ಬೆಳಗಾವಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕಚೇರಿಯಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಬೆಳಗಾವಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕಚೇರಿಯಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ
Published by Heena Sheregar
1 hour ago Others Featured

KPSCVaani ಓದುಗರಿಗೆ ನಮಸ್ಕಾರ! ಬೆಳಗಾವಿ ಜಿಲ್ಲೆಯ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ (NTEP) ಮತ್ತು ಸಂಚಾರಿ ಆರೋಗ್ಯ ಘಟಕದ (MHU) ಅಡಿಯಲ್ಲಿ ಖಾಲಿ ಇರುವ ಲ್ಯಾಬ್ ಟೆಕ್ನಿಷಿಯನ್, ಸ್ಟಾಫ್ ನರ್ಸ್ ಹಾಗೂ ಎಕ್ಸ್-ರೇ ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಇದು ಅದ್ಭುತ ಅವಕಾಶವಾಗಿದೆ.

 

ಈ ಹುದ್ದೆಗಳಿಗೆ ಆಫ್‌ಲೈನ್ (Offline) ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅಭ್ಯರ್ಥಿಗಳು ನಿಗದಿತ ಅರ್ಹತಾ ಮಾನದಂಡಗಳು ಹಾಗೂ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ. ಆಕರ್ಷಕ ಮಾಸಿಕ ವೇತನದೊಂದಿಗೆ ಕಾರ್ಯನಿರ್ವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ನೇರವಾಗಿ ಕಚೇರಿಯಿಂದ ಪಡೆದುಕೊಂಡು, ಕೊನೆಯ ದಿನಾಂಕದ ಒಳಗಾಗಿ ಸಲ್ಲಿಸಬೇಕಾಗಿದೆ.

 

ಅರ್ಜಿ ನಮೂನೆ ಪಡೆಯುವ ಕೊನೆಯ ದಿನಾಂಕ, ಅರ್ಜಿ ಸಲ್ಲಿಸುವ ವಿಳಾಸ, ಅಗತ್ಯ ವಿದ್ಯಾರ್ಹತೆ ಮತ್ತು ಅನುಭವದ ಸಂಪೂರ್ಣ ಮಾಹಿತಿಗಾಗಿ ಹಾಗೂ ಇತರೆ ಪ್ರಮುಖ ವಿವರಗಳು ಈ ನಿಮ್ಮ KPSCVAANI.COM ಲೇಖನದಲ್ಲಿ ಲಭ್ಯವಿದೆ.

 

 

ಪ್ರಮುಖ ವಿವರಗಳು:

  • ಸಂಸ್ಥೆಯ ಹೆಸರು: ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಛೇರಿ, ಬೆಳಗಾವಿ (District Tuberculosis Control Office, Belagavi)   
  • ಹುದ್ದೆಗಳ ಹೆಸರು: ಎಕ್ಸ್-ರೇ ಟೆಕ್ನಿಷಿಯನ್, ಪ್ರಯೋಗಶಾಲಾ ತಂತ್ರಜ್ಞ (Lab Technician), ಮತ್ತು ಸ್ಟಾಫ್ ನರ್ಸ್ (Staff Nurse)   
  • ಒಟ್ಟು ಹುದ್ದೆಗಳು: 06   
  • ಉದ್ಯೋಗ ಸ್ಥಳ: ಬೆಳಗಾವಿ (ಕರ್ನಾಟಕ)   
  • ಅರ್ಜಿ ಸಲ್ಲಿಸುವ ವಿಧಾನ: ಆಫ್‌ಲೈನ್ (Offline)   

 

ಹುದ್ದೆಗಳ ವಿವರ :

  • ಎಕ್ಸ್-ರೇ ಟೆಕ್ನಿಷಿಯನ್ / ರೇಡಿಯೋಗ್ರಾಫರ್ (X-Ray Technicians / Radiographers) - 04 ಹುದ್ದೆಗಳು  
  • ಪ್ರಯೋಗಶಾಲಾ ತಂತ್ರಜ್ಞ (Lab Technician) - 01 ಹುದ್ದೆ   
  • ಸ್ಟಾಫ್ ನರ್ಸ್ (Staff Nurse) - 01 ಹುದ್ದೆ   
  • ಒಟ್ಟು ಹುದ್ದೆಗಳು: 06   

 

ಶೈಕ್ಷಣಿಕ ಅರ್ಹತೆ:

