ಕೇಂದ್ರ ಸರ್ಕಾರಿ ಕೆಲಸ ಹುಡುಕುತ್ತಿದ್ದೀರಾ? C-DAC ಸಂಸ್ಥೆಯಲ್ಲಿ 900ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ, ಬೆಂಗಳೂರಿನಲ್ಲೇ ಅಧಿಕ ಕೆಲಸ!

ಕೇಂದ್ರ ಸರ್ಕಾರಿ ಕೆಲಸ ಹುಡುಕುತ್ತಿದ್ದೀರಾ? C-DAC ಸಂಸ್ಥೆಯಲ್ಲಿ 900ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ, ಬೆಂಗಳೂರಿನಲ್ಲೇ ಅಧಿಕ ಕೆಲಸ!
Published by Heena Sheregar
38 minutes ago Others
Tags: Degree B.Tech B.E

ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಕನಸು ನಿಮ್ಮದಿದ್ದರೆ ನಿಮಗೊಂದು ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಭಾರತ ಸರ್ಕಾರದ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಪ್ರಮುಖ ಸಂಶೋಧನಾ ಸಂಸ್ಥೆಯಾದ ಸಿ-ಡ್ಯಾಕ್ (C-DAC) ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.

 

ಒಟ್ಟು 900ಕ್ಕೂ ಹೆಚ್ಚು ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ವಿಶೇಷ ಎಂದರೆ ಬೆಂಗಳೂರು ಸೇರಿದಂತೆ ದೇಶಾದ್ಯಂತ ಇರುವ 11 ಪ್ರಮುಖ ಕೇಂದ್ರಗಳಲ್ಲಿ ಈ ಖಾಲಿ ಹುದ್ದೆಗಳು ಲಭ್ಯವಿವೆ.

 

ಪ್ರಾಜೆಕ್ಟ್ ಇಂಜಿನಿಯರ್, ಪ್ರಾಜೆಕ್ಟ್ ಮ್ಯಾನೇಜರ್, ಪ್ರಾಜೆಕ್ಟ್ ಅಸೋಸಿಯೇಟ್, ಹೆಚ್.ಆರ್ ಮತ್ತು ಅಡ್ಮಿನ್ ಸೇರಿದಂತೆ ಹಲವು ವಿಭಾಗಗಳಲ್ಲಿ ಉದ್ಯೋಗಾವಕಾಶಗಳಿವೆ. ಬಿ.ಇ, ಬಿ.ಟೆಕ್, ಎಂ.ಸಿ.ಎ, ಎಂ.ಎಸ್ಸಿ ಅಥವಾ ಇತರೆ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ವೇತನದೊಂದಿಗೆ ಕೆಲಸ ಪಡೆಯುವ ಸುವರ್ಣ ಅವಕಾಶವಾಗಿದೆ.

 

 

C-DAC ನೇಮಕಾತಿ 2026 - ಪ್ರಮುಖ ವಿವರಗಳು:

  • ಸಂಸ್ಥೆಯ ಹೆಸರು: ಸಿ-ಡ್ಯಾಕ್ (Centre for Development of Advanced Computing)
  • ಸಚಿವಾಲಯ: ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ
  • ಅಧಿಸೂಚನೆ ಸಂಖ್ಯೆ: CORP/JIT/03/2026
  • ಒಟ್ಟು ಖಾಲಿ ಹುದ್ದೆಗಳು: 844 ರಿಂದ 951+ (ವಿವಿಧ ಕೇಂದ್ರಗಳಲ್ಲಿ)
  • ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ (Online)
  • ಅರ್ಜಿ ಶುಲ್ಕ: ಸಂಪೂರ್ಣ ಉಚಿತ (ಯಾವುದೇ ಶುಲ್ಕವಿಲ್ಲ)
  • ಅಧಿಕೃತ ವೆಬ್‌‌ಸೈಟ್: careers.cdac.in 

 

ಕೇಂದ್ರವಾರು ಖಾಲಿ ಹುದ್ದೆಗಳ ಹಂಚಿಕೆ: ದೇಶದ 11 ಪ್ರಮುಖ ನಗರಗಳಲ್ಲಿ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದ್ದು, ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ಸಂತಸದ ವಿಷಯವೆಂದರೆ ಬೆಂಗಳೂರು ಕೇಂದ್ರದಲ್ಲೇ ಅತ್ಯಂತ ಹೆಚ್ಚು ಖಾಲಿ ಹುದ್ದೆಗಳಿವೆ.
• ಬೆಂಗಳೂರು: 272 ಹುದ್ದೆಗಳು
• ನೋಯ್ಡಾ: 211 ಹುದ್ದೆಗಳು
• ಪುಣೆ: 162 ಹುದ್ದೆಗಳು
• ಹೈದರಾಬಾದ್: 76 ಹುದ್ದೆಗಳು
• ಚೆನ್ನೈ: 67 ಹುದ್ದೆಗಳು
• ಗುವಾಹಾಟಿ: 46 ಹುದ್ದೆಗಳು
• ಮುಂಬೈ: 45 ಹುದ್ದೆಗಳು
• ಕೋಲ್ಕತ್ತಾ: 28 ಹುದ್ದೆಗಳು
• ತಿರುವನಂತಪುರಂ: 25 ಹುದ್ದೆಗಳು
• ಮೊಹಾಲಿ: 16 ಹುದ್ದೆಗಳು
• ದೆಹಲಿ: 03 ಹುದ್ದೆಗಳು
ಒಟ್ಟು  ಹುದ್ದೆಗಳು: 951 ಹುದ್ದೆಗಳು

