ಕರ್ನಾಟಕ ಕಾರಾಗೃಹ ಇಲಾಖೆ ನೇಮಕಾತಿ 2026: 869 ಹುದ್ದೆಗಳಿಗೆ ಬೃಹತ್ ನೇಮಕಾತಿ! SSLC, ಡಿಗ್ರಿ ಅರ್ಹರಿಗೆ ಭರ್ಜರಿ ಅವಕಾಶ
ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿನ 05 Jailor & 835 Jail Police (ವಾರ್ಡರ್) ಸೇರಿದಂತೆ 869 ಹುದ್ದೆಗಳ ನೇಮಕಾತಿಗೆ KEA ಇದೀಗ ಅರ್ಜಿ ಆಹ್ವಾನಿಸಿದೆ.!!
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ತುಡಿಯುತ್ತಿರುವ ರಾಜ್ಯದ ಯುವಜನತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಭರ್ಜರಿ ಸಿಹಿಸುದ್ದಿ ನೀಡಿದೆ. ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 869 ಜೈಲರ್ (Jailor) ಮತ್ತು ಜೈಲ್ ಪೊಲೀಸ್ / ವಾರ್ಡರ್ (Warder) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕೆಇಎ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಎಸ್.ಎಸ್.ಎಲ್.ಸಿ (SSLC) ಹಾಗೂ ಪದವಿ ಪೂರೈಸಿರುವ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಉದ್ಯೋಗಾವಕಾಶವಾಗಿದೆ. ಈ ಬೃಹತ್ ನೇಮಕಾತಿಯ ಹುದ್ದೆಗಳ ವಿಂಗಡಣೆ, ಶೈಕ್ಷಣಿಕ ಅರ್ಹತೆ, ವಯೋಮಿತಿ, ದೈಹಿಕ ಮಾನದಂಡಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ವಿವರಗಳು ಇಲ್ಲಿವೆ.
ಹುದ್ದೆಗಳ ವಿವರ :
ಕಲ್ಯಾಣ ಕರ್ನಾಟಕ ವೃಂದದಲ್ಲಿನ ವಾರ್ಡರ್ (ವೀಕ್ಷಕರು) ಮತ್ತು ದ್ವಿತೀಯ ದರ್ಜೆ ಬೋಧಕರು (Instructor Grade-II) ಹುದ್ದೆಗಳ ವಿವರ:
01 ಜೈಲರ್ : 05
02 ವಾರ್ಡರ್ (ವೀಕ್ಷಕರು) : 275
03 ದ್ವಿತೀಯ ದರ್ಜೆ ಬೋಧಕರು (Instructor Grade-II) : 08
04 ವಾರ್ಡರ್ ಕಮ್ ನರ್ಸಿಂಗ್ : 05
ಒಟ್ಟು ಹುದ್ದೆಗಳ ಸಂಖ್ಯೆ : 293
ವೇತನ ಶ್ರೇಣಿ
01 ಜೈಲರ್ : 61,300-1,12,900/-
02 ವಾರ್ಡರ್ (ವೀಕ್ಷಕರು) : 37,500-76,100/-
03 ದ್ವಿತೀಯ ದರ್ಜೆ ಬೋಧಕರು (Instructor Grade-II) : 37,500-76,100/-
04 ವಾರ್ಡರ್ ಕಮ್ ನರ್ಸಿಂಗ್ : 34,100-67,600/-
ಉಳಿದ ಮೂಲ ವೃಂದದಲ್ಲಿ ವಾರ್ಡರ್ (ವೀಕ್ಷಕರು) ಮತ್ತು ದ್ವಿತೀಯ ದರ್ಜೆ ಬೋಧಕರು (Instructor Grade-II) ಹುದ್ದೆಗಳ ವಿವರ:
01 ವಾರ್ಡರ್ (ವೀಕ್ಷಕರು) : 560
02 ದ್ವಿತೀಯ ದರ್ಜೆ ಬೋಧಕರು (Instructor Grade-II) : 16
ಒಟ್ಟು ಹುದ್ದೆಗಳ ಸಂಖ್ಯೆ : 576
ವೇತನ ಶ್ರೇಣಿ :
01 ವಾರ್ಡರ್ (ವೀಕ್ಷಕರು) : 37,500-76,100/-
02 ದ್ವಿತೀಯ ದರ್ಜೆ ಬೋಧಕರು (Instructor Grade-II) : 37,500-76,100/-
ಶೈಕ್ಷಣಿಕ ವಿದ್ಯಾರ್ಹತೆ (Educational Qualification)
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಕೊನೆಯ ದಿನಾಂಕದೊಳಗೆ ಈ ಕೆಳಗಿನ ಕನಿಷ್ಠ ವಿದ್ಯಾರ್ಹತೆಯನ್ನು ಕಡ್ಡಾಯವಾಗಿ ಹೊಂದಿರಬೇಕು:
