Karnataka State Police
29 ಮೇ 2020
6 years ago
Published by Siddaram Halli
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಆಕಾಂಕ್ಷಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲು ರಾಜ್ಯ ಸರ್ಕಾರ ನಿರ್ಧಾರ
ರಾಜ್ಯದಲ್ಲಿ ಪೊಲೀಸ್ PSI ನೇಮಕಾತಿಗೆ ಇದ್ದ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸುವಂತೆ ಹಲವು ವರ್ಷಗಳಿಂದ ಅಭ್ಯರ್ಥಿಗಳು ಸರ್ಕಾರಕ್ಕೆ ಮನವಿ ಮಾಡುತ್ತ ಬಂದಿದ್ದರು. ಈಗ ಅವರ ಹಲವು ದಿನಗಳ ಬೇಡಿಕೆಗೆ ಜಯ ಸಿಕ್ಕಿದ್ದು, ರಾಜ್ಯ ಸರ್ಕಾರ ಅಂತಿಮವಾಗಿ ವಯೋಮಿತಿ ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ.
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 30 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಅಭ್ಯರ್ಥಿಗಳಿಗೆ 32 ವಯಸ್ಸಿಗೆ ಹೆಚ್ಚಿಸಿ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
* ಈ ನಿರ್ಧಾರವು ಸದ್ಯದ ಹಾಗೂ ಮುಂದೆ ಕರೆಯಲಾಗುವ ನೇಮಕಾತಿಗೆ ಅನ್ವಯವಾಗಲಿದೆ.
* ಪ್ರಸ್ತುತ ಅಧಿಸೂಚನೆ ಹೊರಡಿಸಿರುವ 556 ಸಿವಿಲ್ PSI ಮತ್ತು 162 ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಎಸ್‌ಐ ಮತ್ತು ವಿಶೇಷ ಮೀಸಲು ಪೊಲೀಸ್ ಎಸ್‌ಐ ಹುದ್ದೆಗಳ ನೇಮಕಾತಿಗಳಿಗೂ ಅನ್ವಯವಾಗಲಿದೆ.
Mahendra A M
30 ಮೇ 2020, 05:56 ಪೂರ್ವಾಹ್ನIt is only applicable for civil psi