  • ಎಕ್ಸ್-ರೇ ಟೆಕ್ನಿಷಿಯನ್ / ರೇಡಿಯೋಗ್ರಾಫರ್: 10ನೇ ತರಗತಿ (SSLC) ಮತ್ತು RGUHS ನಿಂದ ಮಾನ್ಯತೆ ಪಡೆದ ಅಥವಾ ಕರ್ನಾಟಕ ಪ್ಯಾರಾಮೆಡಿಕಲ್ ಬೋರ್ಡ್‌ನಿಂದ ಅನುಮೋದಿಸಲ್ಪಟ್ಟ ಸಂಸ್ಥೆಯಿಂದ ಎಕ್ಸ್-ರೇ / ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ; ಅಥವಾ ವಿಜ್ಞಾನ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ) ವಿಷಯದೊಂದಿಗೆ 10+2 (PUC) ಮತ್ತು RGUHS ನಿಂದ ಮಾನ್ಯತೆ ಪಡೆದ ಅಥವಾ ಕರ್ನಾಟಕ ಪ್ಯಾರಾಮೆಡಿಕಲ್ ಬೋರ್ಡ್‌ನಿಂದ ಅನುಮೋದಿಸಲ್ಪಟ್ಟ ಸಂಸ್ಥೆಯಿಂದ ಎಕ್ಸ್-ರೇ / ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ.   
  • ಪ್ರಯೋಗಶಾಲಾ ತಂತ್ರಜ್ಞ (Lab Technician): ಇಂಟರ್‌ಮೀಡಿಯೇಟ್ (10+2) ಮತ್ತು ಮೆಡಿಕಲ್ ಲಬರೇಟರಿ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಅಥವಾ ಪ್ರಮಾಣಪತ್ರ ಕೋರ್ಸ್ ಅಥವಾ ತತ್ಸಮಾನ ವಿದ್ಯಾರ್ಹತೆ.   
  • ಸ್ಟಾಫ್ ನರ್ಸ್: ಜಿಎನ್ಎಂ ನರ್ಸಿಂಗ್ (GNM Nursing) / ಬಿ.ಎಸ್‌ಸಿ ನರ್ಸಿಂಗ್ (B.Sc. Nursing) ಹಾಗೂ ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಾಯಿತರಾಗಿರಬೇಕು (ಕನಿಷ್ಠ ಎರಡು ವರ್ಷಗಳ ಸೇವಾ ಅನುಭವವಿರಬೇಕು).   

 

ವಯೋಮಿತಿ (Age Limit):
ದಿನಾಂಕ 05/10/2026 ರಂತೆ ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷಗಳು ಮೀರಿರಬಾರದು.   

 

ಪ್ರಮುಖ ದಿನಾಂಕಗಳು (Important Dates):

  • ಅರ್ಜಿ ನಮೂನೆಗಳು ಲಭ್ಯವಿರುವ ದಿನಾಂಕ: 06/10/2026 ರಿಂದ 17/10/2026 ರವರೆಗೆ (ಕಚೇರಿ ವೇಳೆಯಲ್ಲಿ)   
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19/10/2026 

 

ಇದನ್ನು ಓದಿ: RRB NTPC Recruitment 2026: ರೈಲ್ವೆ ಇಲಾಖೆಯಲ್ಲಿ 3,548 ಭರ್ಜರಿ ಉದ್ಯೋಗಾವಕಾಶ; ಅಕ್ಟೋಬರ್ 8ರಿಂದ ಅರ್ಜಿ ಸಲ್ಲಿಕೆ ಆರಂಭ!

 

ಪ್ರಮುಖ ಸೂಚನೆಗಳು ಹಾಗೂ ನಿಯಮಗಳು:

  • ಸ್ಥಳೀಯ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.   
  • ಅಭ್ಯರ್ಥಿಗಳಿಗೆ ಕನ್ನಡ ಭಾಷೆಯ ಪರಿಜ್ಞಾನವಿರುವುದು ಅತ್ಯಾವಶ್ಯಕ.   
  • ಕನಿಷ್ಠ 6 ತಿಂಗಳ ಕಂಪ್ಯೂಟರ್ ಸಾಕ್ಷರತಾ ಪ್ರಮಾಣಪತ್ರ ಹೊಂದಿರಬೇಕು.   
  • ಅಗತ್ಯವಿದ್ದಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.   

 

ಅರ್ಜಿ ಸಲ್ಲಿಸುವ ವಿಳಾಸ (Postal Address):
ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು ಅಥವಾ ನೇರವಾಗಿ ಸಂಪರ್ಕಿಸಬೇಕು:

ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿಗಳು,
ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ,
ಎಂ-ವಡಗಾವಿ, ಬೆಳಗಾವಿ - 590005
   
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ಕಚೇರಿ ವೇಳೆಯಲ್ಲಿ ನೇರವಾಗಿ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ಬೆಳಗಾವಿ ಇವರನ್ನು ಸಂಪರ್ಕಿಸಬಹುದು.    

 

Job Overview
End Date
17 ಅಕ್ಟೋಬರ್ 2026
Employment Type
FULL_TIME
Organization
District Tuberculosis Control Office Belagavi (Website)
Location
M-Vadagavi, Belgaum, KA, 590005
To download official notification
Related Tags: Diploma PUC Nursing B.Sc
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.