01 ಜೈಲರ್ : ಪದವಿ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು. ಸಮಾಜಶಾಸ್ತ್ರ ಅಥವಾ ಶರೀರಶಾಸ್ತ್ರ ಅಥವಾ ಅಪರಾಧಶಾಸ್ತ್ರ ಅಥವಾ ತಿದ್ದುಪಡಿ ಆಡಳಿತ ಅಥವಾ ತತ್ಸಮಾನ ಅರ್ಹತೆಯಲ್ಲಿ ಪದವಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
02 ನಾರ್ಡರ್ (ವೀಕ್ಷಕರು) : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
03 ದ್ವಿತೀಯ ದರ್ಜೆ ಬೋಧಕರು (Instructor Grade-II)
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು. ಮತ್ತು
ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಕಾರ್ಪೆಂಟ್ರಿ/ಟೈಲರಿಂಗ್/ಜವಳಿ/ನೇಯ್ಗೆ/ಕಾರ್ಪೆಟ್ ತಯಾರಿಕೆ ಇತ್ಯಾದಿಗಳಲ್ಲಿ ಡಿಪ್ಲೊಮಾ ಅಥವಾ ಪ್ರಮಾಣಪತ್ರವನ್ನು ಹೊಂದಿರಬೇಕು.
04 ವಾರ್ಡರ್ ಕಮ್ ನರ್ಸಿಂಗ್
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಮತ್ತು
ಪ್ರಥಮ ಚಿಕಿತ್ಸೆಯಲ್ಲಿ ಪ್ರಮಾಣೀಕರಿಸಲ್ಪಟ್ಟಿರಬೇಕು.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..
ಪ್ರಮುಖ ದಿನಾಂಕಗಳು :
- ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 19.09.2026
- ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15.10.2026
- ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ : 16.10.2026
ವಯೋಮಿತಿ ವಿವರ (Age Limit)
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು. ಗರಿಷ್ಠ ವಯೋಮಿತಿಯು ಪ್ರವರ್ಗಗಳ ಆಧಾರದ ಮೇಲೆ ಈ ಕೆಳಗಿನಂತಿರುತ್ತದೆ (ಸರ್ಕಾರದ ಇತ್ತೀಚಿನ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗುತ್ತವೆ):
- ಸಾಮಾನ್ಯ ಅರ್ಹತೆಯ (GM) ಅಭ್ಯರ್ಥಿಗಳಿಗೆ: ಗರಿಷ್ಠ 27 ವರ್ಷಗಳು.
- 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ: ಗರಿಷ್ಠ 29 ವರ್ಷಗಳು.
- SC, ST, ಪ್ರವರ್ಗ-1 ರ ಅಭ್ಯರ್ಥಿಗಳಿಗೆ: ಗರಿಷ್ಠ 32 ವರ್ಷಗಳು.
- (ಸೂಚನೆ: ಕರ್ನಾಟಕ ಸರ್ಕಾರದ ಆದೇಶದಂತೆ ಹೆಚ್ಚುವರಿ ವಯೋಮಿತಿ ಸಡಿಲಿಕೆ ಅನ್ವಯವಿದ್ದಲ್ಲಿ, ಅಧಿಸೂಚನೆಯನ್ನು ಕೂಲಂಕಷವಾಗಿ ಪರಿಶೀಲಿಸಿ).
ಅರ್ಜಿ ಶುಲ್ಕ: ಆನ್‌ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಬೇಕಾಗಿರುತ್ತದೆ.
- ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು(ಪ್ರವರ್ಗ-2ಎ / 2ಬಿ / 3ಎ / 3ಬಿ) : ರೂ. 750 /-
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳು : ರೂ. 500 /-
- ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ
ದೈಹಿಕ ಮಾನದಂಡಗಳು (Physical Standards)
ಕಾರಾಗೃಹ ಇಲಾಖೆಯ ಹುದ್ದೆಗಳಾಗಿರುವುದರಿಂದ, ಅಭ್ಯರ್ಥಿಗಳು ಕಡ್ಡಾಯವಾಗಿ ನಿಗದಿತ ದೈಹಿಕ ಮಾನದಂಡಗಳನ್ನು ಹೊಂದಿರಬೇಕು.
ಪುರುಷ ಅಭ್ಯರ್ಥಿಗಳಿಗೆ:
ಕನಿಷ್ಠ ಎತ್ತರ: 168 ಸೆಂ.ಮೀ.
ಎದೆ ಸುತ್ತಳತೆ: 86 ಸೆಂ.ಮೀ (ಕನಿಷ್ಠ 5 ಸೆಂ.ಮೀ ವಿಸ್ತರಣೆ ಸಾಮರ್ಥ್ಯ).
