ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ 1492 ಹುದ್ದೆಗಳ ಭರ್ಜರಿ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ | ಈ ಕುರಿತ ವಿವರ ನಿಮಗಾಗಿ
ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಪೂರೈಸುತ್ತಿರುವ ಸರ್ಕಾರಿ ಅಧೀನ ಸಂಸ್ಥೆಯಾಗಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ :
ಸಹಾಯಕ ಎಂಜಿನಿಯರ್ (ವಿದ್ಯುತ್) : 505
ಸಹಾಯಕ ಇಂಜಿನಿಯರ್ (ಸಿವಿಲ್) : 28
ಕಿರಿಯ ಇಂಜಿನಿಯರ್ (ವಿದ್ಯುತ್) : 570
ಕಿರಿಯ ಇಂಜಿನಿಯರ್ (ಸಿವಿಲ್) : 29
ಕಿರಿಯ ಸಹಾಯಕ : 360
ಒಟ್ಟು ಹುದ್ದೆಗಳು : 1498
- No. of posts
- 1498
- Start Date
- 7 ಫೆಬ್ರುವರಿ 2022
- End Date
- 7 ಮಾರ್ಚ್ 2022
- Last Payment
- 9 ಮಾರ್ಚ್ 2022
- Employment Type
- FULL_TIME
- Organization
- KPSC Vaani (Website)
- Location
- ಕರ್ನಾಟಕ, KA,
Selection Procedure:
Qualification:
1 ) ಸಹಾಯಕ ಇಂಜಿನಿಯರ್ ( ವಿ ) : ಮನ್ನಣೆ ಪಡೆದ ಯಾವುದೇ ವಿಶ್ವವಿದ್ಯಾಲಯ / ಸಂಸ್ಥೆಯ ( ಎ.ಐ.ಸಿ.ಟಿ.ಇ ಇಂದ ಮಾನ್ಯತೆ ಪಡೆದಿರುವ ) ಎಲೆಕ್ಟಿಕಲ್ ಅಥವಾ ಎಲೆಸ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಬಿ.ಇ. / ಬಿ.ಟೆಕ್ ಪದವಿ ಹೊಂದಿರತಕ್ಕದ್ದು ಅಥವಾ ಎ.ಎಂ.ಐ.ಇ. ( ಭಾಗ - ಎ ಮತ್ತು ಬಿ ಎಲೆಕ್ಟಿಕಲ್ ) ಪರೀಕ್ಷೆಯಲ್ಲಿ ಉತ್ತೀರ್ಣತೆ .
2 ) ಸಹಾಯಕ ಇಂಜಿನಿಯರ್ ( ಸಿವಿಲ್ ) : ಮನ್ನಣೆ ಪಡೆದ ಯಾವುದೇ ವಿಶ್ವವಿದ್ಯಾಲಯ / ಸಂಸ್ಥೆಯ ( ಎ.ಐ.ಸಿ.ಟಿ.ಇ ಇಂದ ಮಾನ್ಯತೆ ಪಡೆದಿರುವ) ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ. / ಬಿ.ಟೆಕ್ ಪದವಿ ಹೊಂದಿರತಕ್ಕದ್ದು ಅಥವಾ ಎ.ಎಂ.ಐ.ಇ. ( ಭಾಗ - ಎ ಮತ್ತು ಬಿ ಸಿವಿಲ್ ) ಪರೀಕ್ಷೆಯಲ್ಲಿ ಉತ್ತೀರ್ಣತೆ.
3 ) ಕಿರಿಯ ಇಂಜಿನಿಯರ್ ( ವಿ ) : ಕರ್ನಾಟಕ ರಾಜ್ಯದ ಪಾಲಿಟೆಕ್ನಿಕ್‌ನಿಂದ ವ್ಯಾಸಂಗ ಮಾಡಿ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಎಲೆಕ್ಟಿಕಲ್ ಅಥವಾ ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರತಕ್ಕದ್ದು.
4) ಕಿರಿಯ ಇಂಜಿನಿಯರ್ (ಸಿವಿಲ್) : ಕರ್ನಾಟಕ ರಾಜ್ಯದ ಪಾಲಿಟೆಕ್ನಿಕ್‌ನಿಂದ ವ್ಯಾಸಂಗ ಮಾಡಿ ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರತಕ್ಕದ್ದು.
5) ಕಿರಿಯ ಸಹಾಯಕ : ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆಸಲಾಗುವ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ಸಿ.ಬಿ.ಎಸ್.ಇ. ಮತ್ತು ಐ.ಎಸ್.ಸಿ. ಪರೀಕ್ಷಾ ಮಂಡಳಿಗಳಿಂದ ನಡೆಸಲಾಗುವ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣತೆ.
Fee:
* ಸಾಮಾನ್ಯ ವರ್ಗದ ಅಭ್ಯರ್ಥಿಗಳು : 600/- (ಸರಕು ಮತ್ತು ಸೇವಾ ತೆರಿಗೆ ಹಾಗೂ ಅಂಚೆ ಸೇವಾ ಶುಲ್ಕ ಒಳಗೊಂಡಂತೆ).
* ಪ್ರವರ್ಗ-1, 2(ಎ), 2(ಬಿ), 3(ಎ) ಮತ್ತು 3(ಬಿ) ಗೆ ಸೇರಿದ ಅಭ್ಯರ್ಥಿಗಳು : 600/- (ಸರಕು ಮತ್ತು ಸೇವಾ ತೆರಿಗೆ ಹಾಗೂ ಅಂಚೆ ಸೇವಾ ಶುಲ್ಕ ಒಳಗೊಂಡಂತೆ).
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳು : 350/- (ಸರಕು ಮತ್ತು ಸೇವಾ ತೆರಿಗೆ ಹಾಗೂ ಅಂಚೆ ಸೇವಾ ಶುಲ್ಕ ಒಳಗೊಂಡಂತೆ).
* ವಿಕಲಚೇತನ ಅಭ್ಯರ್ಥಿಗಳು : ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ .
Age Limit:
* ಕನಿಷ್ಠ ವಯೋಮಿತಿ (ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ): 18 ವರ್ಷಗಳು
ಗರಿಷ್ಠ ವಯೋಮಿತಿ :
- ಸಾಮಾನ್ಯ ವರ್ಗದ ಅಭ್ಯರ್ಥಿಗಳು : 35 ವರ್ಷಗಳು
- ಪ್ರವರ್ಗ-1, 2(ಎ), 2(ಬಿ), 3(ಎ) ಮತ್ತು 3(ಬಿ) ಗೆ ಸೇರಿದ ಅಭ್ಯರ್ಥಿಗಳು : 38 ವರ್ಷಗಳು
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ -1 ಕ್ಕೆ ಸೇರಿದ 40 ವರ್ಷಗಳ ಅಭ್ಯರ್ಥಿಗಳು
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.