SSLC ಪಾಸಾದವರಿಗೆ ಗುಡ್ ನ್ಯೂಸ್: ಗದಗ ಜಿಲ್ಲಾ ನ್ಯಾಯಾಲಯದಲ್ಲಿ ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿ 22 ಜವಾನ (Peon) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ. SSLC ಪಾಸಾದವರು ಈಗಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ. ವಯೋಮಿತಿ, ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ವಿವರ ಇಲ್ಲಿದೆ.
ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವ ಕರ್ನಾಟಕದ ಯುವಜನತೆಗೆ ಒಂದು ಭರ್ಜರಿ ಅವಕಾಶ ಎದುರಾಗಿದೆ. ಗದಗ ಜಿಲ್ಲಾ ನ್ಯಾಯಾಲಯ ನೇಮಕಾತಿ ಪ್ರಕ್ರಿಯೆ ಇದೀಗ ಅಧಿಕೃತವಾಗಿ ಆರಂಭವಾಗಿದ್ದು, ಒಟ್ಟು 22 ಜವಾನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.
ಕೇವಲ ಹತ್ತನೇ ತರಗತಿ ತೇರ್ಗಡೆಯಾದವರಿಗೂ ಈ ಮೂಲಕ ನ್ಯಾಯಾಲಯದಲ್ಲಿ ಉದ್ಯೋಗ ಪಡೆಯುವ ದಾರಿ ಸುಗಮವಾಗಿದೆ. ಈ ಬಾರಿಯ ನೇಮಕಾತಿಯ ಅತಿ ದೊಡ್ಡ ಆಕರ್ಷಣೆ ಎಂದರೆ, ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಕಠಿಣ ಲಿಖಿತ ಪರೀಕ್ಷೆಗಳನ್ನು ಎದುರಿಸುವ ಹಾಗಿಲ್ಲ.
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಶುರುವಾಗಿದ್ದು, ಅಕ್ಟೋಬರ್ 31 ಅರ್ಜಿ ಸಲ್ಲಿಸಲು ಕಡೇ ದಿನವಾಗಿದೆ. ಉತ್ತಮ ವೇತನ ಶ್ರೇಣಿ ಹಾಗೂ ಉದ್ಯೋಗ ಭದ್ರತೆ ಇರುವ ಈ ಹುದ್ದೆಗಳಿಗೆ ರಾಜ್ಯದ ಯಾವುದೇ ಭಾಗದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ..
ಗದಗ ನ್ಯಾಯಾಲಯ ಉದ್ಯೋಗ: ಹುದ್ದೆಗಳ ಸಂಪೂರ್ಣ ವಿವರ
ಉದ್ಯೋಗಾವಕಾಶದ ಬಗ್ಗೆ ಆಸಕ್ತಿ ಹೊಂದಿರುವವರು ಮೊದಲು ಹುದ್ದೆಯ ವಿವರಗಳನ್ನು ತಿಳಿದುಕೊಳ್ಳುವುದು ಬಹುಮುಖ್ಯ.
- ಹುದ್ದೆಯ ಹೆಸರು: ಜವಾನ (Peon)
- ಒಟ್ಟು ಖಾಲಿ ಹುದ್ದೆಗಳು: 22
- ಕೆಲಸದ ಸ್ಥಳ: ಗದಗ ಜಿಲ್ಲಾ ನ್ಯಾಯಾಲಯ ಘಟಕ
- ತಿಂಗಳ ವೇತನ: 27,000 ರೂಪಾಯಿಯಿಂದ 46,675 ರೂಪಾಯಿಗಳವರೆಗೆ
- ಪರಿವೀಕ್ಷಣಾ ಅವಧಿ (Probation Period): ಆಯ್ಕೆಯಾದ ಅಭ್ಯರ್ಥಿಗಳನ್ನು ನಿಯಮಾನುಸಾರ 2 ವರ್ಷಗಳ ಕಾಲ ಪ್ರೊಬೇಷನರಿ ಅವಧಿಯಲ್ಲಿ ಇಡಲಾಗುತ್ತದೆ.
