ಬೆಂಗಳೂರಿನಲ್ಲಿ ವೈದ್ಯರಿಗೆ ಭರ್ಜರಿ ನೌಕರಿ: ತಿಂಗಳಿಗೆ ₹1.10 ಲಕ್ಷ ಸಂಬಳ! ಪರೀಕ್ಷೆ ಇಲ್ಲ, ನೇರ ಸಂದರ್ಶನ - ಇಂದೇ ಹೋಗಿ
Published by Yallamma G
13 ಫೆಬ್ರವರಿ 2026
Health and Family Welfare Services
ಈ ನೇಮಕಾತಿ ಅಡಿಯಲ್ಲಿ ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ ಒಟ್ಟು 06 ತಜ್ಞ ವೈದ್ಯರು (ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು) ಹುದ್ದೆಗಳನ್ನು ನೇಮಕ ಮಾಡಿಕೊಳಲಾಗುತ್ತಿದೆ. ಈ ಉದ್ದೇಗಳನ್ನು ಗುತ್ತಿಗೆ ಆಧಾರದ ಮೇಲೆ (Contract Basis)ಆಯ್ಕೆ ಮಾಡಿಕೊಳ್ಳಾಗುತ್ತದೆ. ಬೆಂಗಳೂರಿನಲ್ಲಿ - ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 13-ಫೆಬ್ರವರಿ-2026 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ, ಕೇವಲ ನೇರ ಸಂದರ್ಶನದ (Walk-in Interview) ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆಯಾದವರಿಗೆ ಆಕರ್ಷಕ ವೇತನ ಪ್ಯಾಕೇಜ್ ಕೂಡ ನೀಡಲಾಗುತ್ತಿದೆ. ಆಸಕ್ತರು ಈ ಕೆಳಗಿನ ಸಂಪೂರ್ಣ ಮಾಹಿತಿಯನ್ನು ಓದಿ, ನಿಗದಿತ ದಿನಾಂಕದಂದು ಸಂದರ್ಶನಕ್ಕೆ ಹಾಜರಾಗಬಹುದು.
ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ
ಮುಖ್ಯಾಂಶಗಳು (Highlights):
- ಇಲಾಖೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಬೆಂಗಳೂರು ನಗರ.
- ಹುದ್ದೆ: ತಜ್ಞ ವೈದ್ಯರು (ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು - OBG Specialist).
- ಒಟ್ಟು ಹುದ್ದೆಗಳ ಸಂಖ್ಯೆ: 06.
- ಕೆಲಸದ ಸ್ಥಳ: ವಾಣಿ ವಿಲಾಸ್ ಆಸ್ಪತ್ರೆ, ಬೆಂಗಳೂರು.
- ವೇತನ: ₹1,10,000/- (ಮಾಸಿಕ).
- ಸಂದರ್ಶನ ದಿನಾಂಕ: 13-02-2026.
ವಿದ್ಯಾರ್ಹತೆ (Education Qualification):
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
- ಎಂಡಿ (MD) ಇನ್ ಒಬಿಜಿ (OBG) ಅಥವ ಡಿಎನ್‌ಬಿ (DNB) ಇನ್ ಒಬಿಜಿ ಅಥವ ಡಿಜಿಒ (DGO) ವಿದ್ಯಾರ್ಹತೆ ಹೊಂದಿರಬೇಕು.
- ಕಡ್ಡಾಯವಾಗಿ ಕರ್ನಾಟಕ ಮೆಡಿಕಲ್ ಕೌನ್ಸಿಲ್ (KMC) ನಲ್ಲಿ ನೋಂದಣಿ (Registration) ಮಾಡಿರಬೇಕು.
ವಯೋಮಿತಿ (Age Limit):
ಅಭ್ಯರ್ಥಿಗಳಿಗೆ ಗರಿಷ್ಠ 60 ವರ್ಷದ ವಯೋಮಿತಿ ನಿಗದಿಪಡಿಸಲಾಗಿದೆ. (60 ವರ್ಷದೊಳಗಿನವರು ಅರ್ಹರು) .ವೇತನ ಶ್ರೇಣಿ (Salary):
ಆಯ್ಕೆಯಾದ ತಜ್ಞ ವೈದ್ಯರಿಗೆ ಮಾಸಿಕ ಸಂಚಿತ ವೇತನವಾಗಿ ಬರೋಬ್ಬರಿ ₹1,10,000/- (ಒಂದು ಲಕ್ಷದ ಹತ್ತು ಸಾವಿರ ರೂಪಾಯಿಗಳು) ನೀಡಲಾಗುತ್ತದೆ.
ನೇರ ಸಂದರ್ಶನದ ವಿವರ (Walk-in Interview Details):
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳು (Original Documents) ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಈ ಕೆಳಗೆ ನೀಡಿರುವ ದಿನಾಂಕ ಮತ್ತು ಸ್ಥಳಕ್ಕೆ ಹಾಜರಾಗಬೇಕು.
- ಸಂದರ್ಶನ ನಡೆಯುವ ದಿನಾಂಕ: 13-02-2026 (ಶುಕ್ರವಾರ).
- ಸಮಯ: ಬೆಳಿಗ್ಗೆ 11:00 ಗಂಟೆಗೆ.
- ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣ, ಹಳೇ ಟಿ.ಬಿ ಆಸ್ಪತ್ರೆ, ಹಳೇ ಮದ್ರಾಸ್ ರಸ್ತೆ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ, ಬೆಂಗಳೂರು - 560038.
ಪ್ರಮುಖ ಸೂಚನೆಗಳು:
- ಈ ನೇಮಕಾತಿಯು ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಮಾರ್ಗಸೂಚಿಯಂತೆ ಗುತ್ತಿಗೆ ಆಧಾರದ ಮೇಲೆ ನಡೆಯಲಿದೆ.
- ಪ್ರಸ್ತುತ ಅವಧಿಯು ದಿನಾಂಕ 31-03-2026 ರವರೆಗೆ ಇರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
- ರೋಸ್ಟರ್ ಕಮ್ ಮೆರಿಟ್ (Roster cum Merit) ಅನ್ವಯ ಆಯ್ಕೆ ನಡೆಯಲಿದೆ.
ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ನಮ್ಮ ಕೆಪಿಎಸ್‌ಸಿ ವಾಣಿ (KPSCVaani) ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ!
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ
Job Overview
- End Date
- 13 ಫೆಬ್ರುವರಿ 2026
- Employment Type
- FULL_TIME
- Organization
- KPSC Vaani (Website)
- Location
- KA,
Related Tags:
Degree
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.