IRCTC ನೇಮಕಾತಿ 2026: ಹಾಸ್ಪಿಟಾಲಿಟಿ ಮೊನಿಟರ್ ಹುದ್ದೆಗಳಿಗೆ ವಾಕ್-ಇನ್ ಇಂಟರ್‌ವ್ಯೂ

IRCTC ನೇಮಕಾತಿ 2026: ಹಾಸ್ಪಿಟಾಲಿಟಿ ಮೊನಿಟರ್ ಹುದ್ದೆಗಳಿಗೆ ವಾಕ್-ಇನ್ ಇಂಟರ್‌ವ್ಯೂ
Published by Heena Sheregar
19 ಸೆಪ್ಟೆಂಬರ್ 2026 Others
Tags: B.Sc MBA BBA

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ (IRCTC) ಕೆಲಸ ಮಾಡಲು ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶ ಎದುರಾಗಿದೆ. ಯಾವುದೇ ಲಿಖಿತ ಪರೀಕ್ಷೆಯ ಹಾವಳಿಯಿಲ್ಲದೆ, ನೇರವಾಗಿ ಸಂದರ್ಶನಕ್ಕೆ ಹಾಜರಾಗಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅತ್ಯುತ್ತಮ ಹಾದಿ ತೆರೆದಿದೆ.

 

IRCTC ಸೌತ್ ಸೆಂಟ್ರಲ್ ಝೋನ್ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು 22 ಹಾಸ್ಪಿಟಾಲಿಟಿ ಮೊನಿಟರ್ (Hospitality Monitors) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ 4 OBC ಬ್ಯಾಕ್‌ಲಾಗ್ ಹುದ್ದೆಗಳು ಸಹ ಸೇರಿವೆ. ಆಯ್ಕೆಯಾಗುವ ಅಭ್ಯರ್ಥಿಗಳು 2 ವರ್ಷಗಳ ತಾತ್ಕಾಲಿಕ ಒಪ್ಪಂದ (Fixed Term Contract) ಆಧಾರದ ಮೇಲೆ ಸೇವೆ ಸಲ್ಲಿಸಬೇಕಾಗುತ್ತದೆ.

 

ವಿಶೇಷವೆಂದರೆ ಈ ಹುದ್ದೆಗಳಿಗೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿರುವುದಿಲ್ಲ. ಮಾಸಿಕ ₹30,000 ವರೆಗೆ ವೇತನ ಸಿಗಲಿದ್ದು, ಇದರ ಜೊತೆಗೆ ದಿನಭತ್ಯೆ, ಪ್ರಯಾಣ ಭತ್ಯೆ ಹಾಗೂ ವೈದ್ಯಕೀಯ ವಿಮೆಯಂತಹ ಸೌಲಭ್ಯಗಳು ಲಭ್ಯವಿರುತ್ತವೆ. ಅಕ್ಟೋಬರ್ 5 ಮತ್ತು ಅಕ್ಟೋಬರ್ 8 ರಂದು ನೇರ ಸಂದರ್ಶನ ನಡೆಯಲಿದ್ದು, ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಬಹುದು. ರೈಲ್ವೆ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಇದು ಸೂಕ್ತವಾದ ವೇದಿಕೆಯಾಗಿದೆ. ಅರ್ಹತೆ, ವಯೋಮಿತಿ ಹಾಗೂ ಸಂದರ್ಶನದ ಸಂಪೂರ್ಣ ವಿವರಗಳನ್ನು ಕೆಳಗೆ ನೀಡಲಾಗಿದೆ.

 

 

ಹುದ್ದೆಗಳ ಸಂಕ್ಷಿಪ್ತ ಮಾಹಿತಿ:

  • ಸಂಸ್ಥೆಯ ಹೆಸರು: ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC)
  • ಹುದ್ದೆಯ ಹೆಸರು: ಹಾಸ್ಪಿಟಾಲಿಟಿ ಮೊನಿಟರ್
  • ಮೊತ್ತ ಹುದ್ದೆಗಳು: 22 (4 OBC ಬ್ಯಾಕ್‌ಲಾಗ್ ಸೇರಿ)
  • ಆಯ್ಕೆ ವಿಧಾನ: ಮೂಲ ದಾಖಲೆ ಪರಿಶೀಲನೆ ಮತ್ತು ನೇರ ಸಂದರ್ಶನ
  • ವೇತನ: ತಿಂಗಳಿಗೆ ₹30,000 (ಜೊತೆಗೆ ಭತ್ಯೆಗಳು)
  • ಸಂದರ್ಶನ ದಿನಾಂಕ: ಅಕ್ಟೋಬರ್ 5, 2026 ಮತ್ತು ಅಕ್ಟೋಬರ್ 8, 2026 

 

ಶೈಕ್ಷಣಿಕ ಅರ್ಹತೆ (Educational Qualification): ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕೆಳಗಿನ ಯಾವುದಾದರೂ ಕೋರ್ಸ್ ಪೂರ್ಣಗೊಳಿಸಿರಬೇಕು:

  • Central ಅಥವಾ State IHMs (NCHMCT / UGC / AICTE) ನಿಂದ B.Sc. in Hospitality and Hotel Administration
  • BBA ಅಥವಾ MBA (Culinary Arts)
  • B.Sc. Hotel Management and Catering Science
  • M.B.A (Tourism and Hotel Management)

 

ವಯೋಮಿತಿ ಮತ್ತು ಸಡಲಿಿಕೆ (Age Limit):

