ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಭರ್ಜರಿ ಉದ್ಯೋಗಾವಕಾಶ: SSLC, PUC ಪಾಸಾದವರಿಗೆ 93 ಹುದ್ದೆಗಳಿಗೆ ಅರ್ಜಿ ಆಹ್ವಾನ!
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ! ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರು ಖಾಲಿ ಇರುವ ವಿವಿಧ 93 ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಿದೆ. SSLC ಮತ್ತು PUC ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಇದೊಂದು ಸುವರ್ಣಾವಕಾಶವಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರು 2026 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ, ಈ ನೇಮಕಾತಿ ಅಡಿಯಲ್ಲಿ ಸೇವಕರು (Peon) , ಆದೇಶ ಜಾರಿಕಾರರು (Process Server), ಶೀಘ್ರಲಿಪಿಗಾರರು ಗ್ರೇಡ್-III (Stenographer Grade-III) ಮತ್ತು ಬೆರಳಚ್ಚು ನಕಲುಗಾರರು (Typist-Copyist) ಒಟ್ಟು 93 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮೈಸೂರು - ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 31-ಮೇ-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಮೇ 31, 2026 ರವರೆಗೆ ಕಾಲಾವಕಾಶ ನೀಡಲಾಗಿದೆ. ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ.
Visit Official website
ನೇಮಕಾತಿಯ ಸಂಕ್ಷಿಪ್ತ ವಿವರಗಳು :

ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ
ಹುದ್ದೆಗಳ ವಿವರ ಹಾಗೂ ವಿದ್ಯಾರ್ಹತೆ (Post-wise Details)
ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಒಟ್ಟು 4 ವಿವಿಧ ವಿಭಾಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ:
1. ಸೇವಕರು (Peon)
ಖಾಲಿ ಹುದ್ದೆಗಳು: 75
ವಿದ್ಯಾರ್ಹತೆ: 10ನೇ ತರಗತಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
ವೇತನ ಶ್ರೇಣಿ: ರೂ. 27,000 ರಿಂದ ರೂ. 46,675 ವರೆಗೆ
ಆಯ್ಕೆ ವಿಧಾನ:
* ಅಭ್ಯರ್ಥಿಗಳ ಆಯ್ಕೆಯನ್ನು ಕರ್ನಾಟಕ ಅಧೀನ ನ್ಯಾಯಾಲಯಗಳು (ಲಿಪಿಕ ಮತ್ತು ಇತರ
ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು 2007 ರ ಅನ್ವಯ ನೇರ ನೇಮಕಾತಿ
ಮೂಲಕ ನಡೆಸಲಾಗುವುದು.
* ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡವಾರು ಅಂಕಗಳ
ಆಧಾರದ ಮೇಲೆ 01 ಹುದ್ದೆಗೆ 10 ಅಭ್ಯರ್ಥಿಗಳಂತೆ ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು
ಪ್ರಕಟಿಸಿರುವ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ
ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
* ಸಂದರ್ಶವು 10 ಅಂಕಗಳನ್ನೋಳಗೊಂಡಿರುತ್ತದೆತ್ತ.
2. ಆದೇಶ ಜಾರಿಕಾರರು (Process Server)
ಖಾಲಿ ಹುದ್ದೆಗಳು: 11
ವಿದ್ಯಾರ್ಹತೆ: 10ನೇ ತರಗತಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವೇತನ ಶ್ರೇಣಿ: ರೂ. 31,775 ರಿಂದ ರೂ. 61,300 ವರೆಗೆ.
ಆಯ್ಕೆ ವಿಧಾನ:
* ಅಭ್ಯರ್ಥಿಗಳ ಆಯ್ಕೆಯನ್ನು ಕರ್ನಾಟಕ ಅಧೀನ ನ್ಯಾಯಾಲಯಗಳು (ಲಿಪಿಕ ಮತ್ತು ಇತರ
ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು 2007 ರ ಅನ್ವಯ ನೇರ ನೇಮಕಾತಿ ಮೂಲಕ
ನಡೆಸಲಾಗುವುದು.
* ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಅಂಕಗಳ ಆಧಾರದ ಮೇಲೆ 01 ಹುದ್ದೆಗೆ 25 ಅಭ್ಯರ್ಥಿಗಳಂತೆ ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
* ಸಂದರ್ಶವು 10 ಅಂಕಗಳನ್ನೋಳಗೊಂಡಿರುತ್ತದೆತ್ತ .