 

ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ವೇತನ ಶ್ರೇಣಿ: ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆ ಹಾಗೂ ಅನುಭವವನ್ನು ನಿಗದಿಪಡಿಸಲಾಗಿದೆ. ಫ್ರೆಶರ್ಸ್ ಹಾಗೂ ಅನುಭವಿ ಇಬ್ಬರಿಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

1. Project Associate
• ಶೈಕ್ಷಣಿಕ ಅರ್ಹತೆ: B.E/B.Tech, M.E/M.Tech, M.Sc, MCA (ಫ್ರೆಶರ್ಸ್‌ಗೆ ಅರ್ಜಿ ಸಲ್ಲಿಸಲು ಅವಕಾಶವಿದೆ)
• ಗರಿಷ್ಠ ವಯೋಮಿತಿ: 30 ವರ್ಷಗಳು
• ವಾರ್ಷಿಕ ವೇತನ: ₹3.60 ಲಕ್ಷದಿಂದ ₹5.04 ಲಕ್ಷ CTC

2. Project Engineer
• ಶೈಕ್ಷಣಿಕ ಅರ್ಹತೆ: B.E/B.Tech, M.E/M.Tech, MCA (0 ಯಿಂದ 4 ವರ್ಷಗಳ ಅನುಭವ)
• ಗರಿಷ್ಠ ವಯೋಮಿತಿ: 30 ರಿಂದ 45 ವರ್ಷಗಳು
• ವಾರ್ಷಿಕ ವೇತನ: ₹4.49 ಲಕ್ಷದಿಂದ ₹7.11 ಲಕ್ಷ CTC

3. Senior Project Engineer / Module Lead
• ಶೈಕ್ಷಣಿಕ ಅರ್ಹತೆ: B.E/B.Tech, M.Tech, Ph.D (ಕನಿಷ್ಠ 4 ವರ್ಷಗಳ ಅನುಭವ)
• ಗರಿಷ್ಠ ವಯೋಮಿತಿ: 40 ವರ್ಷಗಳು
• ವಾರ್ಷಿಕ ವೇತನ: ₹8.49 ಲಕ್ಷದಿಂದ ₹14.00 ಲಕ್ಷ CTC

4. Project Manager / Program Manager
• ಶೈಕ್ಷಣಿಕ ಅರ್ಹತೆ: ಸಂಬಂಧಿತ ಪದವಿ ಅಥವಾ ಸ್ನಾತಕೋತ್ತರ ಪದವಿ (9 ರಿಂದ 15 ವರ್ಷಗಳ ಅನುಭವ)
• ಗರಿಷ್ಠ ವಯೋಮಿತಿ: 50 ರಿಂದ 56 ವರ್ಷಗಳು
• ವಾರ್ಷಿಕ ವೇತನ: ₹12.63 ಲಕ್ಷದಿಂದ ₹22.90 ಲಕ್ಷ CTC

5. Project Officer (HR / Finance / Purchase)
• ಶೈಕ್ಷಣಿಕ ಅರ್ಹತೆ: MBA, CA, ICWA, LLB (3+ ವರ್ಷ ಅನುಭವ)
• ಗರಿಷ್ಠ ವಯೋಮಿತಿ: 50 ವರ್ಷಗಳು
• ವಾರ್ಷಿಕ ವೇತನ: ಹುದ್ದೆಗೆ ಅನುಗುಣವಾಗಿ ನಿಗದಿಯಾಗುತ್ತದೆ

6. Project Support Staff
• ಶೈಕ್ಷಣಿಕ ಅರ್ಹತೆ: ಕನಿಷ್ಠ 50% ಅಂಕಗಳೊಂದಿಗೆ ಪದವಿ + 3 ವರ್ಷಗಳ ಅನುಭವ
• ಗರಿಷ್ಠ ವಯೋಮಿತಿ: 35 ವರ್ಷಗಳು
• ವಾರ್ಷಿಕ ವೇತನ: ನಿಯಮಾನುಸಾರ ನೀಡಲಾಗುತ್ತದೆ

 

 

ವಯೋಸಹಜ ಸಡಿಲಿಕೆ ವಿವರ:
ಸರ್ಕಾರಿ ನಿಯಮಗಳ ಪ್ರಕಾರ SC/ST ಅಭ್ಯರ್ಥಿಗಳಿಗೆ 5 ವರ್ಷ, OBC (NCL) ಅಭ್ಯರ್ಥಿಗಳಿಗೆ 3 ವರ್ಷ ಹಾಗೂ PwBD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಸಹಜ ಸಡಿಲಿಕೆ ಇರುತ್ತದೆ.

