KPSCಯಿಂದ ಸಹಾಯಕ ನಿಯಂತ್ರಕರು ಮತ್ತು ಲೆಕ್ಕಪರಿಶೋಧನಾಧಿಕಾರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ದಿನಾಂಕ ಇದೀಗ ಪ್ರಕಟ

KPSCಯಿಂದ ಸಹಾಯಕ ನಿಯಂತ್ರಕರು ಮತ್ತು ಲೆಕ್ಕಪರಿಶೋಧನಾಧಿಕಾರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ದಿನಾಂಕ ಇದೀಗ ಪ್ರಕಟ
Published by Yallamma G
23 ಏಪ್ರಿಲ್ 2024 KPSC

ಕರ್ನಾಟಕ ಲೋಕಸೇವಾ ಆಯೋಗದಿಂದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧನಾಧಿಕಾರಿ (ಹೈದರಾಬಾದ್ ಕರ್ನಾಟಕ ವೃಂದದ 15 ಮತ್ತು ಉಳಿಕೆ ಮೂಲವೃಂದದ 97) ಹುದ್ದೆಗಳ ನೇಮಕಾತಿಗಾಗಿ 01/03/2024 ರಂದು ಅಧಿಸೂಚನೆಯನ್ನು ಹೊರಡಿಸಿಲಾಗಿತ್ತು, ಸದರಿ ನೇಮಕಾತಿಗೆ ಸಂಬಂಧಿಸಿದಂತೆ ನೇಮಕಾತಿಯ ಮೊದಲನೇ ಹಂತವಾಗಿ ಪೂರ್ವಭಾವಿ (Preliminary) ಪರೀಕ್ಷೆನ್ನು ನಡೆಸಲು KPSC ಯು ಇದೀಗ ಪರೀಕ್ಷಯ ದಿನಾಂಕವನ್ನು ಪ್ರಕಟಿಸಿದೆ. ಹೈದರಾಬಾದ್ ಕರ್ನಾಟಕ ವೃಂದದ 15  ಹುದ್ದೆಗಳನ್ನು ದಿನಾಂಕ 28/07/2024 ಮತ್ತು ಉಳಿಕೆ ಮೂಲವೃಂದದ 97 ಹುದ್ದೆಗಳನ್ನು 07/07/2024 ರಂದು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ.
- ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಇಲಾಖಾ ಜಾಲತಾಣಕ್ಕೆ ಭೇಟಿ ನೀಡಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. 

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.