ಪ್ರಮುಖ ದಿನಾಂಕಗಳು :
- ಅಧಿಸೂಚನೆ ಪ್ರಕಟವಾದ ದಿನಾಂಕ: 25/09/2026
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 28/09/2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31/10/2026 ರಾತ್ರಿ11.59 ಘಂಟೆಯವರೆಗೆ ಮಾತ್ರ
- ಆನ್‌ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 03/11/2026
ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಶೈಕ್ಷಣಿಕ ಅರ್ಹತೆ ಏನು?
- ನ್ಯಾಯಾಲಯದ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಲೇಬೇಕು.
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಅಭ್ಯರ್ಥಿಯು 10ನೇ ತರಗತಿ ಅಂದರೆ SSLC ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಿರಬೇಕು.
- ಇದರ ಜೊತೆಗೆ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಓದಲು ಹಾಗೂ ಬರೆಯಲು ತಿಳಿದಿರುವುದು ಕಡ್ಡಾಯ.
ವೇತನ ಶ್ರೇಣಿ: ರೂ. 27000-650-29600-725-32500-800-35700-900- 39300-1000-43300-1125-46675 ಮತ್ತು ಇತರೆ ಭತ್ಯೆಗಳು
ವಯೋಮಿತಿ ವಿವರ ಹಾಗೂ ಸಡಿಲಿಕೆ
ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದು, ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಗೆ ಅನ್ವಯವಾಗುವಂತೆ 5 ವರ್ಷಗಳ ಸಡಿಲಿಕೆಯನ್ನು ಘೋಷಿಸಿದೆ.
- ಕನಿಷ್ಠ ವಯಸ್ಸು: ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷ (35+5)
- ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: ಗರಿಷ್ಠ 43 ವರ್ಷ (38+5)
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1ರ ಅಭ್ಯರ್ಥಿಗಳಿಗೆ: ಗರಿಷ್ಠ 45 ವರ್ಷ (40+5)
ನಿಗದಿಪಡಿಸಿದ ಅರ್ಜಿ ಶುಲ್ಕ
1 ಸಾಮಾನ್ಯ ವರ್ಗ : ರೂ. 200/-
2 ಪ್ರವರ್ಗ 2 ಎ, 2ಬಿ, 3ಎ, ಮತ್ತು 3 ಬಿ ಸೇರಿದ ಅಭ್ಯರ್ಥಿಗಳಿಗೆ : ರೂ.100/-
3 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ :
ಶುಲ್ಕ ವಿನಾಯತಿ ಇರುತ್ತದೆ.
ಸೂಚನೆ : ನಿಗದಿತ ಶುಲ್ಕವನ್ನು ನ್ಯಾಯಾಲಯದ ಜಾಲತಾ (website) https://gadag.dcourts.gov.in/kn/online-recruitment/ ನೆದ್ದರಲ್ಲಿ ನೀಡಲಾದ ಲಿಂಕ್ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ State Bank Collect ಮೂಲಕ Online payment through net banking/credit card/debit card/UPI ಸೌಲಭ್ಯದ ಮೂಲಕ ಪಾವತಿಸತಕ್ಕದ್ದು. ಇದನ್ನು ಹೊರತುಪಡಿಸಿ ಯಾವುದೇ ಡಿಮ್ಯಾಂಡ್ ಡ್ರಾಫ್ಟ್ / ಪೋಸ್ಟಲ್ ಆರ್ಡರ್ / ಮನಿ ಆರ್ಡರ್ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ. ಶುಲ್ಕ ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ನಡೆಸುವುದಿಲ್ಲ ಎನ್ನುವುದು ಬಹುತೇಕರ ಪಾಲಿಗೆ ನೆಮ್ಮದಿಯ ವಿಚಾರ. ಅಭ್ಯರ್ಥಿಗಳ ಆಯ್ಕೆಯನ್ನು ಈ ಕೆಳಗಿನ ನಿಯಮಾನುಸಾರ ಮಾಡಲಾಗುತ್ತದೆ.
1) ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ ನಿಯಮಗಳು, 1977.
