Loading..!

DRDO ದಲ್ಲಿ ಖಾಲಿ ಇರುವ ಸೈಂಟಿಸ್ಟ್ ಹುದ್ದೆಗೆ ಎಂಜಿನಿಯರಿಂಗ್ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.

|
DRDO ದಲ್ಲಿ ಖಾಲಿ ಇರುವ ಸೈಂಟಿಸ್ಟ್ ಹುದ್ದೆಗೆ ಎಂಜಿನಿಯರಿಂಗ್ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಭಾರತೀಯ ಸೇನೆಗೆ ಮಹತ್ತರ ಕೊಡುಗೆ ನೀಡುತ್ತಿರುವ 'ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ'ಯಲ್ಲಿ (DRDO) ಸೈಂಟಿಸ್ಟ್ ಆಗಬೇಕೆಂಬ ಕನಸು ನಿಮ್ಮದಾಗಿದ್ದರೆ ಇದೀಗ ಅವಕಾಶ ಒದಗಿ ಬಂದಿದೆ. ರಕ್ಷಣಾ ಇಲಾಖೆಗೆ ಸೇರಿದ ಈ ಸಂಸ್ಥೆ ಸೈಂಟಿಸ್ಟ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಒಟ್ಟು 40 (ಸೈಂಟಿಸ್ಟ್ - ಎಫ್,ಡಿ/ಇ,ಸಿ ) ಹುದ್ದೆಗಳಿಗೆ ನೇಮಕ ನಡೆಯಲಿದೆ. ಆಸಕ್ತರು ಜುಲೈ ಮೊದಲ ವಾರದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ವಿವರ: * ಮೆಕ್ಯಾನಿಕಲ್, ಪ್ರೋಡಕ್ಷನ್, ಪ್ರೊಡಕ್ಷನ್ ಅಂಡ್ ಇಂಡಸ್ಟ್ರಿಯಲ್,ಏರೋನಾಟಿಕಲ್,ಏರೋಸ್ಪೇಸ್ ಎಂಜಿನಿಯರಿಂಗ್, ಎಲೆಕ್ರ್ಟಾನಿಕ್ಸ್ ಅಂಡ್ ಕಮ್ಯುನಿಕೇಷನ್, ಎಲೆಕ್ರ್ಟಾನಿಕ್ಸ್ ಆಂಡ್ ಟೆಲಿಕಮ್ಯುನಿಕೇಶನ್, ಎಲೆಕ್ರ್ಟಾನಿಕ್ಸ್,ಕಂಪ್ಯೂಟರ್ ಸೈನ್ಸ್,ಕಂಪ್ಯೂಟರ್ ಹಾರ್ಡ್ ವೆರ್, ಕಂಪ್ಯೂಟರ್ ಸೈನ್ಸ್ ಆಂಡ್ ಆಟೋಮೇಷನ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಈ ನೇಮಕ ನಡೆಯಲಿದೆ.ಅರ್ಹ ಅಭ್ಯರ್ಥಿಗಳಿಂದ ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಸೂಚನೆ :ಸೈಂಟಿಸ್ಟ್ - ಎಫ್ ಹುದ್ದೆಗೆ 13 ವರ್ಷ,ಸೈಂಟಿಸ್ಟ್ - ಇ ಹುದ್ದೆಗೆ 10 ವರ್ಷ,ಸೈಂಟಿಸ್ಟ್ - ಡಿ ಹುದ್ದೆಗೆ 7 ವರ್ಷ ಮತ್ತು ಸೈಂಟಿಸ್ಟ್ - ಸಿ ಹುದ್ದೆಗೆ 3 ವರ್ಷಗಳ ಸೇವಾನುಭವ ಕಡ್ಡಾಯ.
Job Overview
No. of posts
40
Start Date
22 ಜೂನ್ 2019
End Date
6 ಜುಲೈ 2019
Employment Type
FULL_TIME
Organization
KPSC Vaani (Website)
Location
KA,
Qualification:
ಅಭ್ಯರ್ಥಿಯು ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಮೊದಲ ದರ್ಜೆಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರಬೇಕು. ಸ್ನಾತಕೋತ್ತರ ಪದವಿ, ಡಾಕ್ಟ್ ರೇಟ್ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ.
Fee:
ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಉಳಿದಂತೆ ಸಾಮಾನ್ಯ ವರ್ಗ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 100/- ರೂ.ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನಲೈನ್ ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿರುತ್ತದೆ.
Age Limit:
ಸೈಂಟಿಸ್ಟ್- ಸಿ ಹುದ್ದೆಗೆ 35ವರ್ಷ, ಸೈಂಟಿಸ್ಟ್ ಡಿ/ಇ ಹುದ್ದೆಗೆ 45 ವರ್ಷ ಹಾಗೂ ಸೈಂಟಿಸ್ಟ್-ಎಫ್ ಹುದ್ದೆಗೆ ಗರಿಷ್ಠ ವಯೋಮಿತಿ 55 ವರ್ಷ ನಿಗದಿಪಡಿಸಲಾಗಿದೆ.ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments