Add KPSC Vaani to your Home Screen. In Safari, tap Share, then Add to Home Screen.

IOCL ನೇಮಕಾತಿ 2026: ಪೈಪ್‌ಲೈನ್ಸ್ ವಿಭಾಗದಲ್ಲಿ 500 ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ನೇಮಕಾತಿ; ಯಾವುದೇ ಪರೀಕ್ಷೆ ಇಲ್ಲದೆ ನೇರ ಆಯ್ಕೆ!

IOCL ನೇಮಕಾತಿ 2026: ಪೈಪ್‌ಲೈನ್ಸ್ ವಿಭಾಗದಲ್ಲಿ 500 ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ನೇಮಕಾತಿ; ಯಾವುದೇ ಪರೀಕ್ಷೆ ಇಲ್ಲದೆ ನೇರ ಆಯ್ಕೆ!
Published by Heena Sheregar
46 minutes ago Others Featured

ಕೇಂದ್ರ ಸರ್ಕಾರದ ಪ್ರತಿಷ್ಠಿತ ಮಹಾರತ್ನ ಕಂಪನಿಗಳಲ್ಲಿ ಒಂದಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಕೆಲಸ ಮಾಡಬೇಕು ಎಂಬ ಕನಸು ಹೊತ್ತಿರುವ ಯುವ ಜನತೆಗೆ ಸುವರ್ಣ ಅವಕಾಶ ಸಿಕ್ಕಿದೆ. IOCL ನ ಪೈಪ್‌ಲೈನ್ಸ್ ವಿಭಾಗದಿಂದ ದೇಶಾದ್ಯಂತ ಒಟ್ಟು 500 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕದ ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಈಗಿನಿಂದಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

 

ಉದ್ಯೋಗ ಹುಡುಕುತ್ತಿರುವ ಹತ್ತು ಹಲವು ಅಭ್ಯರ್ಥಿಗಳಿಗೆ ಈ ನೇಮಕಾತಿ ದೊಡ್ಡ ಸುದ್ದಿಯಾಗಿದೆ. ಏಕೆಂದರೆ ಇಲ್ಲಿ ಯಾವುದೇ ಕಠಿಣ ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಸುದೀರ್ಘ ಸಂದರ್ಶನದ ಗೋಜಲು ಇರುವುದಿಲ್ಲ. ಓದುವ ಹಂತದಲ್ಲಿ ಗಳಿಸಿದ ಅಂಕಗಳೇ ಇಲ್ಲಿ ಉದ್ಯೋಗ ಗಿಟ್ಟಿಸಲು ಪ್ರಮುಖ ಮೆಟ್ಟಿಲಾಗುತ್ತವೆ.

 

ಹಾಗಾದರೆ ಈ ಹುದ್ದೆಗಳಿಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ವಿದ್ಯಾರ್ಹತೆ ಏನು? ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ಎಂಬುದರ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ಸರಳವಾಗಿ ತಿಳಿದುಕೊಳ್ಳೋಣ ಬನ್ನಿ.

 

 

IOCL ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದ ಸಂಕ್ಷಿಪ್ತ ವಿವರಗಳು:

  • ಸಂಸ್ಥೆಯ ಹೆಸರು: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) - ಪೈಪ್‌ಲೈನ್ಸ್ ವಿಭಾಗ   
  • ಹುದ್ದೆಯ ಹೆಸರು: ಅಪ್ರೆಂಟಿಸ್ (ಟೆಕ್ನಿಷಿಯನ್, ಟ್ರೇಡ್, ಗ್ರಾಜುಯೇಟ್ ಮತ್ತು ಡೇಟಾ ಎಂಟ್ರಿ ಆಪರೇಟರ್)   
  • ಒಟ್ಟು ಹುದ್ದೆಗಳು: 500   ವೇತನ ಶ್ರೇಣಿ: ಅಪ್ರೆಂಟಿಸ್ ಕಾಯ್ದೆ-1961ರ (Apprentices Act, 1961) ನಿಯಮಾನುಸಾರ ಮಾಸಿಕ
  • ಸ್ಟೈಫಂಡ್ (Stipend) ಪಾವತಿಸಲಾಗುತ್ತದೆ.   
  • ಉದ್ಯೋಗ ಸ್ಥಳ: ಕರ್ನಾಟಕ (ಬೆಂಗಳೂರು) ಸೇರಿದಂತೆ ಭಾರತದಾದ್ಯಂತ ವಿವಿಧ ರಾಜ್ಯಗಳು ಮತ್ತು ಪೈಪ್‌ಲೈನ್.
  • ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ (NAPS/NATS ಮತ್ತು IOCL ಪೋರ್ಟಲ್ ಮೂಲಕ)   

 

ಪ್ರಮುಖ ದಿನಾಂಕಗಳು (Important Dates):

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06-11-2026   
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-12-2026   

 

ಇದನ್ನು ಓದಿ: ASRB ICAR Recruitment 2026: 1393 ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಭರ್ಜರಿ ನೇಮಕಾತಿ! 1.12 ಲಕ್ಷ ರೂ. ವರೆಗೆ ವೇತನ.

