ASRB ICAR Recruitment 2026: 1393 ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಭರ್ಜರಿ ನೇಮಕಾತಿ! 1.12 ಲಕ್ಷ ರೂ. ವರೆಗೆ ವೇತನ.
ASRB ICAR Recruitment 2026: 1,393 Technical Assistant ಹುದ್ದೆಗಳ ಭರ್ಜರಿ ನೇಮಕಾತಿ; ₹35,400ವರೆಗೆ ವೇತನ!
ಕೇಂದ್ರ ಸರ್ಕಾರದ ಕೃಷಿ ಸಂಶೋಧನಾ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಬಯಸುವ ಪದವೀಧರ ಅಭ್ಯರ್ಥಿಗಳಿಗೆ ಸಿಹಿಸುದ್ದಿ. ಭಾರತೀಯ ಕೃಷಿ ಸಂಶೋಧನಾ ಮಂಡಳಿ (Indian Council of Agricultural Research – ICAR) ಅಧೀನದ ವಿವಿಧ ಸಂಸ್ಥೆಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಖಾಲಿ ಇರುವ ತಾಂತ್ರಿಕ ಹುದ್ದೆಗಳ ಭರ್ತಿಗೆ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ (Agricultural Scientists Recruitment Board – ASRB) ಅಧಿಸೂಚನೆ ಪ್ರಕಟಿಸಿದೆ.
2026ನೇ ಸಾಲಿನ Centralized Combined Examination ಮೂಲಕ Technical Assistant (T-3) ಮತ್ತು Senior Technical Assistant (T-4) ವಿಭಾಗಗಳಲ್ಲಿ ಒಟ್ಟು 1,393 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಇದರಲ್ಲಿ ICAR ಸಂಸ್ಥೆಗಳಲ್ಲಿನ T-3 ವಿಭಾಗದ 1,254 ಹುದ್ದೆಗಳು ಹಾಗೂ ICAR ಅಧೀನದ ಕೃಷಿ ವಿಜ್ಞಾನ ಕೇಂದ್ರಗಳ (KVKs) T-4 ವಿಭಾಗದ 139 ಹುದ್ದೆಗಳು ಸೇರಿವೆ.
ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ, ಮೀನುಗಾರಿಕೆ, ಕೃಷಿ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಲೈಬ್ರರಿ ಸೈನ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ಸೇರಿದಂತೆ ಹಲವು ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಹಾಗೂ ಸಾಮಾನ್ಯವಾಗಿ ಗರಿಷ್ಠ ವಯೋಮಿತಿ 30 ವರ್ಷಗಳಾಗಿದೆ. ಆಯ್ಕೆಯಾದ T-3 ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಪೇ ಲೆವೆಲ್-5 ಅಡಿಯಲ್ಲಿ ₹29,200ರಿಂದ ₹92,300ರವರೆಗೆ ಮತ್ತು T-4 ಅಭ್ಯರ್ಥಿಗಳಿಗೆ ಪೇ ಲೆವೆಲ್-6 ಅಡಿಯಲ್ಲಿ ₹35,400ರಿಂದ ₹1,12,400ರವರೆಗೆ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.
ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 2026ರ ನವೆಂಬರ್ 18ರಿಂದ ಆರಂಭವಾಗಲಿದ್ದು, ಡಿಸೆಂಬರ್ 17, 2026ರ ರಾತ್ರಿ 11:59ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಹತೆ, ವಯೋಮಿತಿ, ಹುದ್ದೆಗಳ ವಿಭಾಗ ಮತ್ತು ಪರೀಕ್ಷಾ ವಿಧಾನವನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಮುಖ್ಯ.
ಪ್ರಮುಖ ವಿವರಗಳು
- ನೇಮಕಾತಿ ಸಂಸ್ಥೆ : Agricultural Scientists Recruitment Board (ASRB)
- ಒಟ್ಟು ಹುದ್ದೆಗಳು : 1393
- ಅರ್ಜಿ ವಿಧಾನ : ಆನ್ಲೈನ್
- ಅರ್ಜಿ ಕೊನೆಯ ದಿನಾಂಕ : 17-12-2026
- ಅಧಿಕೃತ ವೆಬ್ಸೈಟ್ : www.asrb.gov.in
ಹುದ್ದೆಗಳ ವಿವರ ಹಾಗೂ ವರ್ಗೀಕರಣ (Vacancy Details)
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 1393 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರ ವಿಂಗಡಣೆ ಈ ಕೆಳಗಿನಂತಿದೆ:
- ತಾಂತ್ರಿಕ ಸಹಾಯಕ (Technical Assistant - T-3): 1254 ಹುದ್ದೆಗಳು (ICAR ಸಂಸ್ಥೆಗಳಲ್ಲಿ).
