Loading..!

NHM Bengaluru Recruitment 2026: ಬೆಂಗಳೂರು ನಮ್ಮ ಕ್ಲಿನಿಕ್‌ಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿ; ಜೂನ್ 9 ಕ್ಕೆ ನೇರ ಸಂದರ್ಶನ

Tags: Degree
Published by: Yallamma G
|
NHM Bengaluru Recruitment 2026: ಬೆಂಗಳೂರು ನಮ್ಮ ಕ್ಲಿನಿಕ್‌ಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿ; ಜೂನ್ 9 ಕ್ಕೆ ನೇರ ಸಂದರ್ಶನ
ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಯೋಜನೆಯಡಿ ಬೆಂಗಳೂರು ನಗರ ಜಿಲ್ಲೆಯ 'ನಮ್ಮ ಕ್ಲಿನಿಕ್'ಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ (Walk-in Interview) ಕರೆಯಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಬೆಂಗಳೂರು ನಗರ ಜಿಲ್ಲೆ ವತಿಯಿಂದ PM-ABHIM ಕಾರ್ಯಕ್ರಮದಡಿ ಹೊಸದಾಗಿ ಅನುಮೋದನೆಯಾಗಿರುವ ಮತ್ತು ಪ್ರಸ್ತುತ ಖಾಲಿ ಇರುವ ವೈದ್ಯಾಧಿಕಾರಿಗಳು, ಶುಶೂಷಣಾಧಿಕಾರಿಗಳು ಸೇರಿದಂತೆ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನಿಯಮಾನುಸಾರ ಭರ್ತಿ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ - ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 09-ಜೂನ್-2026 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು. 

ಈ ನೇಮಕಾತಿಯ ಸಂಪೂರ್ಣ ವಿವರಗಳು, ವಿದ್ಯಾರ್ಹತೆ, ವಯೋಮಿತಿ, ವೇತನ ಮತ್ತು ಸಂದರ್ಶನ ನಡೆಯುವ ಸ್ಥಳದ ಕುರಿತು ಸಂಪೂರ್ಣ ಮಾಹಿತಿ ಕೆಳಗಿನಂತಿದೆ. 



ಹುದ್ದೆಗಳ ವಿವರ :
1ವೈದ್ಯಾಧಿಕಾರಿಗಳು (Medical Officers) : 09  
2ಶುಶೂಷಣಾಧಿಕಾರಿಗಳು (Nursing Officers)  : 06 
3ಪ್ರಯೋಗಶಾಲಾ ತಂತ್ರಜ್ಞರು (Lab Technicians) : 02 
4ಕಿರಿಯ ಆರೋಗ್ಯ ಸಹಾಯಕರು (Junior Health Assistants) : 06

KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಶೈಕ್ಷಣಿಕ ಅರ್ಹತೆಗಳು (Educational Qualification)