 

ಹುದ್ದೆಗಳ ವಿವರ ಹಾಗೂ ವಿದ್ಯಾರ್ಹತೆ (Vacancies & Qualifications): ಒಟ್ಟು 500 ಹುದ್ದೆಗಳಿದ್ದು, ವಿವಿಧ ವಿಭಾಗಗಳಿಗೆ ಕೆಳಗಿನಂತೆ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ:

1. ಟೆಕ್ನಿಷಿಯನ್ ಅಪ್ರೆಂಟಿಸ್ (ಮೆಕಾನಿಕಲ್ / ಎಲೆಕ್ಟ್ರಿಕಲ್ / ಟೆಲಿಕಮ್ಯುನಿಕೇಷನ್ & ಇನ್‌ಸ್ಟ್ರುಮೆಂಟೇಶನ್):
  - ವಿದ್ಯಾರ್ಹತೆ: ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ 3 ವರ್ಷಗಳ ಫುಲ್ ಟೈಮ್ ಡಿಪ್ಲೊಮಾ.   
2. ಟ್ರೇಡ್ ಅಪ್ರೆಂಟಿಸ್ (ಅಸಿಸ್ಟೆಂಟ್-ಹ್ಯೂಮನ್ ರಿಸೋರ್ಸ್ / ಅಕೌಂಟೆಂಟ್):
  - ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation) ಅಥವಾ ಕಾಮರ್ಸ್‌ನಲ್ಲಿ ಪದವಿ.   
3. ಡೇಟಾ ಎಂಟ್ರಿ ಆಪರೇಟರ್ & ಡೊಮೆಸ್ಟಿಕ್ ಡೇಟಾ ಎಂಟ್ರಿ ಆಪರೇಟರ್:
  - ವಿದ್ಯಾರ್ಹತೆ: ಕನಿಷ್ಠ 12ನೇ ತರಗತಿ (ಪಿಯುಸಿ) ಉತ್ತೀರ್ಣ.   

 

ವಯೋಮಿತಿ (Age Limit):

  • ಅಭ್ಯರ್ಥಿಗಳಿಗೆ ದಿನಾಂಕ 30-11-2026ರನ್ವಯ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 24 ವರ್ಷ ಮೀರಿರಬಾರದು.   
  • ಸರ್ಕಾರದ ನಿಯಮಾನುಸಾರ ಎಸ್‌ಸಿ/ಎಸ್‌ಟಿ, ಒಬಿಸಿ ಹಾಗೂ ಇತರೆ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಸಿತ ಸಡಿಲಿಕೆ ಅನ್ವಯಿಸುತ್ತದೆ.   

 

ಆಯ್ಕೆ ಪ್ರಕ್ರಿಯೆ (Selection Methodology):

  • ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ (Written Test) ಅಥವಾ ನೇರ ಸಂದರ್ಶನ (Personal Interview) ಇರುವುದಿಲ್ಲ.   
  • ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡಾವಾರು (Merit List) ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.   

 

 

ಅರ್ಜಿ ಸಲ್ಲಿಸುವುದು ಹೇಗೆ? (How to Apply): ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:

1. ಮೊದಲಿಗೆ NAPS ಅಥವಾ NATS ಪೋರ್ಟಲ್‌ನಲ್ಲಿ (ಅಯಾ ಟ್ರೇಡ್‌ಗಳಿಗೆ ತಕ್ಕಂತೆ) ನೋಂದಣಿ ಮಾಡಿಕೊಳ್ಳಬೇಕು:   
  - Trade Apprentice: www.apprenticeshipindia.gov.in   
  - Technician / Graduate Apprentice: nats.education.gov.in   
2. NAPS/NATS ಪೋರ್ಟಲ್‌ನಿಂದ ಪಡೆದ ನೋಂದಣಿ ಸಂಖ್ಯೆಯನ್ನು ಬಳಸಿ, IOCL ಅಧಿಕೃತ ವೆಬ್‌ಸೈಟ್ https://plapps.indianoilpipelines.in/ ಗೆ ಭೇಟಿ ನೀಡಿ.   
3. Part-I ಮತ್ತು Part-II ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.   
4. ಅಗತ್ಯವಿರುವ ದಾಖಲೆಗಳು, ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ, ಕೊನೆಯ ದಿನಾಂಕ 05-12-2026ರೊಳಗೆ ಅರ್ಪಿಸಿ.   

Job Overview
No. of posts
500
End Date
5 ಡಿಸೆಂಬರ್ 2026
Employment Type
FULL_TIME
Organization
IOCL (Website)
Location
K R Puram, Bengaluru, KA, 560016
To download official notification
Related Tags: Degree Diploma PUC
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.