:
- ಪೂರ್ವಭಾವಿ ಪರೀಕ್ಷೆ (Preliminary Exam): 100 ಅಂಕಗಳಿಗೆ (ಇಂಗ್ಲಿಷ್, ನ್ಯೂಮರಿಕಲ್ ಎಬಿಲಿಟಿ, ರೀಸನಿಂಗ್).
- ಮುಖ್ಯ ಪರೀಕ್ಷೆ (Main Exam): 200 ಅಂಕಗಳಿಗೆ (ರೀಸನಿಂಗ್, ಇಂಗ್ಲಿಷ್, ನ್ಯೂಮರಿಕಲ್ ಎಬಿಲಿಟಿ, ಜನರಲ್ ಅವೇರ್ನೆಸ್, ಕಂಪ್ಯೂಟರ್ ನಾಲೆಡ್ಜ್).
- ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT): ಮೈನ್ಸ್ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಸ್ಥಳೀಯ ಭಾಷೆಯಲ್ಲಿ (ಬೆಂಗಳೂರಿಗೆ - ಕನ್ನಡ) ಪರೀಕ್ಷೆ ಇರುತ್ತದೆ. ಇದರಲ್ಲಿ ಅನರ್ಹರಾದರೆ ನೇಮಕಾತಿಯಿಂದ ಹೊರಗುಳಿಯುವಿರಿ.
ಮೂಲ ವೇತನ: ₹29,000/- ₹29,000 – 78,640 ರ ಸ್ಕೇಲ್‌ನಲ್ಲಿ
ಆರಂಭಿಕ ಮಾಸಿಕ ಒಟ್ಟು ವೇತನಗಳು (HRA ಇಲ್ಲದೆ): ಅಂದಾಜು ₹58,514/-
ಹೆಚ್ಚುವರಿ ಪ್ರಯೋಜನಗಳು: HRA 15%, ಭತ್ಯೆಗಳು, ವೈದ್ಯಕೀಯ ಸೌಲಭ್ಯಗಳು, ಸಾಲಗಳು, ಇತ್ಯಾದಿ.
ಅರ್ಜಿ ಸಲ್ಲಿಸುವುದು ಹೇಗೆ?- RBI ಅಧಿಕೃತ ವೆಬ್‌ಸೈಟ್ www.rbi.org.in ಗೆ ಭೇಟಿ ನೀಡಿ.
- "Recruitment for the Post of Assistant - Panel Year 2025" ಲಿಂಕ್ ಮೇಲೆ ಕ್ಲಿಕ್ ಮಾಡಿ.
- "Click here for New Registration" ಆಯ್ಕೆ ಮಾಡಿ ನೋಂದಣಿ ಮಾಡಿಕೊಳ್ಳಿ.
- ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
- ಶುಲ್ಕ ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ (Submit).
- ಅರ್ಜಿಯ ಪ್ರಿಂಟ್ ಔಟ್ ತೆಗೆದುಕಿಟ್ಟುಕೊಳ್ಳಿ.
ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಅಪ್‌ಲೋಡ್ ಮಾಡಬೇಕಾದ ದಾಖಲೆಗಳು
- ನೇರ ಛಾಯಾಚಿತ್ರ ಸೆರೆಹಿಡಿಯುವಿಕೆ : ಮೇಲಿನ ಛಾಯಾಚಿತ್ರದ ಜೊತೆಗೆ, ಅಭ್ಯರ್ಥಿಗಳು ವೆಬ್‌ಕ್ಯಾಮ್ ಅಥವಾ ಮೊಬೈಲ್ ಫೋನ್ ಬಳಸಿ ತಮ್ಮ ನೇರ ಛಾಯಾಚಿತ್ರವನ್ನು ಸೆರೆಹಿಡಿದು ಅಪ್‌ಲೋಡ್ ಮಾಡಬೇಕಾಗುತ್ತದೆ.
