KPSC ಯಿಂದ ಸಾರಿಗೆ ಇಲಾಖೆಯಲ್ಲಿನ ಮೋಟಾರ್ ವಾಹನ ನಿರೀಕ್ಷಕರು ಹುದ್ದೆಗಳ ಅರ್ಜಿ ಸಲ್ಲಿಸುವ ದಿನಾಂಕ ಮುಂದೂಡಿಕೆ

KPSC ಯಿಂದ ಸಾರಿಗೆ ಇಲಾಖೆಯಲ್ಲಿನ ಮೋಟಾರ್ ವಾಹನ ನಿರೀಕ್ಷಕರು ಹುದ್ದೆಗಳ ಅರ್ಜಿ ಸಲ್ಲಿಸುವ ದಿನಾಂಕ ಮುಂದೂಡಿಕೆ
Published by Yallamma G
25 ಏಪ್ರಿಲ್ 2024 KPSC

ಕರ್ನಾಟಕ ಲೋಕಸೇವಾ ಆಯೋಗದಿಂದ ಸಾರಿಗೆ ಇಲಾಖೆಯಲ್ಲಿನ ಗ್ರೂಪ್-ಸಿ ವೃಂದದ ಮೋಟಾರ್ ವಾಹನ ನಿರೀಕ್ಷಕರು 76 (HK 6 ಮತ್ತು non HK 70) ಹುದ್ದೆಗಳ ನೇಮಕಾತಿಗಾಗಿ 14/03/2024 ಅಧಿಸೂಚನೆಯನ್ನು ಹೊರಡಿಸಿ ಏಪ್ರಿಲ್ 22 ರಿಂದ ಮೇ 21 ರ ತನಕ ಅರ್ಜಿಸಲ್ಲಿಕೆಗೆ ಅವಕಾಶವನ್ನು ನೀಡಲಾಗಿತ್ತು. ಆದರೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ವಾಹನ ಚಾಲನಾ ಪರವಾನಿಗೆಗೆ (DL) ಸಂಬಂಧಿಸಿದಂತೆ ಅರ್ಜಿಯಲ್ಲಿ DL ಸಂಖ್ಯೆಯನ್ನು ನಮೂದಿಸಿದಾಗ DL ನ ಸಂಪೂರ್ಣ ಮಾಹಿತಿಯು Application Programming Interface (API) ತಂತ್ರಾಂಶದ ಮೂಲಕ ಅರ್ಜಿಯಲ್ಲಿ ಬರುವಂತೆ ವ್ಯವಸ್ಥೆ ಮಾಡಲಾಗುತ್ತಿದ್ದು, ತಾಂತ್ರಿಕ ಕಾರಣಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡಲಾಗಿದೆ. ಅರ್ಜಿ ಸಲ್ಲಿಸುವ ದಿನಾಂಕವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.   
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 02-05-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01-06-2024
ಶುಲ್ಕ ಪಾವತಿಸಲು ಕೊನೆಯ ದಿನಾಂಕ : 01-06-2024

* ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಈ ಕೆರಿತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. 

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.