ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಚೆಸ್ಕಾಂ) ನೇಮಕಾತಿ 2026: 200 ಅಪ್ರೆಂಟಿಸ್ ಹುದ್ದೆಗಳು | ಡಿಗ್ರಿ, ಡಿಪ್ಲೊಮಾ ಪಾಸಾದವರಿಗೆ ಅವಕಾಶ
ಉದ್ಯೋಗದ ನಿರೀಕ್ಷೆಯಲ್ಲಿರುವ ಕರ್ನಾಟಕದ ಯುವಕ-ಯುವತಿಯರಿಗೆ ಭರ್ಜರಿ ಸಿಹಿಸುದ್ದಿ! ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತವು (CESC Mysore) 2026-27ನೇ ಸಾಲಿನ ಅಪ್ರೆಂಟಿಸ್ ತರಬೇತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಇಂಜಿನಿಯರಿಂಗ್, ಡಿಪ್ಲೊಮಾ ಹಾಗೂ ನಾನ್-ಇಂಜಿನಿಯರಿಂಗ್ (ಬಿ.ಎ, ಬಿ.ಕಾಂ, ಬಿ.ಎಸ್ಸಿ ಇತ್ಯಾದಿ) ಪದವೀಧರರು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಈ ನೇಮಕಾತಿ ಅಡಿಯಲ್ಲಿ ಒಟ್ಟು 200 ಇಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್, ಡಿಪ್ಲೊಮಾ ಅಪ್ರೆಂಟಿಸ್ ಮತ್ತು ಪದವೀಧರ ಅಪ್ರೆಂಟಿಸ್ ಹುದ್ದೆಗಳನ್ನು ನೇಮಕ ಮಾಡಿಕೊಳಲಾಗುತ್ತಿದೆ. ಮೈಸೂರು - ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 29-ಮೇ-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿಯ ಕುರಿತಾದ ಅಧಿಕೃತ ಅಧಿಸೂಚನೆ, ಸಂಪೂರ್ಣ ಮಾಹಿತಿ, ಅರ್ಹತೆಗಳು, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಪ್ರಮುಖ ದಿನಾಂಕಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.
ನೇಮಕಾತಿಯ ಸಂಕ್ಷಿಪ್ತ ವಿವರ (Overview)
- ಸಂಸ್ಥೆಯ ಹೆಸರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು (CESC)
- ಹುದ್ದೆಯ ಹೆಸರು: ಅಪ್ರೆಂಟಿಸ್ (Apprenticeship Training)
- ಒಟ್ಟು ಹುದ್ದೆಗಳು: 200
- ಉದ್ಯೋಗ ಸ್ಥಳ: ಮೈಸೂರು, ಕರ್ನಾಟಕ
- ತರಬೇತಿಯ ಅವಧಿ: 1 ವರ್ಷ
- ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ (NATS Portal)
ಹುದ್ದೆಗಳ ವರ್ಗೀಕರಣ :
CESC ಒಟ್ಟು ಮೂರು ವಿಭಾಗಗಳಲ್ಲಿ 200 ಅಭ್ಯರ್ಥಿಗಳನ್ನು ಅಪ್ರೆಂಟಿಸ್ ತರಬೇತಿಗೆ ಆಯ್ಕೆ ಮಾಡಲಿದೆ:
1. ಇಂಜಿನಿಯರಿಂಗ್ ಪದವೀಧರರು (Engineering Graduate Apprentices): 80
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ - 78
ಸಿವಿಲ್ - 02
2. ಡಿಪ್ಲೊಮಾ (Technician Apprentices): ಒಟ್ಟು ಹುದ್ದೆಗಳು 55
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ - 53
ಸಿವಿಲ್ - 02
3. ನಾನ್-ಇಂಜಿನಿಯರಿಂಗ್ ಪದವೀಧರರು (Non-Engineering Apprentices): ಒಟ್ಟು ಹುದ್ದೆಗಳು: 65
B.Com - 30
B.B.A - 10
B.C.A - 10
B.A - 07
B.Sc - 08
ಶೈಕ್ಷಣಿಕ ಅರ್ಹತೆಗಳು (Educational Qualification)
- ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ವಿಷಯಗಳಲ್ಲಿ (EEE/Civil) B.E ಅಥವಾ B.Tech ಮುಗಿಸಿರಬೇಕು.
- ಡಿಪ್ಲೊಮಾ ಅಭ್ಯರ್ಥಿಗಳಿಗೆ: ಸರ್ಕಾರದಿಂದ ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಕಾಲೇಜಿನಿಂದ 3 ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
- ನಾನ್-ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.A, B.Sc, B.Com, BBA ಅಥವಾ BCA ಪದವಿ ಪಡೆದಿರಬೇಕು.
- ಗಮನಿಸಿ (Important Note): ಅಭ್ಯರ್ಥಿಗಳು 2022, 2023, 2024, 2025 ಮತ್ತು 2026 ರಲ್ಲಿ ವ್ಯಾಸಂಗ ಮುಗಿಸಿರುವವರಾಗಿರಬೇಕು.
