DRDO RCI Recruitment 2026: ಡಿಆರ್‌ಡಿಒ ಸಂಸ್ಥೆಯಲ್ಲಿ 195 ಅಪ್ರೆಂಟಿಸ್ ಹುದ್ದೆಗಳ ಭರ್ತಿ | ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮಾ ಮತ್ತು ಬಿ.ಇ ಅಭ್ಯರ್ಥಿಗಳಿಗೆ ಅವಕಾಶ!

DRDO RCI Recruitment 2026: ಡಿಆರ್‌ಡಿಒ ಸಂಸ್ಥೆಯಲ್ಲಿ 195 ಅಪ್ರೆಂಟಿಸ್ ಹುದ್ದೆಗಳ ಭರ್ತಿ | ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮಾ ಮತ್ತು ಬಿ.ಇ ಅಭ್ಯರ್ಥಿಗಳಿಗೆ ಅವಕಾಶ!
Published by Heena Sheregar
33 minutes ago Others

ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪ್ರಮುಖ ಅಂಗಸಂಸ್ಥೆಯಾದ ಹೈದರಾಬಾದ್‌ನ ರಿಸರ್ಚ್ ಸೆಂಟರ್ ಇಮಾರತ್ 2027ರ ಸಾಲಿಗೆ ಒಟ್ಟು 195 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಜೀವನ ಪ್ರಾರಂಭಿಸಲು ಬಯಸುವ ತಾಂತ್ರಿಕ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ.

 

ಈ ಬಾರಿಯ ನೇಮಕಾತಿಯಲ್ಲಿ ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮಾ ಹಾಗೂ ಇಂಜಿನಿಯರಿಂಗ್ ಪದವಿ ಮುಗಿಸಿದ ಯುವಕ-ಯುವತಿಯರಿಗೆ ಅವಕಾಶ ನೀಡಲಾಗಿದೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ಕೇವಲ ಶೈಕ್ಷಣಿಕ ಅಂಕಗಳ ಶ್ರೇಷ್ಠತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

 

ಆಸಕ್ತ ಅಭ್ಯರ್ಥಿಗಳು ಪ್ರಕಟಣೆ ಜಾರಿಯಾದ 30 ದಿನಗಳ ಕಾಲಮಿತಿಯೊಳಗೆ ಆನ್‌ಲೈನ್ ಪೋರ್ಟಲ್ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಗೆ ಸಂಬಂಧಿಸಿದ ವಯೋಮಿತಿ, ಅರ್ಹತೆ, ಸ್ಟೈಪೆಂಡ್ ಹಾಗೂ ಅರ್ಜಿ ಸಲ್ಲಿಕೆ ವಿಧಾನದ ಸಂಪೂರ್ಣ ವಿವರ ಇಲ್ಲಿದೆ.

 

 

DRDO RCI ನೇಮಕಾತಿ 2026 - ಪ್ರಮುಖ ವಿವರಗಳು:

  • ನೇಮಕಾತಿ ಸಂಸ್ಥೆ: ರಿಸರ್ಚ್ ಸೆಂಟರ್ ಇಮಾರತ್ (RCI) - DRDO, ರಕ್ಷಣಾ ಸಚಿವಾಲಯ, ಭಾರತ ಸರ್ಕಾರ
  • ಉದ್ಯೋಗ ಸ್ಥಳ: ಹೈದರಾಬಾದ್, ತೆಲಂಗಾಣ
  • ಹುದ್ದೆಯ ಹೆಸರು: ಗ್ರಾಜುಯೇಟ್, ಟೆಕ್ನಿಷಿಯನ್ (ಡಿಪ್ಲೊಮಾ) ಮತ್ತು ಟ್ರೇಡ್ (ಐಟಿಐ) ಅಪ್ರೆಂಟಿಸ್
  • ಒಟ್ಟು ಖಾಲಿ ಹುದ್ದೆಗಳು: 195
  • ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ (Online Portal)
  • ಉದ್ಯೋಗ ವರ್ಗ: ಕೇಂದ್ರ ಸರ್ಕಾರಿ ಉದ್ಯೋಗ ತರಬೇತಿ
  • ಅಧಿಕೃತ ವೆಬ್‌ಸೈಟ್: drdo.gov.in 

 

ಹುದ್ದೆಗಳ ವಿವರ :

