Life is like this loading!

We've to prepare well to perform better

ರೈಲ್ವೆ ನೇಮಕಾತಿ ಮಂಡಳಿ ಪ್ಯಾರಾಮೆಡಿಕಲ್ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಕೀ ಉತ್ತರಗಳು ಪ್ರಕಟ
Author: Basavaraj Halli | Date:5 ಆಗಸ್ಟ್ 2019
Image not found

ರೈಲ್ವೆ ನೇಮಕಾತಿ ಮಂಡಳಿ(RRB)ಗಳು ದಿನಾಂಕ 19-07-2019 ರಿಂದ 21-07-2019 ರವರೆಗೆ ನಡೆಸಿದಂತಹ ಪ್ಯಾರಾ ಮೆಡಿಕಲ್ ಹುದ್ದೆಗಳ ನೇಮಕಾತಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಿತ್ತು. ಈ ಹುದ್ದೆಗಳಿಗೆ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ RRB ಯು ತಮ್ಮ ತಮ್ಮ ಪ್ರಶ್ನೆಪತ್ರಿಕೆಯನ್ನು ನೋಡಲು ಹಾಗೂ ಕೀ ಉತ್ತರಗಳನ್ನು ಪರೀಕ್ಷಿಸಲು ಅವಕಾಶ ಒದಗಿಸಿದ್ದು, ದಿನಾಂಕ 05-08-2019 ರಿಂದ 08-08-2019 ರವರೆಗೆ ಅರ್ಜಿಗಳ ಜಾಲತಾಣದಲ್ಲಿ ಪ್ರಶ್ನೆ ಪತ್ರಿಕೆ ಹಾಗೂ ಕೀ ಉತ್ತರಗಳು ಲಭ್ಯವಿರಲಿವೆ.

RRB ಗಳು ನೀಡಿದಂತಹ ಕೀ ಉತ್ತರಗಳಲ್ಲಿ ಏನಾದರೂ ತಪ್ಪು ಕಂಡು ಬಂದಲ್ಲಿ ಅಭ್ಯರ್ಥಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು ಪ್ರತಿ ಪ್ರಶ್ನೆಗೆ ರೂಪಾಯಿ 50/- ಶುಲ್ಕ ನಿಗದಿಪಡಿಸಲಾಗಿದೆ.

ಈ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಕೀ ಉತ್ತರ ಹಾಗೂ ತಮ್ಮ ಪ್ರಶ್ನೆ ಪತ್ರಿಕೆಗಳನ್ನು ನೋಡಬಹುದು.

ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