ಬಂಪರ್ ಉದ್ಯೋಗ: ಪವರ್ ಗ್ರಿಡ್ (PGCIL) ನಲ್ಲಿ 668 ಡಿಪ್ಲೊಮಾ & ಐಟಿಐ ಹುದ್ದೆಗಳಿಗೆ ಬೃಹತ್ ನೇಮಕಾತಿ! ವಾರ್ಷಿಕ ವೇತನ 12.7 ಲಕ್ಷ ರೂ.
ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (PGCIL) 2025 ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ, ಈ ನೇಮಕಾತಿ ಅಡಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಒಟ್ಟು 668 ಡಿಪ್ಲೊಮಾ ತರಬೇತಿ, ಜೂನಿಯರ್ ಟೆಕ್ನಿಷಿಯನ್ ಟ್ರೈನಿ ಮತ್ತು ಜೂನಿಯರ್ ಆಫೀಸರ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ನೀಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 11-ಮೇ-2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವಾಯುಯಾನ ಉದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ.
ಈ ನೇಮಕಾತಿಯಲ್ಲಿ ಒಟ್ಟು 668 ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೇಂದ್ರ ಸರಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಬ್ಲಾಗ್ ಪೋಸ್ಟ್‌ನಲ್ಲಿ, ನಾವು ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (PGCIL) ನೇಮಕಾತಿ 2026ರ ಪ್ರಮುಖ ವಿವರಗಳು, ಖಾಲಿ ಹುದ್ದೆಗಳ ವಿವರವಾದ ಮಾಹಿತಿ, ಅರ್ಹತಾ ಮಾನದಂಡಗಳು ಮತ್ತು ಅಧಿಕೃತ ಸಂಪರ್ಕ ಮಾಹಿತಿಯನ್ನು ವಿವರವಾಗಿ ಚರ್ಚಿಸಲಿದ್ದೇವೆ. ಆಸಕ್ತ ಅಭ್ಯರ್ಥಿಗಳು ಮುಂದೆ ಓದಿ ಈ ಅವಕಾಶವನ್ನು ಪಡೆಯಲು ಸಿದ್ಧರಾಗಿ!
PGCIL ಹುದ್ದೆಯ ಅಧಿಸೂಚನೆ
- ಸಂಸ್ಥೆಯ ಹೆಸರು : ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ( PGCIL )
- ಹುದ್ದೆಗಳ ಸಂಖ್ಯೆ: 668
- ಹುದ್ದೆಯ ಸ್ಥಳ: ಅಖಿಲ ಭಾರತ
- ಹುದ್ದೆಯ ಹೆಸರು: ಜೂನಿಯರ್ ಆಫೀಸರ್ & ಟೆಕ್ನಿಷಿಯನ್ ಟ್ರೈನಿ
- ಸಂಬಳ: ತಿಂಗಳಿಗೆ ರೂ. 21,000-1,08,000/-
- ಡಿಪ್ಲೊಮಾ ತರಬೇತಿ (DTE) : 479
- ಡಿಪ್ಲೊಮಾ ತರಬೇತಿ (DTC) : 111
- ಡಿಪ್ಲೊಮಾ ತರಬೇತಿ (DTS) : 9
- ಜೂನಿಯರ್ ಆಫೀಸರ್ ಟ್ರೈನಿ : 54
- ಜೂನಿಯರ್ ಟೆಕ್ನಿಷಿಯನ್ ಟ್ರೈನಿ : 15
ಶೈಕ್ಷಣಿಕ ವಿದ್ಯಾರ್ಹತೆ (Educational Qualification)
- ಡಿಪ್ಲೊಮಾ ಟ್ರೈನಿ (Electrical/Civil/Survey): ಮಾನ್ಯತೆ ಪಡೆದ ಬೋರ್ಡ್‌ನಿಂದ ಸಂಬಂಧಪಟ್ಟ ಎಲೆಕ್ಟ್ರಿಕಲ್, ಸಿವಿಲ್ ಅಥವಾ ಸರ್ವೆ ವಿಭಾಗದಲ್ಲಿ 3 ವರ್ಷದ ಫುಲ್-ಟೈಮ್ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಕನಿಷ್ಠ 70% ಅಂಕ ಪಡೆದಿರಬೇಕು, SC/ST ಮತ್ತು PwBD ಅಭ್ಯರ್ಥಿಗಳು ಕೇವಲ ಪಾಸ್ ಆಗಿದ್ದರೆ ಸಾಕು. ವಿಶೇಷ ಸೂಚನೆ: ಬಿ.ಇ / ಬಿ.ಟೆಕ್ (B.E/B.Tech) ನಂತಹ ಉನ್ನತ ವ್ಯಾಸಂಗ ಮಾಡಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ.