- ಹಿರಿಯ ತಾಂತ್ರಿಕ ಸಹಾಯಕ (Senior Technical Assistant - T-4): 139 ಹುದ್ದೆಗಳು (ಕೃಷಿ ವಿಜ್ಞಾನ ಕೇಂದ್ರಗಳಲ್ಲಿ).
ಪ್ರಮುಖ ದಿನಾಂಕಗಳು (Important Dates)
- ಅಧಿಕೃತ ಅಧಿಸೂಚನೆ ಪ್ರಕಟಣೆ: 11-11-2026
- ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18 ನವೆಂಬರ್ 2026.
- ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 17 ಡಿಸೆಂಬರ್ 2026 (ರಾತ್ರಿ 11:59 ರವರೆಗೆ).
- ಅರ್ಜಿ ತಿದ್ದುಪಡಿಗೆ ಅವಕಾಶ (Correction Window): 18 ಡಿಸೆಂಬರ್ 2026 ರಿಂದ 20 ಡಿಸೆಂಬರ್ 2026 ರವರೆಗೆ.
- ಪ್ರಾಥಮಿಕ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT Prelims): ಫೆಬ್ರವರಿ 2027 (ಸಂಭಾವ್ಯ).
- ಮುಖ್ಯ ಪರೀಕ್ಷೆಯ ದಿನಾಂಕ: ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.
ವೇತ ಶ್ರೇಣಿ (Salary Details)
- T-3 ಹುದ್ದೆಗಳಿಗೆ: 7ನೇ ವೇತನ ಆಯೋಗದ ಪೇ ಮ್ಯಾಟ್ರಿಕ್ಸ್ ಲೆವೆಲ್-5 ರ ಅನ್ವಯ (ರೂ. 29,200 – 92,300/-) ವೇತನ ನೀಡಲಾಗುವುದು.
- T-4 ಹುದ್ದೆಗಳಿಗೆ: 7ನೇ ವೇತನ ಆಯೋಗದ ಪೇ ಮ್ಯಾಟ್ರಿಕ್ಸ್ ಲೆವೆಲ್-6 ರ ಅನ್ವಯ (ರೂ. 35,400 – 1,12,400/-) ವೇತನ ನೀಡಲಾಗುವುದು.
ವಯೋಮಿತಿ ಅರ್ಹತೆಗಳು (Age Limit)
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು (17.12.2026) ಅಭ್ಯರ್ಥಿಗಳು ಈ ಕೆಳಗಿನ ವಯೋಮಿತಿ ಹೊಂದಿರಬೇಕು:
- ಕನಿಷ್ಠ ವಯಸ್ಸು: 21 ವರ್ಷಗಳು.
- ಗರಿಷ್ಠ ವಯಸ್ಸು: 30 ವರ್ಷಗಳು.
- ವಯೋಮಿತಿ ಸಡಿಲಿಕೆ: SC/ST ಅಭ್ಯರ್ಥಿಗಳಿಗೆ 5 ವರ್ಷ, OBC (Non-Creamy Layer) ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನ (PwBD) ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಶೈಕ್ಷಣಿಕ ಅರ್ಹತೆ (Educational Qualification)
ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯಗಳಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪದವಿ (Graduation) ಹೊಂದಿರಬೇಕು. ವಿವಿಧ ವಿಭಾಗಗಳಿಗೆ ಬೇಕಾದ ಶೈಕ್ಷಣಿಕ ಅರ್ಹತೆಗಳು ಈ ಕೆಳಗಿನಂತಿವೆ:
- ಕೃಷಿ ವಿಭಾಗ (Agriculture): B.Sc (ಕೃಷಿ/ ತೋಟಗಾರಿಕೆ/ ಅರಣ್ಯಶಾಸ್ತ್ರ/ ಜೈವಿಕ ತಂತ್ರಜ್ಞಾನ/ ಪರಿಸರ ವಿಜ್ಞಾನ ಇತ್ಯಾದಿ).
- ಪಶು ವಿಜ್ಞಾನ (Animal Science): B.V.Sc & A.H (ಪಶುವೈದ್ಯಕೀಯ ವಿಜ್ಞಾನ).
- ಮೀನುಗಾರಿಕೆ (Fisheries Science): B.F.Sc (ಮೀನುಗಾರಿಕೆ ವಿಜ್ಞಾನ).
- ಇಂಜಿನಿಯರಿಂಗ್ (Civil/Mech/Electrical/Electronics): ಸಂಬಂಧಪಟ್ಟ ವಿಷಯದಲ್ಲಿ ಬಿ.ಟೆಕ್/ ಬಿ.ಇ. ಅಥವಾ ಮೂರು ವರ್ಷಗಳ ಡಿಪ್ಲೊಮಾ.