2) ಕರ್ನಾಟಕ ಆಧೀನ ನ್ಯಾಯಾಲಯಗಳು (ಮಿನಿಸಿರಿಯಲ್ಲಿ ಮತ್ತು ಇತರೆ ಹುದ್ದೆಗಳು (ನೇಮಕಾತಿ ) (ತಿದ್ದುಪಡಿ) ನಿಯಮಗಳು 2007 ಮತ್ತು 2021 ರ ಅನ್ವಯ ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುವುದು.
3) ಜವಾನ ಹುದ್ದೆಗಳಿಗೆ 10 ನೇ ತರಗತಿಯಲ್ಲಿ ಪಡೆದ ಸರಾಸರಿ ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ 1:10 ಅನುಪಾತದಂತೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ಒಟ್ಟು 10 ಅಂಕಗಳನ್ನು ನಿಗದಿಪಡಿಸಲಾಗಿದೆ. ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳು 10 ನೇ ತರಗತಿಯಲ್ಲಿ ಪಡೆದ ಅಂಕಗಳನ್ನು ಸಂದರ್ಶನಕ್ಕೆ ಕರೆಯಲು ಮಾತ್ರ ಪರಿಗಣಿಸಲಾಗುವುದು.
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಬೇಕಾಗುವ ಅಗತ್ಯ ದಾಖಲೆಗಳು & ಸ್ಕ್ಯಾನಿಂಗ್ ನಿಯಮಗಳು
- ಭಾವಚಿತ್ರ (Photo): ಇತ್ತೀಚಿನ ಬಿಳಿ ಹಿನ್ನೆಲೆಯ ಭಾವಚಿತ್ರ (ಗಾತ್ರ: ಗರಿಷ್ಠ 50 KB, ಅಳತೆ: 5 cm x 3.6 cm, .jpg ಫಾರ್ಮ್ಯಾಟ್). ಭಾವಚಿತ್ರದ ಮೇಲೆ ಯಾವುದೇ ಸಹಿ ಇರಬಾರದು.
- ಸಹಿ (Signature): ಬಿಳಿ ಕಾಗದದ ಮೇಲೆ ಕಪ್ಪು ಇಂಕ್ ಬಾಲ್‌ಪಾಯಿಂಟ್ ಪೆನ್ನಿನಿಂದ ಮಾಡಿದ ಸಹಿ (ಗಾತ್ರ: ಗರಿಷ್ಠ 26 KB, ಅಳತೆ: 2.5 cm x 7.5 cm, .jpg ಫಾರ್ಮ್ಯಾಟ್).
- ದಾಖಲೆ (PDF): ಜನ್ಮ ದಿನಾಂಕದ ದೃಢೀಕರಣಕ್ಕಾಗಿ SSLC ಅಥವಾ ತತ್ಸಮಾನ ಅಂಕಪಟ್ಟಿಯನ್ನು PDF ರೂಪದಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯ.
- ಚಾಲ್ತಿಯಲ್ಲಿರುವ ಪ್ರಮಾಣಪತ್ರಗಳು: ಜಾತಿ ಪ್ರಮಾಣಪತ್ರ, ಗ್ರಾಮೀಣ ಮೀಸಲಾತಿ (ನಮೂನೆ-2 ಮತ್ತು ಕೆನೆಪದರ ರಹಿತ ನಮೂನೆ-1), ಕನ್ನಡ ಮಾಧ್ಯಮ, ಮಾಜಿ ಸೈನಿಕ, ಅಂಗವಿಕಲ ಪ್ರಮಾಣಪತ್ರ ಹಾಗೂ ಯೋಜನಾ ನಿರಾಶ್ರಿತ ಪ್ರಮಾಣಪತ್ರಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಪಡೆದುಕೊಂಡಿರಬೇಕು.
- ನಡತೆ ಪ್ರಮಾಣಪತ್ರಗಳು:
- ಅಭ್ಯರ್ಥಿ ಕೊನೆಯದಾಗಿ ವ್ಯಾಸಂಗ ಮಾಡಿದ ಶಾಲಾ/ಕಾಲೇಜಿನಿಂದ ಪಡೆದ ನಡತೆ ಪ್ರಮಾಣಪತ್ರ.
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಕ್ಕೆ 6 ತಿಂಗಳ ಒಳಗಾಗಿ ಇಬ್ಬರು ಗಣ್ಯ ವ್ಯಕ್ತಿಗಳಿಂದ (ಸಂಬಂಧಿಕರಲ್ಲದವರಿಂದ) ಪಡೆದ ನಡತೆ ಪ್ರಮಾಣಪತ್ರಗಳು.
ಅರ್ಜಿ ಸಲ್ಲಿಸುವುದು ಹೇಗೆ? (Step-by-Step Guide)
- ಗದಗ ಜಿಲ್ಲಾ ನ್ಯಾಯಾಲಯದ ಅಧಿಕೃತ ನೇಮಕಾತಿ ಪೋರ್ಟಲ್‌ಗೆ ಭೇಟಿ ನೀಡಿ: https://gadag.dcourts.gov.in/kn/online-recruitment/ "ಜವಾನರ ಹುದ್ದೆಗಳ ನೇಮಕಾತಿ - 2026" ಲಿಂಕ್ ಮೇಲೆ ಕ್ಲಿಕ್ ಮಾಡಿ.
- ವೈಯಕ್ತಿಕ ವಿವರ, ವಿಳಾಸ, ಮೀಸಲಾತಿ ವರ್ಗ ಮತ್ತು ವಿದ್ಯಾರ್ಹತೆಯ ಅಂಕಗಳನ್ನು ದೋಷವಿಲ್ಲದೆ ನಮೂದಿಸಿ.
- ನಿಗದಿತ ಅಳತೆಯಲ್ಲಿ ಫೋಟೋ, ಸಹಿ ಮತ್ತು SSLC ಅಂಕಪಟ್ಟಿಯ PDF ಅಪ್‌ಲೋಡ್ ಮಾಡಿ. ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿದ ನಂತರವೇ Submit ಬಟನ್ ಒತ್ತಿ.
- ನಂತರ SBI Collect ಮೂಲಕ ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.
- ಪೂರ್ಣಗೊಂಡ ಅರ್ಜಿ ಹಾಗೂ ಶುಲ್ಕ ಪಾವತಿಯ ರಶೀದಿಯನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಂಡು ಮುಂದಿನ ಪ್ರಕ್ರಿಯೆಗೆ ಸುರಕ್ಷಿತವಾಗಿಟ್ಟುಕೊಳ್ಳಿ.
ನಿಮ್ಮ ದಾಖಲೆಗಳನ್ನು ಈಗಲೇ ಸಿದ್ಧಪಡಿಸಿಕೊಳ್ಳಿ. ಕೊನೆಯ ಘಳಿಗೆಯ ಸರ್ವರ್ ಸಮಸ್ಯೆಗಳಿಂದ ಪಾರಾಗಲು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. ಉದ್ಯೋಗದ ಹುಡುಕಾಟದಲ್ಲಿರುವ ನಿಮ್ಮ ಸ್ನೇಹಿತರಿಗೂ ಈ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲು ಮರೆಯದಿರಿ.
ರಾಜ್ಯದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ನಿಖರ ಮಾಹಿತಿ, ನೋಟ್ಸ್ ಮತ್ತು ಉದ್ಯೋಗದ ಅಪ್ಡೇಟ್‌ಗಳಿಗಾಗಿ KPSCVaani ಗೆ ಭೇಟಿ ನೀಡುತ್ತಿರಿ.
- No. of posts
- 22
- End Date
- 31 ಅಕ್ಟೋಬರ್ 2026
- Last Payment
- 3 ನವೆಂಬರ್ 2026
- Pay Scale
- 27000 - 46675 INR
- Employment Type
- FULL_TIME
- Organization
- Gadag District Court (Website)
- Location
- DC Office on Hubli Road (Hubli Highway), Betageri, Gadag-Betageri,, Gadag, KA, 582101
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.
.jpeg)