 

ಆಯ್ಕೆ ಪ್ರಕ್ರಿಯೆ :
• ಪ್ರಥಮ ಹಂತದ ಸ್ಕ್ರೀನಿಂಗ್: ಅಭ್ಯರ್ಥಿಗಳು ಅರ್ಜಿಯಲ್ಲಿ ನೀಡಿದ ಶೈಕ್ಷಣಿಕ ಅಂಕಗಳು ಮತ್ತು ಅನುಭವದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
• ಲಿಖಿತ ಅಥವಾ ಕೌಶಲ್ಯ ಪರೀಕ್ಷೆ: ನಿರ್ದಿಷ್ಟ ಹುದ್ದೆಗಳಿಗೆ ಮಾತ್ರ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ತಾಂತ್ರಿಕ ಅಥವಾ ಲಿಖಿತ ಪರೀಕ್ಷೆ ಇರುತ್ತದೆ.
• ವೈಯಕ್ತಿಕ ಸಂದರ್ಶನ: ತಾಂತ್ರಿಕ ಸಾಮರ್ಥ್ಯ ಪರಿಶೀಲಿಸಲು ಮುಖಾಮುಖಿ ಅಥವಾ ಆನ್‌ಲೈನ್ ಸಂದರ್ಶನ ನಡೆಸಲಾಗುತ್ತದೆ.
• ದಾಖಲೆಗಳ ಪರಿಶೀಲನೆ: ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

 

ಇದನ್ನು ಓದಿ: DRDO RCI Recruitment 2026: ಡಿಆರ್‌ಡಿಒ ಸಂಸ್ಥೆಯಲ್ಲಿ 195 ಅಪ್ರೆಂಟಿಸ್ ಹುದ್ದೆಗಳ ಭರ್ತಿ | ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮಾ ಮತ್ತು ಬಿ.ಇ ಅಭ್ಯರ್ಥಿಗಳಿಗೆ ಅವಕಾಶ!

 

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸರಳ ಹಂತಗಳು:

  • ಹಂತ 1: ಸಿ-ಡ್ಯಾಕ್‌ನ ಅಧಿಕೃತ ವೆಬ್‌ಸೈಟ್ careers.cdac.in ಗೆ ಭೇಟಿ ನೀಡಿ. ಅಲ್ಲಿ 'JIT October 2026 Cycle' ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ.
  • ಹಂತ 2: ನೀವು ಅರ್ಜಿ ಸಲ್ಲಿಸಲು ಬಯಸುವ ಕೇಂದ್ರ (ಉದಾಹರಣೆಗೆ Bengaluru Centre) ಮತ್ತು ಸೂಕ್ತ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಹಂತ 3: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಬರುವ OTP ನಮೂದಿಸುವ ಮೂಲಕ ನೋಂದಣಿ ಪೂರ್ಣಗೊಳಿಸಿ.
  • ಹಂತ 4: ನಿಮ್ಮ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ನಮೂದಿಸಿ. JPG ಮಾದರಿಯ ಫೋಟೋ (ಗರಿಷ್ಠ 400 KB) ಮತ್ತು PDF ಮಾದರಿಯ ರೆಸ್ಯೂಮ್ (ಗರಿಷ್ಠ 500 KB) ಅಪ್‌ಲೋಡ್ ಮಾಡಿ.
  • ಹಂತ 5: ನಮೂದಿಸಿದ ವಿವರಗಳನ್ನು ಒಮ್ಮೆ ಪರಿಶೀಲಿಸಿ 'Submit' ಕ್ಲಿಕ್ ಮಾಡಿ. ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಭರ್ತಿ ಮಾಡಿದ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.

 

ಪ್ರಮುಖ ದಿನಾಂಕಗಳು
• ಅಧಿಸೂಚನೆ ಬಿಡುಗಡೆಯಾದ ದಿನಾಂಕ: 05 ಅಕ್ಟೋಬರ್ 2026
• ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 05 ಅಕ್ಟೋಬರ್ 2026
• ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಅಕ್ಟೋಬರ್ 2026 (ರಾತ್ರಿ 11:59 ರವರೆಗೆ)
• ಪರೀಕ್ಷೆ ಅಥವಾ ಸಂದರ್ಶನದ ದಿನಾಂಕ: ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ತಿಳಿಸಲಾಗುವುದು.

 

ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ  

Job Overview
No. of posts
951
Start Date
5 ಅಕ್ಟೋಬರ್ 2026
End Date
26 ಅಕ್ಟೋಬರ್ 2026
Employment Type
FULL_TIME
Organization
CDAC (Website)
Location
Byappanahalli, Bengaluru, KA, 560038
Related Tags: Degree B.Tech B.E
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.