ಮಹಿಳಾ ಅಭ್ಯರ್ಥಿಗಳಿಗೆ:
ಕನಿಷ್ಠ ಎತ್ತರ: 157 ಸೆಂ.ಮೀ.
ಕನಿಷ್ಠ ತೂಕ: 46 ಕೆ.ಜಿ.
ಆಯ್ಕೆ ಪ್ರಕ್ರಿಯೆ (Selection Process)
ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಕೆಳಗಿನ ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಿದೆ:
- ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ (Written Exam): ಕೆಇಎ ವತಿಯಿಂದ 100 ಅಂಕಗಳ ಬಹು ಆಯ್ಕೆ ಮಾದರಿಯ (MCQ) ಲಿಖಿತ ಪರೀಕ್ಷೆ ನಡೆಯಲಿದೆ.
- ದೇಹದಾರ್ಢ್ಯತೆ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆ (PST & ET): ಲಿಖಿತ ಪರೀಕ್ಷೆಯಲ್ಲಿ ಮೆರಿಟ್ ಪಡೆದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ಓಟ, ಹೈಜಂಪ್/ಲಾಂಗ್ ಜಂಪ್ ಮತ್ತು ಶಾಟ್‌ಪುಟ್ ಪರೀಕ್ಷೆಗಳಿಗೆ ಕರೆಯಲಾಗುತ್ತದೆ.
- ವೈದ್ಯಕೀಯ ಪರೀಕ್ಷೆ (Medical Examination) ಹಾಗೂ ದಾಖಲಾತಿ ಪರಿಶೀಲನೆ.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪಡೆದಿಟ್ಟುಕೊಳ್ಳಬೇಕಾದ ಪ್ರಮಾಣಪತ್ರಗಳು.
1) ಆಧಾರ್ ಕಾರ್ಡ್
2) ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪಡೆದ ಆಯಾ ಹುದ್ದೆಗಳಿಗೆ ನಿಗದಿಪಡಿಸಲಾದ/ವಿದ್ಯಾರ್ಹತೆಯ ಎಲ್ಲಾ ವಿಷಯಗಳ/ಸೆಮಿಸ್ಟರ್‌ಗಳ ಅಂಕಪಟ್ಟಿಗಳು ಅಥವಾ ತತ್ಸಮಾನ ವಿದ್ಯಾರ್ಹತೆ ಅಂಕಪಟ್ಟಿಗಳು /ಪ್ರಮಾಣ ಪತ್ರಗಳು.
3) ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ/ ಶಾಲೆಯ ವರ್ಗಾವಣೆ ಪ್ರಮಾಣ ಪತ್ರ/ ಜನನ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದ್ಧತ ಭಾಗ.
4) ಸೈನಿಕ ಸೇವೆಯಿಂದ ಬಿಡುಗಡೆಯಾದ ಪ್ರಮಾಣ ಪತ್ರ ಮತ್ತು ಪಿಂಚಣಿ /ಗ್ರಾಚ್ಯುಟಿ ಪಡೆಯುತ್ತಿರುವ ಪ್ರಮಾಣ ಪತ್ರ/ಮಾಜಿ ಸೈನಿಕ ಅವಲಂಬಿತರಾಗಿದ್ದಲ್ಲಿ, ಮಾಜಿ ಸೈನಿಕರು ಸೇವೆಯಲ್ಲಿರುವಾಗ ಮೃತಪಟ್ಟಿದ್ದಲ್ಲಿ ಅಥವಾ ಶಾಶ್ವತವಾಗಿ ಅಂಗವಿಕಲರಾದ (Permanently Disbaled) ಪ್ರಮಾಣ ಪತ್ರ (ಮಾಜಿ ಸೈನಿಕ ಮೀಸಲಾತಿ ಕೋರಿದ್ದಲ್ಲಿ)
5) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ ಮತ್ತು ಪ್ರವರ್ಗ-3ಬಿ ಮೀಸಲಾತಿ ಪ್ರಮಾಣ ಪತ್ರಗಳು ಪ್ರಸ್ತುತ [ಾಲ್ತಿಯಲ್ಲಿರುವ ನಮೂನೆಗಳಲ್ಲಿ (ಮೀಸಲಾತಿ ಕೋರಿದ್ದಲ್ಲಿ)
6) ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ನಮೂನೆ-1 ಮತ್ತು 2ರಲ್ಲಿ (ಗ್ರಾಮೀಣ ಮೀಸಲಾತಿ ಕೋರಿದ ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು ನಮೂನೆ-1 ರಲ್ಲಿ ಮಾತ್ರ ಹಾಗೂ ಗ್ರಾಮೀಣ ಮೀಸಲಾತಿ ಕೋರಿದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1/ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳು ನಮೂನೆ-2 ರಲ್ಲಿ ಮಾತ್ರ)
7) ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)
8) ಸೇವೆಯಲ್ಲಿರುವ ಅಭ್ಯರ್ಥಿಗಳು ಆಯ್ಕೆಯಾದಲ್ಲಿ ನಿರಾಕ್ಷೇಪಣ ಪ್ರಮಾಣ ಪತ್ರಗಳನ್ನು ಪಡೆದು ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು (ನಿಗದಿಪಡಿಸಿದ್ದಲ್ಲಿ)
9) ಜಿಲ್ಲಾ ಮ್ಯಾಜಿಸ್ಟ್ರೇಟ್ ರವರಿಂದ ಪಡೆದ ತೃತೀಯ ಲಿಂಗದ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)
ಪ್ರತಿದಿನದ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್‌ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ವಿಧಾನ (How to Apply Online)
- ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್ cetonline.karnataka.gov.in/kea ಗೆ ಭೇಟಿ ನೀಡಬೇಕು.