ಪ್ರತಿ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ವಿವರಗಳು ಹೀಗಿವೆ:
ವೈದ್ಯಾಧಿಕಾರಿಗಳು: ಅಭ್ಯರ್ಥಿಗಳು ಎಂ.ಬಿ.ಬಿ.ಎಸ್ (MBBS) ಉತ್ತೀರ್ಣರಾಗಿರಬೇಕು. ಕಡ್ಡಾಯವಾಗಿ ಇಂಟರ್ನ್‌ಶಿಪ್ (Internship) ಪೂರೈಸಿರಬೇಕು ಹಾಗೂ ಕೆ.ಎಂ.ಸಿ (KMC) ನೋಂದಣಿ ಹೊಂದಿರಬೇಕು.  
ಶುಶೂಷಣಾಧಿಕಾರಿಗಳು: ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಬಿಎಸ್‌ಸಿ ನರ್ಸಿಂಗ್ (B.Sc Nursing) ಅಥವಾ ಜಿಎನ್‌ಎಂ (GNM) ತರಬೇತಿ ಪಡೆದಿರಬೇಕು. ಕೆಎನ್‌ಸಿ (KNC) ನೋಂದಣಿ ಹೊಂದಿರಬೇಕು ಮತ್ತು ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.  
ಪ್ರಯೋಗಶಾಲಾ ತಂತ್ರಜ್ಞರು:
  • ಎಸ್.ಎಸ್.ಎಲ್.ಸಿ ಯೊಂದಿಗೆ ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ 3 ವರ್ಷದ ಕೋರ್ಸ್ ಉತ್ತೀರ್ಣರಾಗಿರಬೇಕು. ಅಥವಾ  
  • ದ್ವಿತೀಯ ಪಿ.ಯು.ಸಿ (ವಿಜ್ಞಾನ) ಯೊಂದಿಗೆ ಅರೆವೈದ್ಯಕೀಯ ಮಂಡಳಿಯ 2 ವರ್ಷದ ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ ಮುಗಿಸಿರಬೇಕು.  
  • ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯಲ್ಲಿ (PMB) ನೋಂದಣಿ ಹೊಂದಿರಬೇಕು.
ಕಿರಿಯ ಆರೋಗ್ಯ ಸಹಾಯಕರು:
  • ಎಸ್.ಎಸ್.ಎಲ್.ಸಿ ಜೊತೆಗೆ ಆರೋಗ್ಯ ಇಲಾಖೆಯಿಂದ ವಿವಿದೋದ್ದೇಶ ಮೂಲ ಆರೋಗ್ಯ ಕಾರ್ಯಕರ್ತರ ತರಬೇತಿ ಪಡೆದಿರಬೇಕು. ಅಥವಾ  
  • ಎಸ್.ಎಸ್.ಎಲ್.ಸಿ ಜೊತೆಗೆ ಅರೆ ವೈದ್ಯಕೀಯ ಮಂಡಳಿ ನಡೆಸುವ 3 ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೊಮಾ (Health Inspector Diploma) ಹೊಂದಿರಬೇಕು. ಅಥವಾ  
  • ಪಿಯುಸಿ ವಿಜ್ಞಾನ (PUC Science) ತೇರ್ಗಡೆಯಾಗಿ 2 ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೊಮಾ ಹೊಂದಿರಬೇಕು.
ಮಾಸಿಕ ವೇತನ : 
1ವೈದ್ಯಾಧಿಕಾರಿಗಳು (Medical Officers) : ₹ 60,000/-  
2ಶುಶೂಷಣಾಧಿಕಾರಿಗಳು (Nursing Officers) : ₹ 20,594/-  
3ಪ್ರಯೋಗಶಾಲಾ ತಂತ್ರಜ್ಞರು (Lab Technicians) : ₹ 20,594/-  
4ಕಿರಿಯ ಆರೋಗ್ಯ ಸಹಾಯಕರು (Junior Health Assistants) : ₹ 20,404/-

ವಯೋಮಿತಿ ವಿವರ (Age Limit)
  • ವೈದ್ಯಾಧಿಕಾರಿಗಳು & ಶುಶೂಷಣಾಧಿಕಾರಿಗಳು: ಗರಿಷ್ಠ ವಯೋಮಿತಿ 60 ವರ್ಷದೊಳಗಿರಬೇಕು.  
  • ಇತರ ಹುದ್ದೆಗಳಿಗೆ (ಲ್ಯಾಬ್ ಟೆಕ್ನಿಷಿಯನ್ ಮತ್ತು ಕಿರಿಯ ಆರೋಗ್ಯ ಸಹಾಯಕರು):
  • ಸಾಮಾನ್ಯ ವರ್ಗ (General): ಗರಿಷ್ಠ 35 ವರ್ಷ.  
  • ಹಿಂದುಳಿದ ವರ್ಗಗಳು (2A, 2B, 3A, 3B): ಗರಿಷ್ಠ 38 ವರ್ಷ.  
  • ಪ.ಜಾ / ಪ.ಪಂ / ಪ್ರವರ್ಗ-1: ಗರಿಷ್ಠ 40 ವರ್ಷ. 
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process)
  • ಈ ನೇಮಕಾತಿಯನ್ನು ಸಂಪೂರ್ಣವಾಗಿ ನೇರ ಸಂದರ್ಶನದ (Walk-in Interview) ಮೂಲಕ ಮಾಡಲಾಗುತ್ತದೆ.  
  • ಎನ್‌ಹೆಚ್‌ಎಂ (NHM) ಮಾರ್ಗಸೂಚಿಗಳಂತೆ ರೋಸ್ಟರ್ ಕಮ್ ಮೇರಿಟ್ (Roster cum Merit) ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.  
  • ಒಂದು ವೇಳೆ ಗುತ್ತಿಗೆ ನೇಮಕಾತಿಯಲ್ಲಿ ಅರ್ಹ ಮೀಸಲಾತಿ ಅಭ್ಯರ್ಥಿಗಳು ದೊರೆಯದಿದ್ದಲ್ಲಿ ಮಾತ್ರ ಸಾಮಾನ್ಯ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು. ಆಯ್ಕೆ ಸಮಿತಿಯ ತೀರ್ಮಾನವೇ ಕೊನೆಯದಾಗಿರುತ್ತದೆ.
ನೇರ ಸಂದರ್ಶನದ ವಿವರಗಳು (Interview Date & Venue)
ಆಸಕ್ತಿಯುಳ್ಳ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ದಾಖಲಾತಿಗಳು ಹಾಗೂ 1 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು.
ಸಂದರ್ಶನದ ದಿನಾಂಕ: 09 ಜೂನ್ 2026 (09.06.2026)  
ಸಂದರ್ಶನದ ಸಮಯ: ಬೆಳಿಗ್ಗೆ 10:30 ಗಂಟೆಯಿಂದ ಮಧ್ಯಾಹ್ನ 02:00 ಗಂಟೆಯವರೆಗೆ ಮಾತ್ರ.  
ಸಂದರ್ಶನ ನಡೆಯುವ ಸ್ಥಳ:
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಛೇರಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಆವರಣ,ಹಳೇ ಟಿ.ಬಿ ಆಸ್ಪತ್ರೆ, ಹಳೇ ಮದ್ರಾಸ್ ರಸ್ತೆ,ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ, ಬೆಂಗಳೂರು - 560038.  