  • ಗ್ರಾಜುಯೇಟ್ ಅಪ್ರೆಂಟಿಸ್ (Graduate Apprentice) - 50 ಹುದ್ದೆಗಳು
  • ಟೆಕ್ನಿಷಿಯನ್ ಅಪ್ರೆಂಟಿಸ್ (Technician Diploma Apprentice) - 30 ಹುದ್ದೆಗಳು
  • ಟ್ರೇಡ್ ಅಪ್ರೆಂಟಿಸ್ (ITI Trade Apprentice) - 115 ಹುದ್ದೆಗಳು
  • ಒಟ್ಟು ಹುದ್ದೆಗಳು: 195  ಹುದ್ದೆಗಳು

 

ಶೈಕ್ಷಣಿಕ ಅರ್ಹತೆ:

  • ಗ್ರಾಜುಯೇಟ್ ಅಪ್ರೆಂಟಿಸ್ (Graduate Apprentice): ECE, EEE, CSE, ಮೆಕಾನಿಕಲ್, ಕೆಮಿಕಲ್, ಸಿವಿಲ್, ಏರೋನಾಟಿಕಲ್ ಮುಂತಾದ ವಿಭಾಗಗಳಲ್ಲಿ B.E. / B.Tech ಮುಗಿಸಿರಬೇಕು.  
  • ಟೆಕ್ನಿಷಿಯನ್ ಅಪ್ರೆಂಟಿಸ್ (Diploma Apprentice): ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗದಲ್ಲಿ ತ್ರಿವರ್ಷ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.  
  • ಟ್ರೇಡ್ ಅಪ್ರೆಂಟಿಸ್ (ITI Trade Apprentice): Fitter, Welder, Turner, Electrician, Electronic-Mechanic, COPA, Diesel Mechanic ಮುಂತಾದ ಟ್ರೇಡ್‌ಗಳಲ್ಲಿ ಐಟಿಐ (NCVT / SCVT) ತೇರ್ಗಡೆಯಾಗಿರಬೇಕು.

 

ವಯೋಮಿತಿ ಮತ್ತು ಸ್ಟೈಪೆಂಡ್ (Age Limit & Stipend):

  • ವಯೋಮಿತಿ: 01 ಸೆಪ್ಟೆಂಬರ್ 2026 ಕ್ಕೆ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು.  
  • ಸ್ಟೈಪೆಂಡ್: ಕೇಂದ್ರ ಸರ್ಕಾರದ ನಿಯಮಾವಳಿಗಳು ಮತ್ತು ಗೆಜೆಟ್ ಅಧಿಸೂಚನೆಯಂತೆ ಮಾಸಿಕ ವೇತನ/ಸ್ಟೈಪೆಂಡ್ ನೀಡಲಾಗುವುದು.   

 

 

ಆಯ್ಕೆ ಪ್ರಕ್ರಿಯೆ (Selection Process): ಅಭ್ಯರ್ಥಿಗಳಿಗೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇರುವುದಿಲ್ಲ. ಆಯ್ಕೆಯನ್ನು ಕೆಳಗಿನ ಹಂತಗಳ ಆಧಾರದ ಮೇಲೆ ಮಾಡಲಾಗುತ್ತದೆ:

  • ಶೈಕ್ಷಣಿಕ ಅಂಕಗಳ ಶ್ರೇಷ್ಠತೆ (Academic Merit): ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.  
  • ಸಂದರ್ಶನ / ದಾಖಲೆ ಪರಿಶೀಲನೆ (Interview / Document Verification): ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಇ-ಮೇಲ್ (E-mail) ಮೂಲಕ ಮಾಹಿತಿ ನೀಡಲಾಗುತ್ತದೆ ಮತ್ತು ಹೈದರಾಬಾದ್‌ನ ಆರ್‌ಸಿಐ ಕೇಂದ್ರದಲ್ಲಿ ಒರಿಜಿನಲ್ ದಾಖಲೆಗಳ ಪರಿಶೀಲನೆ ನಡೆಯಲಿದೆ.   