3. ಶೀಘ್ರಲಿಪಿಗಾರರು ಗ್ರೇಡ್-III (Stenographer Grade-III)
ಖಾಲಿ ಹುದ್ದೆಗಳು: 04
ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ (PUC) ಅಥವಾ ಮೂರು ವರ್ಷಗಳ ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟಿಸ್ ಪರೀಕ್ಷೆಯಲ್ಲಿ ಉತ್ತೀರ್ಣತೆ. ಜೊತೆಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಿರಿಯ ಶ್ರೇಣಿ ಬೆರಳಚ್ಚು (Senior Typewriting) ಹಾಗೂ ಹಿರಿಯ ದರ್ಜೆ ಶೀಘ್ರಲಿಪಿ (Senior Shorthand) ಪಾಸಾಗಿರಬೇಕು. ಕಂಪ್ಯೂಟರ್ ಬಳಕೆಯ ಜ್ಞಾನ ಕಡ್ಡಾಯ.
ವೇತನ ಶ್ರೇಣಿ: ರೂ. 44,425 ರಿಂದ ರೂ. 83,700 ವರೆಗೆ.
ಆಯ್ಕೆ ವಿಧಾನ:
* ಅಭ್ಯರ್ಥಿಗಳ ಆಯ್ಕೆಯನ್ನು ಕರ್ನಾಟಕ ಅಧೀನ ನ್ಯಾಯಾಲಯ (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು 2007 ರ ಅನ್ವಯ ನೇರ ನೇಮಕಾತಿಯ ಮೂಲಕ ನಡೆಸಲಾಗುವುದು.
* ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಅಂಕಗಳ ಶೇಕಡಾವಾರು ಅಂಕಗಳು ಮತ್ತು ನಿಮಿಷ ಒಂದಕ್ಕೆ 120 ಪದಗಳ ದರದಲ್ಲಿ 05 ನಿಮಿಷಗಳ ಉಕ್ತಲೇ ಕ್ತ ಖನವನ್ನು ತೆಗೆದುಕೊಂಡು, ಉಕ್ತಲೇ ಕ್ತ ಖನವನ್ನು 45 ನಿಮಿಷಗಳಲ್ಲಿ ಕಂಪ್ಯೂಟರ್ ನಲ್ಲಿ ಅನುಲಿಪಿ ಮಾಡುವ ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಶೇಕಡಾವಾರು ಅಂಕಗಳು ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
* ಸಂದರ್ಶನವು ಅರ್ಹತಾ ಪರೀಕ್ಷೆಗೆ ನಿಗದಿ ಪಡಿಸಿದ ಗರಿಷ್ಠ ಅಂಕಗಳ ಶೇಕಡ 5 ರಷ್ಟು ಇರುತ್ತದೆತ್ತ.
4. ಬೆರಳಚ್ಚು ನಕಲುಗಾರರು (Typist-Copyist)
ಖಾಲಿ ಹುದ್ದೆಗಳು: 03
ವಿದ್ಯಾರ್ಹತೆ: ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ ಕನ್ನಡ ಮತ್ತು ಆಂಗ್ಲ ಕಿರಿಯ ಶ್ರೇಣಿ ಬೆರಳಚ್ಚು (Junior Typewriting) ಪಾಸಾಗಿರಬೇಕು. ಕಂಪ್ಯೂಟರ್ ಬಳಕೆಯ ಜ್ಞಾನ ಕಡ್ಡಾಯ.
ವೇತನ ಶ್ರೇಣಿ: ರೂ. 34,100 ರಿಂದ ರೂ. 67,600 ವರೆಗೆ.
ಆಯ್ಕೆ ವಿಧಾನ:
* ಅಭ್ಯರ್ಥಿಗಳ ಆಯ್ಕೆಯನ್ನು ಕರ್ನಾಟಕ ಅಧೀನ ನ್ಯಾಯಾಲಯ (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು 2007 ರ ಅನ್ವಯ ನೇರ ನೇಮಕಾತಿಯ ಮೂಲಕ ನಡೆಸಲಾಗುವುದು.
* ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಅಂಕಗಳ ಶೇಕಡಾವಾರು ಅಂಕಗಳು ಮತ್ತು 15 ನಿಮಿಷಗಳ ಉಕ್ತಲೇ ಕ್ತ ಖನದಲ್ಲಿ ಕೊಡುವ ವಿಷಯವನ್ನು ಕಂಪ್ಯೂಟರ್ ನಲ್ಲಿ ಬೆರಳಚ್ಚು ಮಾಡುವ ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಶೇಕಡಾವಾರು ಅಂಕಗಳು ಮತ್ತು ಸಂದರ್ಶನದಲ್ಲಿ ಗಳಿಸುವ
ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
* ಸಂದರ್ಶನವು ಅರ್ಹತಾ ಪರೀಕ್ಷೆಗೆ ನಿಗದಿ ಪಡಿಸಿದ ಗರಿಷ್ಠ ಅಂಕಗಳ ಶೇಕಡ 5 ರಷ್ಟು ಇರುತ್ತದೆ.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..
ವಯೋಮಿತಿ :
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು.
- ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:
- ಸಾಮಾನ್ಯ ವರ್ಗ: 40 ವರ್ಷ
- ಪ್ರವರ್ಗ 2A, 2B, 3A, 3B: 43 ವರ್ಷ
- ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-1: 45 ವರ್ಷ
ಅರ್ಜಿ ಶುಲ್ಕದ ವಿವರ (Application Fee)
ಅರ್ಜಿ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Collect) ಮೂಲಕ ಆನ್‌ಲೈನ್ ಅಥವಾ ಚಲನ್ ಡೌನ್‌ಲೋಡ್ ಮಾಡಿಕೊಂಡು ಪಾವತಿಸಬಹುದಾಗಿದೆ.
- SC, ST, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿರುವುದಿಲ್ಲ.
- ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: ಸೇವಕರು ಹುದ್ದೆಗೆ ರೂ. 100/-. ಶೀಘ್ರಲಿಪಿಗಾರರು ಮತ್ತು ಆದೇಶ ಜಾರಿಕಾರರು ಹುದ್ದೆಗೆ ರೂ. 150/-.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ (GM): ಸೇವಕರು ಹುದ್ದೆಗೆ ರೂ. 200/-. ಉಳಿದ ಮೂರು ಹುದ್ದೆಗಳಿಗೆ ರೂ. 300/-.
ಹಂತ 1: ಅಗತ್ಯ ದಾಖಲೆಗಳ ಸ್ಕ್ಯಾನಿಂಗ್ (ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಿ) : ಆನ್‌ಲೈನ್ ಅರ್ಜಿ ತುಂಬುವ ಮುನ್ನ ನಿಮ್ಮ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ:
ಹಂತ 2: ಅಧಿಕೃತ ವೆಬ್‌ಸೈಟ್‌ಗೆ ಭೇಟಿ
ಮೈಸೂರು ಜಿಲ್ಲಾ ನ್ಯಾಯಾಲಯದ ಅಧಿಕೃತ ನೇಮಕಾತಿ ವೆಬ್‌ಸೈಟ್: https://mysuru.dcourts.gov.in/notice-category/recruitments/ ಅಥವಾ https://mysuru.dcourts.gov.in/Judges/online-recruitment/ ಗೆ ಭೇಟಿ ನೀಡಿ.
ಅಲ್ಲಿ ನೀಡಲಾದ ಆನ್‌ಲೈನ್ ಅರ್ಜಿ (Online Application) ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಆನ್‌ಲೈನ್ ಅರ್ಜಿ ಭರ್ತಿ
ಅರ್ಜಿಯಲ್ಲಿ ಕೇಳಲಾದ ನಿಮ್ಮ ವೈಯಕ್ತಿಕ ವಿವರಗಳು, ಮೀಸಲಾತಿ ವಿವರ ಹಾಗೂ ಶೈಕ್ಷಣಿಕ ಮಾಹಿತಿಯನ್ನು ತಪ್ಪಿಲ್ಲದಂತೆ ಭರ್ತಿ ಮಾಡಿ.
ಅಂಕಗಳ ನಮೂದು: 10ನೇ / 12ನೇ ತರಗತಿಯ ಗರಿಷ್ಠ ಹಾಗೂ ಗಳಿಸಿದ ಅಂಕಗಳನ್ನು ಸರಿಯಾಗಿ ನಮೂದಿಸಿ. ಅಂಕಗಳ ಬದಲಿಗೆ ಪಾಯಿಂಟ್ ಅಥವಾ ಗ್ರೇಡ್ (Grade) ಗಳಿದ್ದಲ್ಲಿ, ಅದನ್ನು ಶೇಕಡಾವಾರು ಅಂಕಗಳಾಗಿ ಪರಿವರ್ತಿಸಿ ನಮೂದಿಸತಕ್ಕದ್ದು.
