Loading..!

ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್‌ಸಿ) ಹುದ್ದೆಗಳ 2020ರ ವೇಳಾಪಟ್ಟಿ ಪ್ರಕಟ, ಇಲ್ಲಿದೆ ಸಂಪೂರ್ಣ ವಿವರ
| Date:5 ಜೂನ್ 2019
Image not found
UPSC calendar 2020 :

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2020ರಲ್ಲಿ ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಆಯೋಗದ ವೆಬ್‌ನಲ್ಲಿ ಪ್ರಕಟಿಸಿದೆ.
ಮುಂದಿನ ವರ್ಷ ನಾಗರರಿಕ ಸೇವಾ ಪರೀಕ್ಷೆಗಳಿಗೆ (ಐಎಎಸ್‌ ಮತ್ತು ಐಎಎಸ್‌) ಫೆಬ್ರವರಿ 12ರಂದೇ ಅಧಿಸೂಚನೆ ಹೊರಡಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಮಾರ್ಚ್‌ 03 ಕೊನೆಯ ದಿನವಾಗಿರಲಿದೆ. ಪೂರ್ವಭಾವಿ ಪರೀಕ್ಷೆಯು ಮೇ 31ರಂದೇ ನಡೆಯಲಿದೆ. ಈ ವರ್ಷ ಜೂನ್‌ 2 ರಂದು ಈ ಪರೀಕ್ಷೆ ನಡೆದಿತ್ತು.
ಐಎಎಸ್‌ ಮುಖ್ಯ ಪರೀಕ್ಷೆಯು 2020ರ ಸೆಪ್ಟೆಂಬರ್‌ 18ರಿಂದ ಐದು ದಿನಗಳ ಕಾಲ ನಡೆಯಲಿದೆ. ಐಎಫ್‌ಎಸ್‌ ಮುಖ್ಯ ಪರೀಕ್ಷೆಯು ನವೆಂಬರ್‌ 22, 2020ರಿಂದ 10 ದಿನಗಳ ಕಾಲ ನಡೆಯಲಿದೆ.
ಉಳಿದಂತೆ ಎನ್‌ಡಿಎ ಮತ್ತು ಎನ್‌ಎ ಎಗ್ಸಾಂ ಮುಂದಿನ ವರ್ಷ ಏಪ್ರಿಲ್‌ 19ರಂದು ಮತ್ತು ಸೆಪ್ಟೆಂಬರ್‌ 6ರಂದು ನಡೆಯಲಿದೆ. ಇದರ ಮೊದಲ ಅಧಿಸೂಚನೆ ಜನವರಿ 8ರಂದು ಪ್ರಕಟಗೊಳ್ಳಲಿದ್ದು, ಅರ್ಜಿ ಸಲ್ಲಿಸಲು ಜನವರಿ 28 ಕೊನೆಯ ದಿನವಾಗಿರಲಿದೆ. ಎರಡನೆಯ ಅಧಿಸೂಚನೆಯು ಜೂನ್‌ 10ರಂದು ಹೊರಬೀಳಲಿದ್ದು, ಅರ್ಜಿ ಸಲ್ಲಿಸಲು ಜೂನ್‌ 30 ಕೊನೆಯ ದಿನವಾಗಿದೆ.
ಐಇಎಸ್‌/ಐಎಸ್‌ಎಸ್‌ ಪರೀಕ್ಷೆಯು ಮುಂದಿನ ವರ್ಷ ಜೂನ್‌ 26 ರಂದು ನಡೆಯಲಿದೆ. ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ(ಸಿಎಪಿಎಫ್‌) ನೇಮಕಾತಿ ಪರೀಕ್ಷೆಯು ಆಗಸ್ಟ್‌ 9ರಂದು ನಡೆಯಲಿದೆ. ಕಂಬೈನ್ಡ್‌ ಮೆಡಿಕಲ್‌ ಸವೀರ್ಸಸ್‌ ಪರೀಕ್ಷೆಯು ಜುಲೈ 19ರಂದು ನಡೆಯಲಿದೆ.
ಒಟ್ಟಾರೆ 2020ರಲ್ಲಿ ಯುಪಿಎಸ್‌ಸಿಯು 25 ಪರೀಕ್ಷೆಗಳನ್ನು ನಡೆಸಲಿದೆ. ಎಲ್ಲಾ ಪರೀಕ್ಷೆಗಳ ಸಂಪೂರ್ಣ ವೇಳಾಪಟ್ಟಿ ವೆಬ್‌ನಲ್ಲಿದೆ.
UPSC calendar 2020 :
KAS ಕನಸು ಹೊತ್ತ ಅಭ್ಯರ್ಥಿಗಳಿಗಾಗಿ ವಿವಿಧ ಪುಸ್ತಕಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ, ಇವುಗಳನ್ನು ಉತ್ತಮ ರಿಯಾಯಿತಿಯೊಂದಿಗೆ Amazon ನಿಂದ ಖರೀದಿಸಿ ಉತ್ತಮ ತಯಾರಿ ನಡೆಸಿ

Comments