ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಖಾಲಿ ಇರುವ 29 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಖಾಲಿ ಇರುವ 29 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by Mallappa Myageri
26 ಅಕ್ಟೋಬರ್ 2021 Others State Important

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳಿಗೆ ತಮ್ಮ ಸಂಪೂರ್ಣ ವಿವರ ಅರ್ಜಿ ಶುಲ್ಕ ಮತ್ತು ದಾಖಲೆಗಳೊಂದಿಗೆ ದಿನಾಂಕ:25-10-2021 ರಿಂದ  23-11-2021 ವರೆಗೆ  ಆನ್ ಲೈನ್ ಮೂಲಕ ಅರ್ಜಿಗಳನ್ನು ( ನಿಗದಿತ ನಮೂನೆಯಲ್ಲಿ) ಸಲ್ಲಿಸಲು ಕಾಲಾವಕಾಶ ಕಲ್ಪಿಸಲಾಗಿತ್ತು, ಇದೀಗ ಮತ್ತೆ ಅರ್ಜಿ ಸಲ್ಲಿಸುವ ಅವಧಿಯನ್ನು ದಿನಾಂಕ: 30-11-2021 ರವರೆಗೆ ವಿಸ್ತರಿಸಲಾಗಿದೆ.

Job Overview
No. of posts
29
Start Date
25 ಅಕ್ಟೋಬರ್ 2021
End Date
30 ನವೆಂಬರ್ 2021
Last Payment
30 ನವೆಂಬರ್ 2021
Employment Type
FULL_TIME
Organization
KPSC Vaani (Website)
Location
ಕರ್ನಾಟಕ, KA,
Selection Procedure:

ಖಾದಿ ಮಂಡಳಿಯು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಮೆರಿಟ್ ಆಧಾರದ ಮೇಲೆ ಮತ್ತು ಚಾಲ್ತಿಯಲ್ಲಿರುವ ಮೀಸಲಾತಿ ನೀತಿಯನ್ನು ಅನುಸರಿಸಿ ಅಭ್ಯರ್ಥಿಗಳು ಹುದ್ದೆಗಳಿಗೆ ಹಾಗೂ ನೀಡಿರುವ ಆಧ್ಯತೆಯನ್ವಯ ಪ್ರಕಟಿಸಿರುವ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಅಭ್ಯರ್ಥಿಗಳ ಆಯ್ಕೆಪಟ್ಟಿ ತಯಾರಿಸಲಾಗುವುದು.

Qualification:

ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ  ಅಭ್ಯರ್ಥಿಗಳು ಹೊಂದಿರಬೇಕಾದ ವಿದ್ಯಾರ್ಹತೆ  ಈ ಕೆಳಗಿನಂತಿವೆ. 
1) ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ಹುದ್ದೆಗೆ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
2) ಪ್ರಥಮ ದರ್ಜೆ ಸಹಾಯಕರು ಹುದ್ದೆಗೆ ಭಾರತದಲ್ಲಿ ಕಾನೂನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಪದವಿಯನ್ನು ಹೊಂದಿರಬೇಕು ಜೊತೆಗೆ 3 ತಿಂಗಳಿಗಿಂತ ಕಡಿಮೆಯಿಲ್ಲದಂತೆ ಮಾನ್ಯತೆ ಪಡೆದ ಸಂಸ್ಥೆಯಿಂದ ಮೂಲಭೂತ ಕಂಪ್ಯೂಟರ್ ತರಬೇತಿಯಲ್ಲಿ ಉತ್ತೀರ್ಣರಾಗಿರಬೇಕು.
3) ತಾಂತ್ರಿಕ ಮೇಲ್ವಿಚಾರಕರು ಹುದ್ದೆಗೆ ಭಾರತದಲ್ಲಿ ಕಾನೂನಿನಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮತ್ತು ಸಂಸ್ಥೆಗಳಿಂದ ಬಿ.ಎಸ್ಸಿ ಅಥವಾ ಡಿಪ್ಲೋಮಾ ಮೆಕ್ಯಾನಿಕಲ್ / ಎಲೆಕ್ಟ್ರಿಕಲ್ / ಸಿವಿಲ್ / ಎಲೆಕ್ಟ್ರಾನಿಕ್ಸ್ / ಕಂಪ್ಯೂಟರ್ ಸೈನ್ಸ್ / ಟೆಲಿ-ಕಮ್ಯುನಿಕ್ಷನ್ / ಆಟೋ-ಮೊಬೈಲ್ / ಟೆಕ್ಸ್ಟೈಲ್ / ಮೆಟಲರ್ಜಿ ಮತ್ತು ಕೆಮಿಕಲ್ ಇಂಜಿನಿಯರಿಂಗ್ / ಫುಡ್ ತಂತ್ರಜ್ಞಾನದಲ್ಲಿ ಪದವಿಯನ್ನು ಹೊಂದಿರಬೇಕು.
4) ತಾಂತ್ರಿಕ ಸಹಾಯಕರು ಹುದ್ದೆಗೆ ಮಾನ್ಯತೆ ಪಡೆದ ಸಂಸ್ಥೆಯಿಂದ (ಕೈಗಾರಿಕಾ ತರಬೇತಿ ಸಂಸ್ಥೆ) ITI ಪ್ರಮಾಣಪತ್ರವನ್ನು ಹೊಂದಿರಬೇಕು.

Fee:

ಸಾಮಾನ್ಯ ವರ್ಗ / ಪ್ರವರ್ಗ -2 ( ಎ ) / 2 ( ಬಿ ) / 3 ( ಎ ) / 3 ( ಬಿ ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ. 800/-  
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ -1 / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 400/-
ಅಂಗವಿಕಲ / ದಿವ್ಯಾಂಗ ಅಭ್ಯರ್ಥಿಗಳಿಗೆ  ಶುಲ್ಕ ಪಾವತಿಯಿಂದ ವಿನಾಯಿತಿ ಇದೆ.

Age Limit:

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಈ ಕೆಳಕಂಡ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.  
ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ಗರಿಷ್ಠ : ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ ವಯೋಮಿತಿಯನ್ನು ಮೀರಿರಬಾರದು.
ಪ್ರವರ್ಗ -II(a), II(b) , III(a), III(b).ಅಭ್ಯರ್ಥಿಗಳಿಗೆ 38 ವರ್ಷ ವಯೋಮಿತಿಯನ್ನು ಮೀರಿರಬಾರದು.
ಪ.ಜಾ / ಪ.ಪಂ. / ಪ್ರ -1 ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿಯನ್ನು ಮೀರಿರಬಾರದು.

To Download the official notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.