ಸಂಪರ್ಕ ಮಾಹಿತಿ: ಮುಂದಿನ ಸಂದರ್ಶನ/ಪರೀಕ್ಷೆಯ ಮಾಹಿತಿಗಾಗಿ ನಿಮ್ಮ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐ.ಡಿ (E-mail ID) ಯನ್ನು ಕಡ್ಡಾಯವಾಗಿ ನಮೂದಿಸಿ.
ಎಲ್ಲಾ ಮೀಸಲಾತಿಗಳಿಗೂ ಪ್ರತ್ಯೇಕ ಅರ್ಜಿ ಹಾಕುವ ಅಗತ್ಯವಿಲ್ಲ; ಒಂದೇ ಅರ್ಜಿಯಲ್ಲಿ ಎಲ್ಲಾ ಮೀಸಲಾತಿಗಳನ್ನು ಕ್ಲೇಮ್ ಮಾಡಬಹುದು.
ಹಂತ 4: ಅರ್ಜಿ ಶುಲ್ಕ ಪಾವತಿ
ಅರ್ಜಿ ತುಂಬಿದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ "State Bank Collect" ಮೂಲಕ ಶುಲ್ಕ ಪಾವತಿಸಬೇಕು.
ಗಮನಿಸಿ: ಡಿಮ್ಯಾಂಡ್ ಡ್ರಾಫ್ಟ್ (DD), ಪೋಸ್ಟಲ್ ಆರ್ಡರ್, ಅಥವಾ ಮನಿ ಆರ್ಡರ್ ಮೂಲಕ ಕಳುಹಿಸುವ ಶುಲ್ಕವನ್ನು ಸ್ವೀಕರಿಸಲಾಗುವುದಿಲ್ಲ. ಒಮ್ಮೆ ಪಾವತಿಸಿದ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.
ಹಂತ 5: ಅರ್ಜಿ ಡೌನ್‌ಲೋಡ್ ಮತ್ತು ಪ್ರಿಂಟ್
ಆನ್‌ಲೈನ್ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿ, ಶುಲ್ಕ ಪಾವತಿಸಿದ ನಂತರ ತುಂಬಿದ ಅರ್ಜಿಯ ಪ್ರತಿಯನ್ನು (Download) ಡೌನ್‌ಲೋಡ್ ಮಾಡಿಕೊಳ್ಳಿ.
ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ಈ ಅರ್ಜಿಯ ಪ್ರತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಮುಂದಿನ ದಿನಗಳಲ್ಲಿ ಸಂದರ್ಶನ ಅಥವಾ ದಾಖಲೆ ಪರಿಶೀಲನೆಯ ಸಮಯದಲ್ಲಿ ಇದನ್ನು ಹಾಜರುಪಡಿಸಬೇಕಾಗುತ್ತದೆ.
ಪ್ರಮುಖ ಸೂಚನೆ: ಸರ್ವರ್ ಸಮಸ್ಯೆಗಳನ್ನು ತಪ್ಪಿಸಲು, ಕೊನೆಯ ದಿನಾಂಕದವರೆಗೂ (31.05.2026, ರಾತ್ರಿ 11.59 ರವರೆಗೆ) ಕಾಯದೆ ಮುಂಚಿತವಾಗಿಯೇ ಅರ್ಜಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದರೆ ನೇಮಕಾತಿಯಿಂದ ಅನರ್ಹಗೊಳಿಸುವುದಲ್ಲದೆ, ಕ್ರಿಮಿನಲ್ ಮೊಕದ್ದಮೆಗೂ ಗುರಿಯಾಗಬೇಕಾಗುತ್ತದೆ.
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.
ಪ್ರಮುಖ ದಿನಾಂಕಗಳು (Important Dates)
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: 28.04.2026
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31.05.2026 ರ ರಾತ್ರಿ 11:59 ರವರೆಗೆ
- ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 02.06.2026
Job Overview
- Start Date
- 28 ಎಪ್ರಿಲ್ 2026
- End Date
- 31 ಮೇ 2026
- Pay Scale
- 27000 - 83700 INR
- Employment Type
- FULL_TIME
- Organization
- Mysuru District Court (Website)
- Location
- District and Sessions Court, Mysuru, KA, 570005
Comments