ಉದ್ಯೋಗದ ಹೊಸ ಅಧಿಸೂಚನೆಗಳು ಈಗ ನಿಮ್ಮ ಮೊಬೈಲ್‌ನಲ್ಲಿ! ಇಂದೇ 'KPSCVaani' ಆಪ್ ಡೌನ್‌ಲೋಡ್ ಮಾಡಿ.

ಸಂದರ್ಶನಕ್ಕೆ ತರಬೇಕಾದ ಪ್ರಮುಖ ದಾಖಲೆಗಳು:

  1. ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.
  2. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಅಂಕಪಟ್ಟಿಗಳು.  
  3. ಹುದ್ದೆಗೆ ಸಂಬಂಧಿಸಿದ ಪದವಿ/ಡಿಪ್ಲೊಮಾ ಪ್ರಮಾಣಪತ್ರ ಹಾಗೂ ಎಲ್ಲಾ ವರ್ಷದ ಅಂಕಪಟ್ಟಿಗಳು.  
  4. ಸಂಬಂಧಪಟ್ಟ ಮಂಡಳಿಗಳ ನೋಂದಣಿ ಪತ್ರ (KMC / KNC / PMB Registration Certificate).  ಜಾತಿ ಮತ್ತು ಆದಾಯ ಪ್ರಮಾಣಪತ್ರ (ಅನ್ವಯಿಸುವವರಿಗೆ).  
  5. ಆಧಾರ್ ಕಾರ್ಡ್ ಅಥವಾ ಇತರೆ ಗುರುತಿನ ಚೀಟಿ.
  6. ಎಲ್ಲಾ ದಾಖಲೆಗಳ ಒಂದು ಸೆಟ್ ಸ್ವಯಂ ದೃಢೀಕೃತ ಜೆರಾಕ್ಸ್ ಪ್ರತಿಗಳು.  
ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ಆರೋಗ್ಯ ಕ್ಷೇತ್ರದ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ತಡಮಾಡದೆ ಜೂನ್ 9 ರಂದು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಿ.  

ಇಂತಹ ಇನ್ನಷ್ಟು ಕರ್ನಾಟಕ ಉದ್ಯೋಗ ಮಾಹಿತಿ, ಪ್ರಚಲಿತ ವಿದ್ಯಮಾನಗಳು ಮತ್ತು ಕೆಪಿಎಸ್‌ಸಿ ಪರೀಕ್ಷಾ ತಯಾರಿಗಾಗಿ ನಿರಂತರವಾಗಿ KPSCVaani ವೆಬ್‌ಸೈಟ್ ವೀಕ್ಷಿಸಿ.
Job Overview
End Date
9 ಜೂನ್ 2026
Employment Type
FULL_TIME
Organization
DHFWS (Website)
Location
ಜಿಲ್ಲಾ RCH ಅಧಿಕಾರಿಯವರ ಕಚೇರಿ, ಹಳೆಯ ಟಿ.ಬಿ ಆಸ್ಪತ್ರೆ ಆವರಣ, ಹಳೆಯ ಮದ್ರಾಸ್ ರಸ್ತೆ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ, ಬೆಂಗಳೂರು, ಬೆಂಗಳೂರು, KA, 560038
To Download Official Notification
Related Tags: Degree

Comments