- 'Recruitment' ವಿಭಾಗದಲ್ಲಿ ಕಾರಾಗೃಹ ಇಲಾಖೆಯ ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಮೊದಲು ನಿಮ್ಮ ಮೂಲ ವಿವರಗಳನ್ನು ನೀಡಿ ನೋಂದಣಿ (Registration) ಮಾಡಿಕೊಳ್ಳಿ.
- ಲಾಗಿನ್ ಆಗಿ, ಶೈಕ್ಷಣಿಕ ಮಾಹಿತಿ ಮತ್ತು ಮೀಸಲಾತಿ ವಿವರಗಳನ್ನು ಜಾಗರೂಕತೆಯಿಂದ ಭರ್ತಿ ಮಾಡಿ.
- ನಿಗದಿತ ಅಳತೆಯಲ್ಲಿ ಭಾವಚಿತ್ರ, ಸಹಿ ಮತ್ತು ಎಡಗೈ ಹೆಬ್ಬೆಟ್ಟಿನ ಗುರುತನ್ನು ಅಪ್‌ಲೋಡ್ ಮಾಡಿ.
- ಆನ್‌ಲೈನ್ ಮುಖಾಂತರವೇ ಅರ್ಜಿ ಶುಲ್ಕ ಪಾವತಿಸಿ, ಅಂತಿಮ ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
KPSCVaani ವಿಶೇಷ ಸಲಹೆ: ಎಸ್.ಎಸ್.ಎಲ್.ಸಿ ಪಾಸಾದ ಯುವಜನತೆಗೆ ಇದೊಂದು ಸುವರ್ಣಾವಕಾಶ. ದೈಹಿಕ ಪರೀಕ್ಷೆಗಳು ಕಠಿಣವಾಗಿರುವುದರಿಂದ ಇಂದಿನಿಂದಲೇ ಲಿಖಿತ ಪರೀಕ್ಷೆಯ ಜೊತೆಗೆ ಮೈದಾನದ ಅಭ್ಯಾಸವನ್ನು (Ground Practice) ಪ್ರಾರಂಭಿಸಿ.
ಸ್ಪರ್ಧಾತ್ಮಕ ಪರೀಕ್ಷೆಗಳ ಸಿಲಬಸ್, ಹಳೆಯ ಪ್ರಶ್ನೆಪತ್ರಿಕೆಗಳು ಮತ್ತು ಕ್ಷಣಕ್ಷಣದ ಉದ್ಯೋಗ ಮಾಹಿತಿಗಾಗಿ KPSCVaani.com ಜಾಲತಾಣಕ್ಕೆ ಪ್ರತಿದಿನ ಭೇಟಿ ನೀಡಿ.
- No. of posts
- 869
- Start Date
- 19 ಸೆಪ್ಟೆಂಬರ್ 2026
- End Date
- 15 ಅಕ್ಟೋಬರ್ 2026
- Last Payment
- 16 ಅಕ್ಟೋಬರ್ 2026
- Pay Scale
- 61300 - 112900 INR
- Employment Type
- FULL_TIME
- Organization
- KEA (Website)
- Location
- ಪೊಲೀಸ್ ಮಹಾನಿರೀಕ್ಷಕರು ಮತ್ತು ನಿರ್ದೇಶಕರು, ಕಾರಾಗೃಹ ಮತ್ತು ಸುಧಾರಣಾ ಸೇವೆಗಳು, ನಂ. 4, ಶೇಷಾದ್ರಿ ರಸ್ತೆ, ಗಾಂಧಿನಗರ,, ಬೆಂಗಳೂರು, KA, 560009


Comments