ಅರ್ಹತೆಗಳು :
- ಈ ಹಿಂದೆ ಅಪ್ರೆಂಟಿಸ್ ತರಬೇತಿ ಪಡೆದವರು ಅಥವಾ 1 ವರ್ಷದ ಕೆಲಸದ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
- ಕನಿಷ್ಠ ವಯೋಮಿತಿ 18 ವರ್ಷಗಳಾಗಿರಬೇಕು.
- ಅಭ್ಯರ್ಥಿಗೆ ಕನ್ನಡ ಓದಲು ಮತ್ತು ಬರೆಯಲು ಕಡ್ಡಾಯವಾಗಿ ತಿಳಿದಿರಬೇಕು.
1. ಇಂಜಿನಿಯರಿಂಗ್ ಪದವೀಧರರು (Engineering Graduate Apprentices): ₹12,300/-
2. ಡಿಪ್ಲೊಮಾ (Technician Apprentices): ₹10,900/-
3. ನಾನ್-ಇಂಜಿನಿಯರಿಂಗ್ ಪದವೀಧರರು (Non-Engineering Apprentices): ₹12,300/-
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process)
ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅಭ್ಯರ್ಥಿಗಳು ತಮ್ಮ ಡಿಗ್ರಿ ಅಥವಾ ಡಿಪ್ಲೊಮಾದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ. ದಕ್ಷಿಣ ವಲಯದ ಬೋರ್ಡ್ ಆಫ್ ಅಪ್ರೆಂಟಿಸ್‌ಶಿಪ್ ಟ್ರೈನಿಂಗ್ (BOAT-SR) ಸಂಸ್ಥೆಯು ಆನ್‌ಲೈನ್ ಅರ್ಜಿಗಳ ಡೇಟಾದಿಂದ ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಲಾಗುವುದು ಹಾಗೂ ಅವರು ಮೈಸೂರಿನ CESC ಕೇಂದ್ರ ಕಚೇರಿಯಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕಾಗುತ್ತದೆ.
ದೈನಂದಿನ ಪ್ರಚಲಿತ ವಿಷಯಗಳ ಕ್ವಿಜ್ ಅಭ್ಯಾಸಕ್ಕೆ ಇಲ್ಲಿ ಟ್ಯಾಪ್ ಮಾಡಿ
ಅರ್ಜಿ ಸಲ್ಲಿಸುವುದು ಹೇಗೆ? (How to Apply Guide)
- ಹೊಸ ವಿದ್ಯಾರ್ಥಿಗಳಿಗೆ: ಮೊದಲಿಗೆ ಹೊಸ NATS ವೆಬ್‌ಪೋರ್ಟಲ್‌ಗೆ (https://nats.education.gov.in/) ಭೇಟಿ ನೀಡಿ 'Student' ವಿಭಾಗದಲ್ಲಿ ನೋಂದಣಿ (Register) ಮಾಡಿಕೊಳ್ಳಬೇಕು.
- ನೋಂದಣಿ ಪೂರ್ಣಗೊಂಡ ನಂತರ ನಿಮಗೆ 12 ಅಂಕಿಯ (12 digit) ಎನ್‌ರೋಲ್‌ಮೆಂಟ್ ನಂಬರ್ ಸಿಗುತ್ತದೆ.
- ಆ ನಂಬರ್ ಬಳಸಿ ಲಾಗಿನ್ ಆಗಿ.
- "Apply against advertised vacancies" ವಿಭಾಗದಲ್ಲಿ "Chamundeshwari Electricity Supply Corporation Limited" ಎಂದು ಹುಡುಕಿ.
- 'Apply' ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಬಹುದು.
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 08.05.2026
- NATS ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29.05.2026
- ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ: 05.06.2026
- ದಾಖಲೆಗಳ ಪರಿಶೀಲನೆ ದಿನಾಂಕ: 15.06.2026 ರಿಂದ 19.06.2026 ರವರೆಗೆ (ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ)
ಇಮೇಲ್: knplacement@boat-srp.com , dgmtraining@cescmysore.org
ದೂರವಾಣಿ: 044-22542235 , 8277892518
ಇದೇ ರೀತಿಯ ನಿಖರ ಹಾಗೂ ವಿಶ್ವಾಸಾರ್ಹ ಉದ್ಯೋಗ ಮಾಹಿತಿಗಾಗಿ KPSCVaani ವೆಬ್‌ಸೈಟ್‌ಗೆ ಪ್ರತಿದಿನ ಭೇಟಿ ನೀಡಿ.
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.
Job Overview
- Start Date
- 8 ಮೇ 2026
- End Date
- 29 ಮೇ 2026
- Pay Scale
- 10900 - 12300 INR
- Employment Type
- FULL_TIME
- Organization
- CESC Mysore (Website)
- Location
- ಮೈಸೂರು, KA, 570001
Related Tags:
Engineering
Comments