ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ನೇಮಕಾತಿಯ ಟ್ಯಾಗ್ ಮಾಡಲು ಅವಕಾಶ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ನೇಮಕಾತಿಯ ಟ್ಯಾಗ್ ಮಾಡಲು ಅವಕಾಶ
10 ಆಗಸ್ಟ್ 2019 Others
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಗ್ರೂಪ್ - ಬಿ (ತಾಂತ್ರಿಕ ) ಮತ್ತು ಗ್ರೂಪ್ - ಸಿ (ತಾಂತ್ರಿಕೇತರ ) 270 ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದ್ದು, ಒಂದೇ ಸಾಮಾನ್ಯ ಪರೀಕ್ಷೆ ಇದ್ದ ಹುದ್ದೆಗಳ ಅರ್ಜಿಯನ್ನು ಟ್ಯಾಗ್ ಮಾಡಲು ಅಭ್ಯರ್ಥಿಗಳಿಗೆ ಸೂಚಿಸಿದೆ. ಇದಕ್ಕೆ ಪ್ರತ್ಯೇಕವಾಗಿ ತಂತ್ರಾಂಶವನ್ನು ಸಿದ್ಧಪಡಿಸಿ ಮಂಡಳಿಯ ಅಧಿಕೃತ ವೆಬ್ ನಲ್ಲಿ ಒದಗಿಸಲಾಗಿದ್ದು, ಇದುವರೆಗೆ ಟ್ಯಾಗ್(Tag) ಮಾಡಿರದ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬೇಕೆಂದು ಕೋರಲಾಗಿದೆ. ಆಗಸ್ಟ್ 22 ರವರೆಗೆ ಟ್ಯಾಗ್ ಮಾಡಲು ಅವಕಾಶ ನೀಡಲಾಗಿರುತ್ತದೆ. ಒಂದೇ ಸಾಮಾನ್ಯ ಪರೀಕ್ಷೆ ಬರೆದಿರುವ ವಿವಿಧ ಹುದ್ದೆಗಳ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಟ್ಯಾಗ್ ಮಾಡದೇ ಇದ್ದಲ್ಲಿ ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಿಸಿದ ಫಲಿತಾಂಶವನ್ನೇ ಅಂತಿಮವೆಂದು ಪರಿಗಣಿಸಿ ನೇಮಕ ಪ್ರಕ್ರಿಯೆ ಮುಂದುವರಿಸಲಾಗುತ್ತದೆ. ಎಂದು ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ. ** ಈ ಕುರಿತ ಹೆಚ್ಚಿನ ವಿವರಗಳಿಗೆ ಈ ಕೆಳಗೆ ನೀಡಿರುವ BWSSB ನ ಅಧಿಕೃತ ಪ್ರಕಟಣೆಯನ್ನು ಓದಿಕೊಳ್ಳಿ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.