- ಜೂನಿಯರ್ ಆಫೀಸರ್ ಟ್ರೈನಿ - JOT (HR): ಕನಿಷ್ಠ 60% ಅಂಕಗಳೊಂದಿಗೆ 3 ವರ್ಷದ ರೆಗ್ಯುಲರ್ BBA/ BBM/ BBS ಪದವಿ ಪಡೆದಿರಬೇಕು.
- ಜೂನಿಯರ್ ಆಫೀಸರ್ ಟ್ರೈನಿ - JOT (F&A): ಇಂಟರ್ ಸಿಎ (Inter CA) ಅಥವಾ ಇಂಟರ್ ಸಿಎಂಎ (Inter CMA) ಪೂರ್ಣಗೊಳಿಸಿರಬೇಕು.
- ಜೂನಿಯರ್ ಟೆಕ್ನಿಷಿಯನ್ ಟ್ರೈನಿ (Survey): ಮಾನ್ಯತೆ ಪಡೆದ ಐಟಿಐ (ITI) ಸಂಸ್ಥೆಯಿಂದ ಸರ್ವೆಯರ್ (Surveyor) ಟ್ರೇಡ್‌ನಲ್ಲಿ 2 ವರ್ಷದ ಕೋರ್ಸ್ ಮುಗಿಸಿರಬೇಕು.
ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 11-05-2026 ರಂತೆ 27 ವರ್ಷಗಳು.
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು
SC/ST ಅಭ್ಯರ್ಥಿಗಳು: 5 ವರ್ಷಗಳು
ಪಿಡಬ್ಲ್ಯೂಬಿಡಿ (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು
ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳು: 13 ವರ್ಷಗಳು
ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳು: 15 ವರ್ಷಗಳು
ವೇತನ ಶ್ರೇಣಿ (Salary Details)
- ತರಬೇತಿ ಅವಧಿಯಲ್ಲಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲ ಒಂದು ವರ್ಷ ತರಬೇತಿ ಇರುತ್ತದೆ. ಈ ಅವಧಿಯಲ್ಲಿ ಡಿಪ್ಲೊಮಾ ಮತ್ತು JOT ಹುದ್ದೆಗಳಿಗೆ ತಿಂಗಳಿಗೆ ರೂ. 24,000/- ಸ್ಟೈಫಂಡ್ ನೀಡಲಾಗುತ್ತದೆ. ಜೂನಿಯರ್ ಟೆಕ್ನಿಷಿಯನ್ (ITI) ಹುದ್ದೆಗಳಿಗೆ ರೂ. 21,000/- ನೀಡಲಾಗುತ್ತದೆ.
- ತರಬೇತಿ ನಂತರದ ವೇತನ (CTC): ತರಬೇತಿ ಮುಗಿಸಿದ ನಂತರ ಡಿಪ್ಲೊಮಾ ಟ್ರೈನಿಗಳು ಮತ್ತು ಜೂನಿಯರ್ ಆಫೀಸರ್ ಗಳು S1 ಹಂತದಲ್ಲಿ (ರೂ. 25000 - 117500) ನೇಮಕಗೊಳ್ಳಲಿದ್ದು, ಇವರ ವಾರ್ಷಿಕ ವೇತನ ಅಂದಾಜು ರೂ. 12.7 ಲಕ್ಷ (CTC) ಇರಲಿದೆ. ಅದೇ ರೀತಿ ಜೂನಿಯರ್ ಟೆಕ್ನಿಷಿಯನ್ ಟ್ರೈನಿಗಳು W3 ಹಂತದಲ್ಲಿ (ರೂ. 21500 - 74000) ನೇಮಕಗೊಳ್ಳಲಿದ್ದು, ವಾರ್ಷಿಕ ಅಂದಾಜು ರೂ. 10.9 ಲಕ್ಷ (CTC) ವೇತನ ಪಡೆಯಲಿದ್ದಾರೆ.