- ಮಾಹಿತಿ ತಂತ್ರಜ್ಞಾನ (IT): BCA, ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್, ಅಥವಾ ಬಿ.ಟೆಕ್/ಬಿ.ಇ. (IT/CS/ECE).
- ಗ್ರಂಥಾಲಯ ವಿಜ್ಞಾನ (Library Science): ಗ್ರಂಥಾಲಯ ವಿಜ್ಞಾನದಲ್ಲಿ ಪದವಿ.
ಆಯ್ಕೆ ಪ್ರಕ್ರಿಯೆ (Selection Process)
ಈ ನೇಮಕಾತಿಯು ಯಾವುದೇ ಸಂದರ್ಶನವನ್ನು (No Interview) ಒಳಗೊಂಡಿಲ್ಲ. ಆಯ್ಕೆಯು ಸಂಪೂರ್ಣವಾಗಿ 2 ಹಂತಗಳ ಆನ್ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳ (CBT) ಮೂಲಕ ನಡೆಯಲಿದೆ:
- ಪ್ರಾಥಮಿಕ ಪರೀಕ್ಷೆ (Preliminary Exam - Qualifying): ಇದು 100 ಅಂಕಗಳ ಬಹುಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದ್ದು, 1 ಗಂಟೆಯ ಕಾಲಾವಕಾಶವಿರುತ್ತದೆ. ಇದರಲ್ಲಿ ಸಾಮಾನ್ಯ ಜ್ಞಾನ (25), ಸಾಮಾನ್ಯ ಇಂಗ್ಲಿಷ್ (25), ಗಣಿತ (25), ಮತ್ತು ಸಾಮಾನ್ಯ ಕೃಷಿ (25) ವಿಷಯಗಳಿರುತ್ತವೆ. ಪ್ರತಿ ತಪ್ಪು ಉತ್ತರಕ್ಕೆ 0.25 (1/4) ಅಂಕಗಳ ನಕಾರಾತ್ಮಕ ಮೌಲ್ಯಮಾಪನ (Negative marking) ಇರುತ್ತದೆ.
- ಮುಖ್ಯ ಪರೀಕ್ಷೆ (Mains Exam): ಪ್ರಾಥಮಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು 1:15 ಅನುಪಾತದಲ್ಲಿ ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುವುದು. ಈ ಪರೀಕ್ಷೆಯು 300 ಅಂಕಗಳಿಗೆ 2 ಗಂಟೆಗಳ ಕಾಲ ನಡೆಯಲಿದ್ದು, ಅಭ್ಯರ್ಥಿ ಆಯ್ಕೆ ಮಾಡಿಕೊಂಡ ವಿಷಯಕ್ಕೆ (Domain specific) ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಪ್ರತಿ ತಪ್ಪು ಉತ್ತರಕ್ಕೆ 1 ಅಂಕ (1/3) ಕಡಿತಗೊಳಿಸಲಾಗುತ್ತದೆ.
ಅರ್ಜಿ ಶುಲ್ಕದ ವಿವರ (Application Fee)
ಅಭ್ಯರ್ಥಿಗಳು ತಾವು ಆಯ್ಕೆ ಮಾಡುವ ಹುದ್ದೆಗಳ (T-3 ಅಥವಾ T-4 ಅಥವಾ ಎರಡೂ) ಆಧಾರದ ಮೇಲೆ ಶುಲ್ಕ ಪಾವತಿಸಬೇಕಾಗುತ್ತದೆ:
- ಸಾಮಾನ್ಯ (UR) ಅಭ್ಯರ್ಥಿಗಳಿಗೆ: ಕೇವಲ T-3 ಅಥವಾ ಕೇವಲ T-4 ಗೆ ರೂ. 300/- (ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೆ ರೂ. 600/-). OBC / EWS ಅಭ್ಯರ್ಥಿಗಳಿಗೆ: ಕೇವಲ T-3 ಅಥವಾ ಕೇವಲ T-4 ಗೆ ರೂ. 150/- (ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೆ ರೂ. 300/-).
- SC / ST / ಮಹಿಳೆಯರು / ವಿಕಲಚೇತನರು ಹಾಗೂ ಮಾಜಿ ಸೈನಿಕರಿಗೆ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (NIL).
(ಶುಲ್ಕವನ್ನು 'ಭಾರತಕೋಶ' ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಪಾವತಿಸಬೇಕು).
ಪ್ರತಿ ದಿನದ ಹಾಗೂ ವಾರಾಂತ್ಯದ ಆನ್ಲೈನ್ ಕ್ವಿಜ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ವಿಧಾನ :
ಹಂತ 1: ಅಧಿಕೃತ ವೆಬ್ಸೈಟ್ಗೆ ಭೇಟಿ (Visit Official Website) - ಅಭ್ಯರ್ಥಿಗಳು ಮೊದಲು ASRB ಯ ಅಧಿಕೃತ ಜಾಲತಾಣವಾದ http://www.asrb.gov.in ಗೆ ಭೇಟಿ ನೀಡಬೇಕು.
ಹಂತ 2: ಹುದ್ದೆಯ ಆಯ್ಕೆ ಮತ್ತು ಆದ್ಯತೆ (Selection of Post & Preference) - ಅಭ್ಯರ್ಥಿಗಳು ತಮಗೆ ಅರ್ಹತೆಯಿರುವ ಕೇವಲ ಒಂದು ಫಂಕ್ಷನಲ್ ಗ್ರೂಪ್ (Functional Group) ಅಡಿಯಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ
ಹಂತ 3: ದಾಖಲೆಗಳ ಅಪ್ಲೋಡ್ (Document Uploading) - ಅರ್ಜಿ ತುಂಬುವಾಗ ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ:
ಹಂತ 4: ಅರ್ಜಿ ಶುಲ್ಕ ಪಾವತಿ (Fee Payment via Bharatkosh) - ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ 'ಭಾರತಕೋಶ' (https://Bharatkosh.gov.in) ಪೋರ್ಟಲ್ನಲ್ಲಿ ಪಾವತಿಸಬೇಕು.
ಹಂತ 5: ಅಂತಿಮ ಸಲ್ಲಿಕೆ (Final Submission) - ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ, ದಾಖಲೆಗಳು ಹಾಗೂ ಶುಲ್ಕದ ರಶೀದಿಯನ್ನು ಅಪ್ಲೋಡ್ ಮಾಡಿದ ನಂತರ, ಮತ್ತೊಮ್ಮೆ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಿಕೊಳ್ಳಿ (Preview/Edit).
ಸಮಾರೋಪ
ಕೇಂದ್ರ ಸರ್ಕಾರದ ಕೃಷಿ ಸಂಶೋಧನಾ ಸಂಸ್ಥೆಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಉದ್ಯೋಗ ಪಡೆಯಲು ಬಯಸುವ ಪದವೀಧರರಿಗೆ ASRB ICAR Recruitment 2026 ಉತ್ತಮ ಅವಕಾಶವಾಗಿದೆ. ಒಟ್ಟು 1,393 ಹುದ್ದೆಗಳಿದ್ದು, ಕೃಷಿ, ಪಶುವೈದ್ಯಕೀಯ, ಮೀನುಗಾರಿಕೆ, ಎಂಜಿನಿಯರಿಂಗ್, ಲೈಬ್ರರಿ ಸೈನ್ಸ್ ಮತ್ತು ಐಟಿ ವಿಭಾಗಗಳ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದು.
T-3 ಹುದ್ದೆಗಳಿಗೆ ₹29,200ರಿಂದ ₹92,300ರವರೆಗೆ ಮತ್ತು T-4 ಹುದ್ದೆಗಳಿಗೆ ₹35,400ರಿಂದ ₹1,12,400ರವರೆಗೆ ವೇತನ ಶ್ರೇಣಿ ನಿಗದಿಪಡಿಸಲಾಗಿದೆ. ಆಯ್ಕೆ ಪ್ರಕ್ರಿಯೆಯು ಪ್ರಿಲಿಮ್ಸ್ ಮತ್ತು ಮೇನ್ಸ್ ಎಂಬ ಎರಡು ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಒಳಗೊಂಡಿದ್ದು, ಸಂದರ್ಶನ ಇರುವುದಿಲ್ಲ.
ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ವಯೋಮಿತಿ, Functional Group ಮತ್ತು ಅರ್ಜಿ ಶುಲ್ಕದ ವಿವರಗಳನ್ನು ಪರಿಶೀಲಿಸಿಕೊಂಡು 2026ರ ನವೆಂಬರ್ 18ರಿಂದ ಡಿಸೆಂಬರ್ 17ರೊಳಗೆ ASRB ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬೇಕು.
- No. of posts
- 1393
- Start Date
- 18 ನವೆಂಬರ್ 2026
- End Date
- 17 ಡಿಸೆಂಬರ್ 2026
- Pay Scale
- 29200 - 29200 INR
- Employment Type
- FULL_TIME
- Organization
- ASRB -ICAR (Website)
- Location
- Chayan Bhavan Pusa Campus, New Delhi, DL, 110012
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.