 

ಪರಿಶೀಲನೆಗೆ ಅಗತ್ಯವಿರುವ ಪ್ರಮುಖ ದಾಖಲೆಗಳು: ದಾಖಲಾತಿ ಪರಿಶೀಲನೆಗೆ ಹಾಜರಾಗುವಾಗ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳ ಮೂಲ ಪ್ರತಿ ಮತ್ತು ಸ್ವಯಂ ದೃಢೀಕರಿಸಿದ (Self-attested) ಪ್ರತಿಗಳನ್ನು ತರಬೇಕು:   

  • ಪೂರ್ಣಗೊಳಿಸಿದ ಅರ್ಜಿ ನಮೂನೆ ಮತ್ತು NATS/NAPS ಪ್ರೊಫೈಲ್ ಪ್ರಿಂಟ್‌ಔಟ್.  
  • 10ನೇ ತರಗತಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ (10th Marks Card).  
  • ಡಿಗ್ರಿ/ಡಿಪ್ಲೊಮಾ/ಐಟಿಐ ಕನ್ಸಲಿಡೇಟೆಡ್ ಮಾಸ್ಕ್‌ ಕಾರ್ಡ್ ಮತ್ತು ಪಾಸಿಂಗ್ ಸರ್ಟಿಫಿಕೇಟ್.  
  • ಜಾತಿ ಮತ್ತು ಆದಾಯ ಪ್ರಮಾಣಪತ್ರ (SC/ST/OBC/EWS - ಅನ್ವಯಿಸಿದಲ್ಲಿ).  
  • ವಿಕಲಚೇತನರ ಪ್ರಮಾಣಪತ್ರ (PWD - ಅನ್ವಯಿಸಿದಲ್ಲಿ).  
  • ಸರ್ಕಾರಿ ಗುರ್ತಿನ ಚೀಟಿ (PAN Card / Voter ID / Driving License).  
  • ಆಧಾರ್ ಕಾರ್ಡ್ ಮತ್ತು ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಪಾಸ್‌‌ಬುಕ್/ಸ್ಟೇಟ್‌ಮೆಂಟ್.  
  • ಸರ್ಕಾರಿ ವೈದ್ಯರಿಂದ ಪಡೆದ ಮೆಡಿಕಲ್ ಫಿಟ್‌ನೆಸ್ ಸರ್ಟಿಫಿಕೇಟ್ (Medical Fitness Certificate).  
  • ಪೊಲೀಸ್ ವೆರಿಫಿಕೇಶನ್ ಸರ್ಟಿಫಿಕೇಟ್ (Police Verification Certificate).  
  • 2 ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.   

 

ಇದನ್ನು ಓದಿ: Supreme Court Recruitment 2026: ತಿಂಗಳಿಗೆ ₹35,400 ಆರಂಭಿಕ ವೇತನ, ಯಾವುದೇ ಪದವಿ ಪಾಸಾದವರು ಕೂಡಲೇ ಅರ್ಜಿ ಸಲ್ಲಿಸಿ.

 

ಆನ್‌ಲೈನ್ ಅರ್ಜಿ ಸಲ್ಲಿಸುವ ಹಂತಗಳು (Step-by-Step Application Guide):

B.E / B.Tech ಮತ್ತು Diploma ಅಭ್ಯರ್ಥಿಗಳಿಗೆ:

  • ಅಧಿಕೃತ NATS 2.0 Portal ಗೆ ಭೇಟಿ ನೀಡಿ ಲಾಗಿನ್ ಆಗಿ.  
  • ನೋಂದಣಿ ಪ್ರಕ್ರಿಯೆ ಮುಗಿಸಿದ ನಂತರ, Establishment Search ವಿಭಾಗಕ್ಕೆ ಹೋಗಿ.  
  • Research Centre Imarat, DRDO (Enrolment ID: STLRAC000010) ಎಂದು ಹುಡುಕಿ.  
  • ಸಂಬಂಧಪಟ್ಟ ವಿಭಾಗವನ್ನು ಆಯ್ಕೆ ಮಾಡಿ 'Apply' ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.   

ITI Trade ಅಭ್ಯರ್ಥಿಗಳಿಗೆ:

  • Apprenticeship Portal ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಿ.  
  • 'Apprenticeship Opportunities' ವಿಭಾಗದಲ್ಲಿ RESEARCH CENTRE IMARAT (Establishment ID: E05203600040) ಎಂದು ಟೈಪ್ ಮಾಡಿ ಹುಡುಕಿ.  
  • ನಿಮ್ಮ ITI ಟ್ರೇಡ್ ಆಯ್ಕೆ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.   
Job Overview
No. of posts
195
End Date
1 ನವೆಂಬರ್ 2026
Employment Type
FULL_TIME
Organization
DRDO RCI Apprentice Recruitment 2026 (Website)
Location
Hyderabad, Telangana, TG, 500069
To download official notification
Related Tags: ITI Diploma BE B.Tech
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.