ಅರ್ಜಿ ಶುಲ್ಕ:
ಡಿಪ್ಲೊಮಾ ಟ್ರೈನಿ, ಜೂನಿಯರ್ ಆಫೀಸರ್ ಟ್ರೈನಿ ಹುದ್ದೆಗಳಿಗೆಇತರ ಎಲ್ಲಾ ಅಭ್ಯರ್ಥಿಗಳು: ರೂ. 300/-
ಜೂನಿಯರ್ ಟೆಕ್ನಿಷಿಯನ್ ಟ್ರೈನಿ ಹುದ್ದೆಗಳಿಗೆ
ಇತರ ಎಲ್ಲಾ ಅಭ್ಯರ್ಥಿಗಳು: ರೂ. 200/-
SC/ST/PwBD/ಮಾಜಿ SM ಅಭ್ಯರ್ಥಿಗಳು: ಇಲ್ಲ
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ವ್ಯಾಪಾರ ಪರೀಕ್ಷೆ
- ಕಂಪ್ಯೂಟರ್ ಕೌಶಲ್ಯ ಪರೀಕ್ಷೆ
- ಸಂದರ್ಶನ
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ (How to Apply Online)
ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಮೊದಲಿಗೆ ಅಭ್ಯರ್ಥಿಗಳು ಪವರ್ ಗ್ರಿಡ್‌ನ ಅಧಿಕೃತ ವೆಬ್‌ಸೈಟ್ www.powergrid.in ಗೆ ಭೇಟಿ ನೀಡಬೇಕು.
ಹಂತ 2: ಅರ್ಜಿ ಲಿಂಕ್ ಹುಡುಕುವುದು
ವೆಬ್‌ಸೈಟ್‌ನ ಮುಖಪುಟದಲ್ಲಿ Career Section ಮೇಲೆ ಕ್ಲಿಕ್ ಮಾಡಿ. ನಂತರ Job Opportunities -> Non-Executive Positions ವಿಭಾಗಕ್ಕೆ ಹೋಗಿ, ಅಲ್ಲಿ ಕಾಣುವ "Recruitment of Non-Executive Posts 2026" ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಕಡ್ಡಾಯ ನಿಯಮ (ಬಹಳ ಮುಖ್ಯ)
ಎಲ್ಲಾ ವಲಯಗಳ (Regions) ಲಿಖಿತ ಪರೀಕ್ಷೆಯು ಒಂದೇ ದಿನ (Single Day) ನಡೆಯಲಿರುವುದರಿಂದ, ಅಭ್ಯರ್ಥಿಗಳು ಯಾವುದಾದರೂ ಒಂದು ವಲಯಕ್ಕೆ (Any One Region) ಮಾತ್ರ ಅರ್ಜಿ ಸಲ್ಲಿಸಬೇಕು. ಒಮ್ಮೆ ವಲಯವನ್ನು ಆಯ್ಕೆ ಮಾಡಿದ ಮೇಲೆ ಯಾವುದೇ ಕಾರಣಕ್ಕೂ ಅದನ್ನು ಬದಲಾಯಿಸಲು ಅವಕಾಶವಿರುವುದಿಲ್ಲ. ದಕ್ಷಿಣ ಭಾರತದ ಅಭ್ಯರ್ಥಿಗಳು SR-I ಅಥವಾ SR-II ವಲಯವನ್ನು ಆಯ್ಕೆ ಮಾಡಿಕೊಳ್ಳಬಹುದು.