  • 01.09.2026 ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ (UR) ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
    ಸರ್ಕಾರದ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಲಿಕೆ ಲಭ್ಯವಿದೆ:
  • SC / ST ಅಭ್ಯರ್ಥಿಗಳಿಗೆ: 5 ವರ್ಷಗಳು
  • OBC (NCL) ಅಭ್ಯರ್ಥಿಗಳಿಗೆ: 3 ವರ್ಷಗಳು
  • PwBD (ವಿಕಲಚೇತನ) ಅಭ್ಯರ್ಥಿಗಳಿಗೆ: 10 ವರ್ಷಗಳು

 

ವೇತನ ಮತ್ತು ಸೌಲಭ್ಯಗಳು (Salary & Benefits):

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹30,000/- ಆಕರ್ಷಕ ವೇತನ ದೊರೆಯಲಿದೆ. ಇದರ ಜೊತೆಗೆ ಕೆಲಸದ ವೇಳೆ ನೀಡಲಾಗುವ ದಿನಭತ್ಯೆ (DA), ಪ್ರಯಾಣ ಭತ್ಯೆ (TA) ಹಾಗೂ ವೈದ್ಯಕೀಯ ವಿಮೆ (Medical Insurance) ಸೌಲಭ್ಯಗಳು ಸಿಗಲಿವೆ.

 

ಇದನ್ನು ಓದಿ: ಬ್ರೇಕಿಂಗ್: ಕರ್ನಾಟಕ ಕಾರಾಗೃಹ ಇಲಾಖೆಯಲ್ಲಿ 869 ಜೈಲರ್ & ವಾರ್ಡರ್ ಹುದ್ದೆಗಳ ಬೃಹತ್ ನೇಮಕಾತಿ! SSLC, ಡಿಗ್ರಿ ಆದವರಿಗೆ ಭರ್ಜರಿ ಅವಕಾಶ.

 

ನೇರ ಸಂದರ್ಶನ ನಡೆಯುವ ದಿನಾಂಕ ಮತ್ತು ಸ್ಥಳ (Interview Dates & Venue): ಸಂದರ್ಶನಕ್ಕೆ ಹಾಜರಾಗುವವರು ಭರ್ತಿ ಮಾಡಿದ ಅರ್ಜಿ ನಮೂನೆ, ಮೂಲ ದಾಖಲೆಗಳು ಹಾಗೂ ಪಾಸ್‌ಪೋರ್ಟ್ ಅಳತೆಯ ಫೋಟೋಗಳೊಂದಿಗೆ ನಿಗದಿತ ಸಮಯಕ್ಕೆ ಹಾಜರಾಗಬೇಕು.

1. ಭುವನೇಶ್ವರ (Odisha) ಸಂದರ್ಶನ:

  • ದಿನಾಂಕ: 05.10.2026
  • ಸಮಯ: ಬೆಳಿಗ್ಗೆ 10:30 ರಿಂದ ಸಂಜೆ 05:30 ರವರೆಗೆ
  • ಸ್ಥಳ: IRCTC Regional Office, Gate-1, Tower-1, Ground Floor, NBCC Imperia, Near New Govt. Colony, Press Square, Bhubaneswar - 751017

2. ಹೈದರಾಬಾದ್ (Telangana) ಸಂದರ್ಶನ:

  • ದಿನಾಂಕ: 08.10.2026
  • ಸಮಯ: ಬೆಳಿಗ್ಗೆ 10:30 ರಿಂದ ಸಂಜೆ 05:30 ರವರೆಗೆ
  • ಸ್ಥಳ: IRCTC Ltd, 1st Floor, Oxford Plaza, Sarojini Devi Road, Secunderabad - 500003 

 

ನೇರ ಸಂದರ್ಶನಕ್ಕೆ ಹಾಜರಾಗುವುದು ಹೇಗೆ? (Application Process):

  • IRCTC ಅಧಿಕೃತ ವೆಬ್‌ಸೈಟ್ irctc.com ಗೆ ಭೇಟಿ ನೀಡಿ ಅಧಿಕೃತ ನೋಟಿಫಿಕೇಶನ್ ಮತ್ತು ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
  • ಅರ್ಜಿಯಲ್ಲಿ ಕೇಳಲಾದ ವಿವರಗಳನ್ನು ತಪ್ಪಿಲ್ಲದೆ ಭರ್ತಿ ಮಾಡಿ.
  • ಶೈಕ್ಷಣಿಕ ಪ್ರಮಾಣಪತ್ರಗಳು, ವಯಸ್ಸಿನ ಪುರಾವೆ, ಜಾತಿ ಪ್ರಮಾಣಪತ್ರ ಹಾಗೂ ಅನುಭವದ ಪತ್ರಗಳ (ಇದ್ದರೆ) ಸ್ವಯಂ ದೃಢೀಕರಿಸಿದ (Self-attested) ಪ್ರಿಂಟ್‌ಔಟ್‌ಗಳನ್ನು ಲಗತ್ತಿಸಿ.
  • ನಿಗದಿಪಡಿಸಿದ ದಿನಾಂಕದಂದು ಸಂದರ್ಶನದ ಸ್ಥಳಕ್ಕೆ ನೇರವಾಗಿ ಹಾಜರಾಗಿ.

 

Advertisement
Job Overview
End Date
8 ಅಕ್ಟೋಬರ್ 2026
Employment Type
FULL_TIME
Organization
IRCTC (Website)
Location
IRCTC Regional Office, Bhubaneswar, OD, 751017
To download official notification
To download Application form
Related Tags: B.Sc MBA BBA
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.