- ಸ್ಕ್ಯಾನ್ ಮಾಡಿದ ಛಾಯಾಚಿತ್ರ: - 20kb-50 kb, JPEG/JPG ಸ್ವರೂಪ, 4.5×3.5 cm) ಆಯಾಮಗಳು 200 x 230 ಪಿಕ್ಸೆಲ್‌ಗಳು (ಆದ್ಯತೆ)
- ಸ್ಕ್ಯಾನ್ ಮಾಡಿದ ಸಹಿ:- 10kb-20kb, JPEG/JPG ಸ್ವರೂಪ, 140 x 60 ಪಿಕ್ಸೆಲ್‌ಗಳು (ಆದ್ಯತೆ)
- ಎಡ ಹೆಬ್ಬೆರಳಿನ ಗುರುತು:- 20kb-50 kb, JPEG/JPG ಸ್ವರೂಪ ( 200 DPI ನಲ್ಲಿ 240 x 240 ಪಿಕ್ಸೆಲ್‌ಗಳು (ಅಗತ್ಯ ಗುಣಮಟ್ಟಕ್ಕೆ ಆದ್ಯತೆ) ಅಂದರೆ 3 ಸೆಂ.ಮೀ * 3 ಸೆಂ.ಮೀ (ಅಗಲ * ಎತ್ತರ)
- ಕೈಬರಹದ ಘೋಷಣೆ ಚಿತ್ರ:- 50-100 kb, JPEG/JPG ಸ್ವರೂಪ, 200 DPI ನಲ್ಲಿ 800 x 400 ಪಿಕ್ಸೆಲ್‌ಗಳು (ಅಗತ್ಯ ಗುಣಮಟ್ಟಕ್ಕೆ ಆದ್ಯತೆ) ಅಂದರೆ 10 cm * 5 cm (ಅಗಲ * ಎತ್ತರ)
- ಕೈಬರಹದ ಘೋಷಣೆಯಲ್ಲಿ ಹೀಗೆ ಹೇಳಲಾಗಿದೆ
- "ನಾನು, ___________ (ಅಭ್ಯರ್ಥಿಯ ಹೆಸರು), ಅರ್ಜಿ ನಮೂನೆಯಲ್ಲಿ ನಾನು ಸಲ್ಲಿಸಿದ ಎಲ್ಲಾ ಮಾಹಿತಿಯು ಸರಿಯಾಗಿದೆ, ನಿಜವಾಗಿದೆ ಮತ್ತು ಮಾನ್ಯವಾಗಿದೆ ಎಂದು ಈ ಮೂಲಕ ಘೋಷಿಸುತ್ತೇನೆ. ಅಗತ್ಯವಿದ್ದಾಗ ನಾನು ಪೋಷಕ ದಾಖಲೆಗಳನ್ನು ಹಾಜರುಪಡಿಸುತ್ತೇನೆ."
ಅರ್ಜಿ ಸಲ್ಲಿಸುವ ಮುನ್ನ ಈ ದಿನಾಂಕಗಳನ್ನು ನೆನಪಿಡಿ:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: ಫೆಬ್ರವರಿ 16, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 08, 2026
- ಆನ್‌ಲೈನ್ ಪೂರ್ವಭಾವಿ ಪರೀಕ್ಷೆ (Prelims) (Tentative): ಏಪ್ರಿಲ್ 11, 2026
- ಮುಖ್ಯ ಪರೀಕ್ಷೆ (Mains) (Tentative): ಜೂನ್ 07, 2026
- ಭಾರತದ ಕೇಂದ್ರ ಬ್ಯಾಂಕಿನಲ್ಲಿ ಪ್ರತಿಷ್ಠಿತ ವೃತ್ತಿಜೀವನ
- ಆಕರ್ಷಕ ಸಂಬಳ ಮತ್ತು ಭತ್ಯೆಗಳೊಂದಿಗೆ ಸ್ಥಿರವಾದ ಕೆಲಸ
- ಅಖಿಲ ಭಾರತ ಮಟ್ಟದ ಪೋಸ್ಟಿಂಗ್ ಅವಕಾಶಗಳು
- ಅತ್ಯುತ್ತಮ ಕೆಲಸ-ಜೀವನದ ಸಮತೋಲನ
KPSCVaani : ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಕೂಡಲೇ ಅರ್ಜಿ ಸಲ್ಲಿಸಿ! ಶುಭವಾಗಲಿ!
ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ
ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ
Job Overview
- End Date
- 8 ಮಾರ್ಚ್ 2026
- Employment Type
- FULL_TIME
- Organization
- KPSC Vaani (Website)
- Location
- KA,
Apply online RBI Assistant Recruitment 2026
To Buy: ನಿಮ್ಮ ಸ್ಪರ್ಧಾತ್ಮಕ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಖರೀದಿಸಿ
Related Tags:
Degree
Comments