ಹಂತ 4: ನೋಂದಣಿ (Registration)
ನಿಮ್ಮ ಚಾಲ್ತಿಯಲ್ಲಿರುವ ಇಮೇಲ್ ಐಡಿ (E-mail ID) ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿ ರಿಜಿಸ್ಟರ್ ಮಾಡಿಕೊಳ್ಳಿ. ಮುಂದಿನ ಸಂಪರ್ಕಗಳೆಲ್ಲವೂ ಇದೇ ಇಮೇಲ್ ಮೂಲಕ ಬರುವುದರಿಂದ ಅದನ್ನು ಕನಿಷ್ಠ ಒಂದು ವರ್ಷದವರೆಗೆ ಸಕ್ರಿಯವಾಗಿಟ್ಟುಕೊಳ್ಳಿ.\
ಹಂತ 5: ಅಗತ್ಯ ದಾಖಲೆಗಳ ಅಪ್‌ಲೋಡ್ಅರ್ಜಿ ಭರ್ತಿ ಮಾಡುವಾಗ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವುದು ಕಡ್ಡಾಯ
ಹಂತ 6: ಅರ್ಜಿ ಶುಲ್ಕ ಪಾವತಿ
ಮಾಹಿತಿಯನ್ನು ಸರಿಯಾಗಿ ತುಂಬಿದ ನಂತರ, ನಿಗದಿತ ಅರ್ಜಿ ಶುಲ್ಕವನ್ನು (ಡಿಪ್ಲೊಮಾ/ಪದವಿ ಹುದ್ದೆಗಳಿಗೆ ರೂ. 300/- ಮತ್ತು ITI ಹುದ್ದೆಗಳಿಗೆ ರೂ. 200/-) ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ (UPI) ಮೂಲಕ ಪಾವತಿಸಿ.
ಹಂತ 7: ಫೈನಲ್ ಸಬ್ಮಿಟ್ ಮತ್ತು ಪ್ರಿಂಟೌಟ್
ಶುಲ್ಕ ಪಾವತಿ ಯಶಸ್ವಿಯಾದ ನಂತರ ಅರ್ಜಿಯನ್ನು ಅಂತಿಮವಾಗಿ ಸಬ್ಮಿಟ್ (Final Submit) ಮಾಡಿ. ಭವಿಷ್ಯದ ಉಲ್ಲೇಖಕ್ಕಾಗಿ ಹಾಗೂ ದಾಖಲೆ ಪರಿಶೀಲನೆ (Document Verification) ಸಮಯಕ್ಕೆ ಬೇಕಾಗುವುದರಿಂದ, ಭರ್ತಿ ಮಾಡಿದ ಅರ್ಜಿಯ ಒಂದು ಪ್ರಿಂಟೌಟ್ (Printout) ತೆಗೆದಿಟ್ಟುಕೊಳ್ಳಿ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು :
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ (ಬಿಳಿ ಹಿನ್ನೆಲೆ ಇರಬೇಕು, 50 KB ಗಿಂತ ಕಡಿಮೆ, .jpg ಫಾರ್ಮ್ಯಾಟ್).
- ಅಭ್ಯರ್ಥಿಯ ಸಹಿ (ನೀಲಿ ಅಥವಾ ಕಪ್ಪು ಶಾಯಿಯಲ್ಲಿ, 50 KB ಗಿಂತ ಕಡಿಮೆ, .jpg ಫಾರ್ಮ್ಯಾಟ್).
- ಜನ್ಮ ದಿನಾಂಕದ ಪುರಾವೆಗಾಗಿ SSLC ಅಂಕಪಟ್ಟಿ (3 MB ಗಿಂತ ಕಡಿಮೆ, .pdf ಫಾರ್ಮ್ಯಾಟ್).
- ಡಿಪ್ಲೊಮಾ / ಐಟಿಐ / ಪದವಿಯ ಎಲ್ಲಾ ಸೆಮಿಸ್ಟರ್‌ಗಳ ಅಂಕಪಟ್ಟಿಗಳು ಮತ್ತು ಪ್ರಮಾಣಪತ್ರ (ಒಂದೇ PDF ನಲ್ಲಿ, 10 MB ಗಿಂತ ಕಡಿಮೆ).
- ಮೀಸಲಾತಿ ಕೋರುವುದಾದರೆ ಜಾತಿ ಪ್ರಮಾಣಪತ್ರ / EWS / PwBD ಪ್ರಮಾಣಪತ್ರ (.pdf ಫಾರ್ಮ್ಯಾಟ್).
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20-04-2026
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-ಮೇ-2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 11-05-2026
Job Overview
- End Date
- 11 ಮೇ 2026
- Employment Type
- FULL_TIME
- Organization
- PGCIL (Website)
- Location
- KA,
Apply online PGCIL Recruitment 2026
To Buy: ನಿಮ್ಮ ಸ್ಪರ್ಧಾತ್ಮಕ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ರಿಯಾಯಿತಿಯೊಂದಿಗೆ ಖರೀದಿಸಿ
Related Tags:
Degree
Comments