Indian Railway 05 ಜೂನ್ 2019 7 years ago

ಆರ್‌ಆರ್‌ಬಿ ಎಎಲ್‌ಪಿ (RRB ALP), ಟೆಕ್ನಿಷಿಯನ್ಸ್ ಹುದ್ದೆ ಫಲಿತಾಂಶ ಬಿಡುಗಡೆ: ಡೌನ್ಲೋಡ್‌ ಮಾಡಲು ಇಲ್ಲಿದೆ ವಿವರ

ಆರ್‌ಆರ್‌ಬಿ ಎಎಲ್‌ಪಿ (RRB ALP), ಟೆಕ್ನಿಷಿಯನ್ಸ್ ಹುದ್ದೆ ಫಲಿತಾಂಶ ಬಿಡುಗಡೆ: ಡೌನ್ಲೋಡ್‌ ಮಾಡಲು ಇಲ್ಲಿದೆ ವಿವರ
ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ ) ಅಸಿಸ್ಟೆಂಟ್ ಲೋಕೋ ಪೈಲಟ್‌ (ಎಎಲ್‌ಪಿ) ಹುದ್ದೆ ಹಾಗೂ ಟೆಕ್ನಿಷಿಯನ್ ನೇಮಕಾತಿ ಪರೀಕ್ಷೆಯ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್‌ ಟೆಸ್ಟ್‌ ಫಲಿತಾಂಶ ಹಾಗೂ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್‌ಆರ್‌ಬಿ ಎಎಲ್‌ಪಿ ಆಪ್ಟಿಟ್ಯೂಡ್‌ ಟೆಸ್ಟ್‌ ಫಲಿತಾಂಶ ಹಾಗೂ ಅಂಕಪಟ್ಟಿ ಸದ್ಯ ಆರ್‌ಆರ್‌ಬಿಯ ಸ್ಥಳೀಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ. ಆರ್‌ಆರ್‌ಬಿ ಎಎಲ್‌ಪಿ ಹಾಗೂ ಟೆಕ್ನಿಷಿಯನ್ಸ್ ಪರೀಕ್ಷೆ 2018ಕ್ಕೆ ಹಾಜರಾಗಿದ್ದ ಅಭ್ಯರ್ಥಿಗಳು ಸ್ಥಳೀಯ ಆರ್‌ಆರ್‌ಬಿಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಫಲಿತಾಂಶ ಹಾಗೂ ಅಂಕಗಳನ್ನು ಆನ್‌ಲೈನ್‌ನಲ್ಲಿ ಪರೀಕ್ಷಿಸಿಕೊಳ್ಳಿ ಹಾಗೂ ಡೌನ್ಲೋಡ್‌ ಮಾಡಿಕೊಳ್ಳಿ. ಅಲ್ಲದೆ, ಫಲಿತಾಂಶವನ್ನು ಡೌನ್ಲೋಡ್‌ ಮಾಡಲು ಹಾಗೂ ಅಂಕಪಟ್ಟಿಯನ್ನು ಪರಿಶೀಲಿಸಲು ಡೈರೆಕ್ಟ್ ಲಿಂಕ್ ಈ ಕೆಳಗಿದೆ ನೋಡಿ ಆರ್‌ಆರ್‌ಬಿ ಎಎಲ್‌ಪಿ ಪರೀಕ್ಷೆಯಲ್ಲಿ ಪಾಸಾದವರು ದಾಖಲೆ ಪರಿಶೀಲನೆ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು. ದಾಖಲೆ ಪರಿಶೀಲನೆ ಪಟ್ಟಿಯನ್ನು ಅಸಿಸ್ಟೆಂಟ್ ಲೋಕೋ ಪೈಲಟ್‌ ಹಾಗೂ ಟೆಕ್ನಿಷಿಯನ್‌ ಹುದ್ದೆಗಳಿಗೆ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುತ್ತದೆ. ಮೇ 10 ರಿಂದ 21 ರವರೆಗೆ ಆರ್‌ಆರ್‌ಬಿ ಎಎಲ್‌ಪಿ ಹಾಗೂ ಟೆಕ್ನಿಷಿಯನ್ಸ್‌ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಆಯೋಜಿಸಿತ್ತು.
ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.